ಅವಳಿ ಮಕ್ಕಳ ಮೊದಲನೇ ವರ್ಷದ ಬರ್ತಡೇಗೆ ಫೋಟೋ ಹಂಚಿಕೊಂಡ ಪ್ರೀತಿ ಜಿಂಟಾ

ಪ್ರೀತಿ ಜಿಂಟಾ  ಅವರು ತಮ್ಮ ಅವಳಿ ಮಕ್ಕಳಾದ ಜೈ ಮತ್ತು ಗಿಯಾ ಅವರ ಮೊದಲನೇ ವರ್ಷದ ಬರ್ತಡೇಗೆ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡಿದ್ದ ಪ್ರೀತಿ ಜಿಂಟಾ ಶುಕ್ರವಾರ (ನವೆಂಬರ್ 11) ಅವರ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.

ಅವಳಿ ಮಕ್ಕಳ ಮೊದಲನೇ ವರ್ಷದ ಬರ್ತಡೇಗೆ ಫೋಟೋ ಹಂಚಿಕೊಂಡ ಪ್ರೀತಿ ಜಿಂಟಾ
ಪ್ರೀತಿ ಜಿಂಟಾ,ಗಿಯಾ,ಜೈ
Edited By:

Updated on: Nov 11, 2022 | 4:36 PM

ಗಿಯಾ(gia) ಫೋಟೋ ಹಂಚಿಕೊಂಡಿರುವ ಪ್ರೀತಿ ಜಿಂಟಾ,(preity zinta) ‘ನಾನು ನಿಮಗಾಗಿ ಪ್ರಾರ್ಥಿಸಿದ್ದೆ, ನಾನು ನಿನಗೆ ಹಾರೈಸಿದ್ದೆ. ಇಂದು ನಿಮಗೆ ಒಂದು ವರ್ಷವಾಗಿದೆ. ನನ್ನ ಹೃದಯ ತುಂಬಿ ಬಂದಿದೆ. ನಿಮ್ಮ ನಗು, ನಿಮ್ಮ ಬೆಚ್ಚಗಿನ ಅಪ್ಪುಗೆ ಮತ್ತು ನನ್ನ ಜೀವನದಲ್ಲಿ ನಿಮ್ಮ ಉಪಸ್ಥಿತಿ. ನನ್ನ ಪುಟ್ಟ ಗಿಯಾ ನಿನಗೆ ಜನ್ಮ ದಿನದ ಶುಭಾಶಯಗಳು. ನಾನು ನಿರೀಕ್ಷಿಸಿದ್ದೆಲ್ಲವೂ ನೀನೆ. ನಿನ್ನ ಜೀವನವೂ ಯಾವಾಗಲೂ ಸಂತೋಷದಿಂದ ತುಂಬಿರಲಿ’ ಎಂದು ಬರೆದುಕೊಂಡಿದ್ದಾರೆ.

‘ನಾನು ನಿರ್ವಹಿಸಿದ ಪಾತ್ರಗಳಲ್ಲಿ ಯಾವದೂ ನಿಮ್ಮ ತಾಯಿಗೆ ಹತ್ತಿರವಾಗುವುದಿಲ್ಲ. ನಾವು ಒಬ್ಬರಿಗೊಬ್ಬರು ತಿಳಿದಿದ್ದೇವೆ ಎಂದು ನನಗೆ ಖಾತರಿ ಇದೆ. ನಾನು ನಿನ್ನನ್ನು ಹೆಚ್ಚು ಪ್ರೀತಿಸುತ್ತೇನೆ’ ಹುಟ್ಟು ಹಬ್ಬದ ಶುಭಾಶಯಗಳು ಮೇರಿ ಜಾನ್​, ನಿನ್ನ ಮುಂದಿನ ಜೀವನವು ಖುಷಿಯಿಂದ ಕೂಡಿರಲಿ’ ಎಂದು ಜೈಗೆ ಪ್ರೀತಿ ಶುಭಕೋರಿದ್ದಾರೆ.


ಇನ್ನಷ್ಟು ಓದಿ:Preity Zinta: ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾದ ಪ್ರೀತಿ ಜಿಂಟಾ ದಂಪತಿ

ಪ್ರೀತಿ ಜಿಂಟಾ ಅವರು 2016 ರಲ್ಲಿ ಜೀನ್ ಗುಡೆನಫ್​ ಅವರನ್ನು ಮದುವೆಯಾದರು. ಈಗ ಕ್ಯಾಲಿಫೋರ್ನಿಯಾದ ಲಾಸ್​ ಏಂಜಲೀಸ್​ನಲ್ಲಿ ಅವರು ಸೆಟಲ್ ಆಗಿದ್ದಾರೆ. ಅವರು ಆಗಾಗ ಭಾರತಕ್ಕೆ ಬಂದು ಹೋಗುತ್ತಾರೆ. ಕಳೆದ ವರ್ಷ ಬಾಡಿಗೆ ತಾಯ್ತತನದ ಮೂಲಕ ಮಗು ಆಗಿದ್ದು, ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಯಿತು ಎಂದು ಅವರು ಪೋಸ್ಟ್​ ಮಾಡಿದ್ದರು.

ಪ್ರೀತಿ ಜಿಂಟಾ ಅವರು ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ‘ದಿಲ್​ ಸೇ’, ‘ಲಕ್ಷ್ಯ’, ‘ಸಲಾಮ್​ ನಮಸ್ತೆ’, ‘ಕಲ್​ ಹೋ ನಾ ಹೋ’, ‘ವೀರ್​-ಜಾರಾ’ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದ ‘ಭಯ್ಯಾಜಿ ಸೂಪರ್​ಹಿಟ್​’ ನಲ್ಲಿ ಕಾಣಿಸಿಕೊಂಡಿದ್ದರು.

ಇನ್ನಷ್ಟು ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ