ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ

ಇತ್ತೀಚಿನ ಕೆಲವು ಘಟನೆಗಳ ಬಗ್ಗೆ ಕರಣ್​ ಜೋಹರ್​ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಆ ಕುರಿತು ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಕಂಗನಾ ರಣಾವತ್​-ಕರಣ್​ ಜೋಹರ್​ ನಡುವಿನ ಜಗಳ ಜೋರಾಯ್ತು; ಪರೋಕ್ಷವಾಗಿ ಕುಟುಕಿದ ನಿರ್ಮಾಪಕ
ಕರಣ್ ಜೋಹರ್, ಕಂಗನಾ ರಣಾವತ್

Updated on: Mar 31, 2023 | 5:31 PM

ನಟಿ ಕಂಗನಾ ರಣಾವತ್​ (Priyanka Chopra) ಅವರು ಅನೇಕರ ಜೊತೆ ಕಿರಿಕ್​ ಮಾಡಿಕೊಂಡಿದ್ದಾರೆ. ಅದರಲ್ಲೂ ಬಾಲಿವುಡ್ ನಿರ್ಮಾಪಕ ಕರಣ್​ ಜೋಹರ್​ ಬಗ್ಗೆ ಅವರು ಅನೇಕ ಬಾರಿ ಬಹಿರಂಗವಾಗಿ ಕಿಡಿಕಾರಿದ್ದಿದೆ. ಹಿಂದಿ ಚಿತ್ರರಂಗದಲ್ಲಿ ಕರಣ್​ ಜೋಹರ್​ ಅವರು ನೆಪೋಟಿಸಂ ಪ್ರೋತ್ಸಾಹಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ಕಂಡರೆ ಕಂಗನಾಗೆ ಆಗುವುದಿಲ್ಲ. ಸಮಯ ಸಿಕ್ಕಾಗಲೆಲ್ಲ ಅವರು ಕರಣ್​ ಜೋಹರ್​ (Karan Johar) ವಿರುದ್ಧ ಗುಡುಗುತ್ತಾರೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಬಗ್ಗೆ ಕಂಗನಾ ವ್ಯಂಗ್ಯವಾಡಿದ್ದರು. ಈ ಎಲ್ಲ ಘಟನೆಗಳ ಬಗ್ಗೆ ಕರಣ್​ ಜೋಹರ್​ ಅವರು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಆ ಬಗ್ಗೆ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಕರಣ್​ ಜೋಹರ್​ ಅವರು ಕೆಲವು ಸ್ಟೋರಿ ಪೋಸ್ಟ್​ ಮಾಡಿದ್ದಾರೆ. ‘ವಿಮಾನ ನಿಲ್ದಾಣ ಒಂದು ರನ್​ ವೇ. ಅದು ಸುದ್ದಿಗೋಷ್ಠಿ ಮಾಡುವ ಸ್ಥಳ ಕೂಡ ಆಗಿದೆ. ಮುಂದಿನ ದಿನಗಳಲ್ಲಿ ಅದು ಟ್ರೇಲರ್​ ಲಾಂಚ್​ ಮಾಡುವ ಜಾಗವೂ ಆಗಬಹುದು’ ಎಂದು ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ. ಅವರು ಈ ರೀತಿ ಪೋಸ್ಟ್​ ಮಾಡಿರುವುದು ಕಂಗನಾ ರಣಾವತ್​ ಬಗ್ಗೆಯೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: ನೆಪೋಟಿಸಂ ಅಂದ್ರೆ ನೆನಪಾಗೋದೇ ಕರಣ್​ ಜೋಹರ್​

ಇದನ್ನೂ ಓದಿ
Kangana Ranaut: ಉಗ್ರರಿಂದ ಹತ್ಯೆಯಾದ ಕಾಶ್ಮೀರಿ ಹುಡುಗಿ ಪಾತ್ರದಲ್ಲಿ ಕಂಗನಾ? ಸೆನ್ಸೇಷನ್​ ಸೃಷ್ಟಿಸಿದೆ ಹೊಸ ಸಿನಿಮಾ ಸುದ್ದಿ
Emergency: ‘ಇಂದಿರಾ ಗಾಂಧಿ ಈ ವಿಡಿಯೋದಲ್ಲಿ ಕಂಗನಾ ರೀತಿ ಮಾಡ್ತಿದ್ದಾರೆ’: ರಾಮ್​ ಗೋಪಾಲ್​ ವರ್ಮಾ
Emergency: ಇದು ಇಂದಿರಾ ಗಾಂಧಿ ಅಲ್ಲ, ಕಂಗನಾ ರಣಾವತ್! ಗಮನ ಸೆಳೆದ ‘ಎಮರ್ಜೆನ್ಸಿ’ ಫಸ್ಟ್​ ಲುಕ್​
Kangana Ranaut: ‘ಶಿವಸೇನೆ ಹನುಮಾನ್​ ಚಾಲೀಸ ಬ್ಯಾನ್​ ಮಾಡಿದ್ರೆ ಅವರನ್ನು ಶಿವ ಕೂಡ ಕಾಪಾಡಲ್ಲ’: ಕಂಗನಾ ರಣಾವತ್​

ನಟಿ ಪ್ರಿಯಾಂಕಾ ಚೋಪ್ರಾ ಅವರು ಬಾಲಿವುಡ್​ ತೊರೆದಿದ್ದರ ಬಗ್ಗೆ ಇತ್ತೀಚೆಗೆ ಮೌನ ಮುರಿದರು. ಹಿಂದಿ ಚಿತ್ರರಂಗದ ಒಳರಾಜಕೀಯದ ಕಾರಣದಿಂದ ತಾವು ಹಾಲಿವುಡ್​ಗೆ ಹೋಗಿದ್ದಾಗಿ ಅವರು ಹೇಳಿದರು. ಅದರ ಬಗ್ಗೆ ಪ್ರತಿಕ್ರಿಯೆ ನೀಡಿದ ಕಂಗನಾ ರಣಾವತ್​ ಅವರು ನೇರವಾಗಿ ಕರಣ್​ ಜೋಹರ್​ ಕಡೆಗೆ ಕೈ ತೋರಿಸಿದರು. ಅದರ ಬಗ್ಗೆ ಪ್ರತಿಕ್ರಿಯೆ ಪಡೆಯುವ ಸಲುವಾಗಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಂಗನಾ ಅವರನ್ನು ಪಾಪರಾಜಿಗಳು ಮಾತನಾಡಿಸುವ ಪ್ರಯತ್ನ ಮಾಡಿದ್ದರು.

ಇದನ್ನೂ ಓದಿ: Karan Johar: ಐಡಿ ಕಾರ್ಡ್​ ತೋರಿಸದೇ ಏರ್​ಪೋರ್ಟ್​ ಒಳಗೆ ನುಗ್ಗಲು ಯತ್ನಿಸಿದ ಕರಣ್​ ಜೋಹರ್​; ವಿಡಿಯೋ ವೈರಲ್​

‘ನನ್ನ ಬಗ್ಗೆ ಏನಾದರೂ ಕಾಂಟ್ರವರ್ಸಿ ಇದ್ದರೆ ನೀವೆಲ್ಲ ಎಷ್ಟು ಜೋರಾಗಿ ಕೂಗಾಡುತ್ತ ಪ್ರಶ್ನೆ ಕೇಳುತ್ತೀರಿ.. ಆದರೆ ಈಗ ಮೌನವಾಗಿದ್ದೀರಿ. ನನಗೆ ಎಲ್ಲವೂ ತಿಳಿದಿದೆ’ ಎಂದು ಕಂಗನಾ ಅವರು ನಗುನಗುತ್ತಲೇ ಪಾಪರಾಜಿಗಳನ್ನು ಟೀಕೆ ಮಾಡಿದರು. ಇದೇ ಘಟನೆಯನ್ನು ಗಮನದಲ್ಲಿ ಇಟ್ಟುಕೊಂಡು ಕರಣ್​ ಜೋಹರ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಸ್ಟೋರಿ ಪೋಸ್ಟ್​ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಕರಣ್​ ಜೋಹರ್​ ಅವರು ನಿರ್ಮಾಪಕನಾಗಿ, ನಿರ್ದೇಶಕನಾಗಿ ಮಾತ್ರವಲ್ಲದೇ ನಿರೂಪಕನಾಗಿಯೂ ಫೇಮಸ್​ ಆಗಿದ್ದಾರೆ. ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಖ್ಯಾತಿ ಅವರಿಗೆ ಸಲ್ಲುತ್ತದೆ. ಶೀಘ್ರದಲ್ಲೇ ಅವರು ‘ಕಾಫಿ ವಿತ್​ ಕರಣ್​’ 8ನೇ ಸೀಸನ್​ಗೆ ಚಾಲನೆ ನೀಡುತ್ತಾರೆ ಎನ್ನಲಾಗಿದೆ. ಇದಲ್ಲದೇ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾಗೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಆ ಚಿತ್ರದಲ್ಲಿ ರಣವೀರ್​ ಸಿಂಗ್​ ಮತ್ತು ಆಲಿಯಾ ಭಟ್​ ಜೋಡಿಯಾಗಿ ನಟಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:31 pm, Fri, 31 March 23

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us