ಬಂಧನವಾಗಿ ಎರಡು ತಿಂಗಳ ಬಳಿಕ ರಾಜ್​ ಕುಂದ್ರಾಗೆ ಜಾಮೀನು ನೀಡಿದ ಮುಂಬೈ ಕೋರ್ಟ್​

| Updated By: ರಾಜೇಶ್ ದುಗ್ಗುಮನೆ

Updated on: Sep 20, 2021 | 6:05 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಪತ್ನಿ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್​ ಜಾಮೀನು ನೀಡಿದೆ.

ಬಂಧನವಾಗಿ ಎರಡು ತಿಂಗಳ ಬಳಿಕ ರಾಜ್​ ಕುಂದ್ರಾಗೆ ಜಾಮೀನು ನೀಡಿದ ಮುಂಬೈ ಕೋರ್ಟ್​
ರಾಜ್​ಕುಂದ್ರಾ
Follow us on

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಶಿಲ್ಪಾ ಶೆಟ್ಟಿ ಪತ್ನಿ ರಾಜ್​ ಕುಂದ್ರಾಗೆ ಮುಂಬೈ ಕೋರ್ಟ್​ ಜಾಮೀನು ನೀಡಿದೆ. 50 ಸಾವಿರ ಮೊತ್ತದ ಶ್ಯೂರಿಟಿ ಬಾಂಡ್​ ನೀಡಲು ಕೋರ್ಟ್​ ಆದೇಶ ನೀಡಿದೆ. ಈ ಮೂಲಕ ಅವರ ಬಂಧನದ ಎರಡು ತಿಂಗಳ ಬಳಿಕ ರಾಜ್​ ಕುಂದ್ರಾಗೆ ಜಾಮೀನು ಸಿಕ್ಕಂತಾಗಿದೆ.  ರಾಜ್​ ಕುಂದ್ರಾ ಜತೆ ರಯಾನ್​ ತೊರ್ಪೆಗೂ ಜಾಮೀನು ಸಿಕ್ಕಿದೆ.

 

ಮುಂಬೈ ಪೊಲೀಸರು ರಾಜ್ ಕುಂದ್ರಾ ಮತ್ತು ಇತರ ಆರೋಪಿಗಳ ವಿರುದ್ಧ 1,400 ಪುಟಗಳ ಆರೋಪ ಪಟ್ಟಿಯನ್ನು ತಯಾರಿಸಿ, ಅದನ್ನು ನ್ಯಾಯಾಲಯಕ್ಕೆ ಇತ್ತೀಚೆಗೆ ಸಲ್ಲಿಕೆ ಮಾಡಿದ್ದರು. ಅದರಲ್ಲಿ ನಟಿ ಶಿಲ್ಪಾ ಶೆಟ್ಟಿ ಸೇರಿ ಸಾಕಷ್ಟು ಜನರ ಹೇಳಿಕೆ ಉಲ್ಲೇಖಿಸಲಾಗಿತ್ತು.

ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ಮದುವೆ ಆಗುವುದು ಹಾಗೂ ವಿಚ್ಛೇದನ ಪಡೆಯುವುದು ದೊಡ್ಡ ವಿಚಾರವಾಗಿಯೇ ಉಳಿದಿಲ್ಲ. ಸಾಕಷ್ಟು ಸೆಲೆಬ್ರಿಟಿಗಳು ನಾನಾ ಕಾರಣ ನೀಡಿ ಡಿವೋರ್ಸ್​ ಪಡೆದ ಉದಾಹರಣೆ ಇದೆ. ಈಗ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬೀಸಿದ್ದರಿಂದ ಅವರ ಮುಂದಿರುವ ಆಯ್ಕೆ ವಿಚ್ಛೇದನವೇ ಎನ್ನುತ್ತಿವೆ ಮೂಲಗಳು. ವಿಚ್ಛೇದನ ಪಡೆದ ನಂತರದಲ್ಲಿ ಮಕ್ಕಳು ಅಮ್ಮನ ಜತೆ ಇದ್ದರೂ ತಂದೆಯನ್ನೂ ಆಗಾಗ ಭೇಟಿ ಮಾಡುತ್ತಿರುತ್ತಾರೆ. ಆದರೆ, ಶಿಲ್ಪಾ ಇದಕ್ಕೆ ಅವಕಾಶ ನೀಡದೇ ಇರಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ರಾಜ್​ ಕುಂದ್ರಾ ಗಳಿಕೆ ಮಾಡಿದ ಹಣ ಕೆಟ್ಟ ಮಾರ್ಗದ್ದು. ಹೀಗಾಗಿ, ಆ ಹಣದಿಂದ ಮಕ್ಕಳನ್ನು ದೂರ ಇಡಬೇಕು ಎನ್ನುವುದು ಅವರ ಆಲೋಚನೆ.

ರಾಜ್​ ಕುಂದ್ರಾ ವಿರುದ್ಧ ಮಾಡೆಲ್​, ನಟಿ ಶೆರ್ಲಿನ್​ ಚೋಪ್ರಾ ಗಂಭೀರ ಆರೋಪ ಮಾಡಿದ್ದರು. ಸಿನಿಮಾ ಆಫರ್​ ಕೊಡುವುದಾಗಿ ನಂಬಿಸಿ ರಾಜ್​ ಕುಂದ್ರಾ ಮೋಸ ಮಾಡಿದ್ದರು. ತಮ್ಮನ್ನು ಬೆತ್ತಲೆಯಾಗಿ ಚಿತ್ರೀಕರಿಸಲಾಗಿತ್ತು ಎಂದು ಅವರು ಆರೋಪಿಸಿದ್ದರು. ಈ ಆರೋಪದಿಂದ ರಾಜ್​ಗೆ ಮತ್ತಷ್ಟು ತೊಂದರೆ ಎದುರಾಗಿತ್ತು. ಕೊನೆಗೂ ಈಗ ಜಾಮೀನು ಸಿಕ್ಕಂತಾಗಿದೆ.

ಇದನ್ನೂ ಓದಿ: ರಾಜ್ ಕುಂದ್ರಾಗೆ ಡಿವೋರ್ಸ್​ ಕೊಡುವ ಬಗ್ಗೆ ಶಿಲ್ಪಾ ಶೆಟ್ಟಿ ಸುಳಿವು? ಇಲ್ಲಿದೆ ಹೊಸ ಅಂತ್ಯದ ಬಗ್ಗೆ ಮಾತು

Shamita Shetty: ಶಮಿತಾಗೆ ಕಿಸ್​ ಮಾಡಿ ವೆಲ್​ಕಮ್​ ಮಾಡಿದ ಶಿಲ್ಪಾ ಶೆಟ್ಟಿ

Published On - 5:40 pm, Mon, 20 September 21