ರಾಜ್​ ಕುಂದ್ರಾ ಬಂಧನಕ್ಕೆ ಕಾರಣವಾಯ್ತು ಆ ಒಂದು ಸಾಕ್ಷ್ಯ? ಹಲವು ದಿನಗಳ ನಂತರ ಹೊರಬಿತ್ತು ಸ್ಫೋಟಕ ಮಾಹಿತಿ

ರಾಜ್​ ಕುಂದ್ರಾ ಬಂಧನಕ್ಕೆ ಕಾರಣವಾಯ್ತು ಆ ಒಂದು ಸಾಕ್ಷ್ಯ? ಹಲವು ದಿನಗಳ ನಂತರ ಹೊರಬಿತ್ತು ಸ್ಫೋಟಕ ಮಾಹಿತಿ
ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

ರಾಜ್​ ಕುಂದ್ರಾ ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿದ್ದ ಸಿನಿಮಾಗಳು ನೀಲಿ ಚಿತ್ರಗಳಲ್ಲ. ಅವು ಕೇವಲ ಕಾಮೋದ್ರೇಕ ಸಿನಿಮಾಗಳಾಗಿದ್ದವು ಎಂಬುದು ರಾಜ್​ ಕುಂದ್ರಾ ಪರ ವಕೀಲರ ವಾದ. ಆದರೆ, ಪೊಲೀಸರು ಇದನ್ನು ನೀಲಿ ಚಿತ್ರ ಎಂದೇ ಕರೆದಿದ್ದಾರೆ.

TV9kannada Web Team

| Edited By: Rajesh Duggumane

Aug 02, 2021 | 4:43 PM

ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಬಂಧನಕ್ಕೆ ಒಳಗಾಗಿ ಹಲವು ದಿನಗಳು ಕಳೆದಿವೆ. ಅವರ ಬಂಧನಕ್ಕೆ ಸಂಬಂಧಿಸಿ ಪೊಲೀಸರ ಬಳಿ ಮಹತ್ವದ ಸಾಕ್ಷ್ಯ ಇದೆ ಎನ್ನಲಾಗಿದೆ. ಆದರೆ, ಅದು ಏನು ಎನ್ನುವುದು ಈವರೆಗೆ ಬಹಿರಂಗಗೊಂಡಿರಲಿಲ್ಲ. ಈಗ ಇದಕ್ಕೆ ಸರ್ಕಾರದ ಪರ ವಕೀಲರಾದ ಅರುಣಾ ಪೈ ಉತ್ತರ ನೀಡಿದ್ದಾರೆ.

ರಾಜ್​ ಕುಂದ್ರಾ ಅವರು ಹಾಟ್ ​ಶಾಟ್ಸ್​ ಮತ್ತು ಬಾಲಿ ಫೇಮ್​ ಹೆಸರಿನ ಆ್ಯಪ್​ ಮೂಲಕ ಅಶ್ಲೀಲ ಸಿನಿಮಾ ಬಿತ್ತರ ಮಾಡುತ್ತಿದ್ದರು ಎನ್ನಲಾಗಿದೆ. ‘ಈ ಎರಡು ಆ್ಯಪ್​ಗಳಲ್ಲಿದ್ದ 51 ಸಿನಿಮಾಗಳನ್ನು ಮುಂಬೈ ಕ್ರೈಮ್​ ಬ್ರ್ಯಾಂಚ್​ ವಶಕ್ಕೆ ಪಡೆದಿದೆ. ಇದರ ಜತೆಗೆ ರಾಜ್​ ಕುಂದ್ರಾ ಹಾಗೂ ಅವರ ಭಾವ ಪ್ರದೀಪ್​ ಭಕ್ಷಿ ಜತೆ ನಡೆದ ಇಮೇಲ್​ ಸಂಭಾಷಣೆ ಕೂಡ ಪೊಲೀಸರಿಗೆ ಸಿಕ್ಕಿದೆ’ ಎಂದು ಅರುಣಾ ಪೈ ತಿಳಿಸಿದ್ದಾರೆ. ಈ ಕೇಸ್​ ನಿಟ್ಟಿನಲ್ಲಿ ಇವೆರಡೂ ಸಾಕ್ಷ್ಯಗಳು ಬಹಳ ಮಹತ್ವ ಪಡೆದುಕೊಳ್ಳಲಿದೆ.

ರಾಜ್​ ಕುಂದ್ರಾ ನಿರ್ಮಾಣ ಮಾಡಿ ಪ್ರಸಾರ ಮಾಡುತ್ತಿದ್ದ ಸಿನಿಮಾಗಳು ನೀಲಿ ಚಿತ್ರಗಳಲ್ಲ. ಅವು ಕೇವಲ ಕಾಮೋದ್ರೇಕ ಸಿನಿಮಾಗಳಾಗಿದ್ದವು ಎಂಬುದು ರಾಜ್​ ಕುಂದ್ರಾ ಪರ ವಕೀಲರ ವಾದ. ಆದರೆ, ಪೊಲೀಸರು ಇದನ್ನು ನೀಲಿ ಚಿತ್ರ ಎಂದೇ ಕರೆದಿದ್ದಾರೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದನ್ನು ನ್ಯಾಯಾಲಯ ನಿರ್ಧಾರ ಮಾಡಲಿದೆ.

ಇನ್ನು, ರಾಜ್​ ಕುಂದ್ರಾ ಮತ್ತು ಇತರರ ನಡುವೆ ನಡೆದ ವಾಟ್ಸಾಪ್​ ಚಾಟ್​ ಡಿಲೀಟ್​ ಮಾಡಲಾಗಿದೆ. ರಾಜ್​ ಕುಂದ್ರಾ ಅವರ ಐಟಿ ಎಕ್ಸ್​​ಪರ್ಟ್​ ರಯಾನ್​ ಥೋರ್ಪೆ ಸಾಕ್ಷ್ಯ ನಾಶ ಮಾಡಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ವಾಟ್ಸಾಪ್​ ಚಾಟ್​ ಡಿಲೀಟ್​ ಮಾಡಿದ್ದರಲ್ಲಿ ಇವರ ಪಾತ್ರ ದೊಡ್ಡದಿದೆ ಎನ್ನಲಾಗಿದೆ.

ಈ ಮಧ್ಯೆ  ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಗೆಹನಾ ವಸಿಷ್ಟ ಅವರು ಮುಂಬೈ ಪೊಲೀಸರ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದರು. ಬಂಧನದಿಂದ ಪಾರಾಗಲು 15 ಲಕ್ಷ ರೂಪಾಯಿ ನೀಡುವಂತೆ ಮುಂಬೈ ಪೊಲೀಸರು ಬೇಡಿಕೆ ಇಟ್ಟಿದ್ದರು ಎಂದು ಗೆಹನಾ ಆರೋಪಿಸಿದ್ದರು. ಈ ಹೇಳಿಕೆ ಸಾಕಷ್ಟು ಸಂಚಲನ ಸೃಷ್ಟಿ ಮಾಡಿತ್ತು. ಸೋಮವಾರ (ಆಗಸ್ಟ್​ 2) ಶಿಲ್ಪಾ ಶೆಟ್ಟಿ ಈ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದರು.

ಇದನ್ನೂ ಓದಿ:  ‘ಸತ್ಯ ಗೊತ್ತಿಲ್ಲದೆ ಕಮೆಂಟ್​ ಮಾಡಬೇಡಿ’; ಮಕ್ಕಳಿಗಾಗಿ ಮನವಿ ಮಾಡಿಕೊಂಡ ಶಿಲ್ಪಾ ಶೆಟ್ಟಿ

Follow us on

Related Stories

Most Read Stories

Click on your DTH Provider to Add TV9 Kannada