ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಪತಿ ರಾಜ್ ಕುಂದ್ರಾ ಈಗ ಪೊಲೀಸರ ವಶದಲ್ಲಿದ್ದಾರೆ. ನೀಲಿ ಚಿತ್ರಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಎದುರಾಗಿದೆ. ಅದನ್ನು ಪುಷ್ಟೀಕರಿಸುವಂತಹ ಅನೇಕ ಸಾಕ್ಷಿಗಳು ಕೂಡ ಪೊಲೀಸರಿಗೆ ಸಿಕ್ಕಿವೆ. ರಾಜ್ ಕುಂದ್ರಾ (Raj Kundra) ಬಂಧನದ ನಂತರ ಅವರ ಕುರಿತು ಅನೇಕ ಸುದ್ದಿಗಳು ಜೀವ ಪಡೆದುಕೊಂಡಿವೆ. ಹಲವು ಉದ್ಯಮಗಳನ್ನು ನಡೆಸುತ್ತಿರುವ ಅವರ ಒಟ್ಟು ಆಸ್ತಿ (Net Worth) ಎಷ್ಟಿರಬಹುದು ಎಂಬ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ಅವರ ಶ್ರೀಮಂತಿಕೆಗೆ ಏನೂ ಕೊರತೆ ಇಲ್ಲ. ಐಷಾರಾಮಿ ಜೀವನ ನಡೆಸುತ್ತಿರುವ ಅವರು ಅನೇಕ ಮೂಲಗಳಿಂದ ಹಣ ಗಳಿಸುತ್ತಿದ್ದಾರೆ. ಅಶ್ಲೀಲ ಸಿನಿಮಾ ದಂಧೆಯಲ್ಲಿ ರಾಜ್ ಕುಂದ್ರಾ ಸಿಕ್ಕಿಬಿದ್ದ ನಂತರ ಅವರ ನೆಟ್ ವರ್ತ್ ಬಗ್ಗೆ ಪ್ರಶ್ನೆ ಎದ್ದಿದೆ. ಒಂದು ಮೂಲದ ಪ್ರಕಾರ, ಅವರು 350 ಮಿಲಿಯನ್ ಡಾಲರ್ ಹೊಂದಿದ್ದಾರೆ. ಅಂದರೆ, ಸುಮಾರು 2600 ಕೋಟಿ ರೂ.! ಇನ್ನೊಂದು ಮೂಲದ ಪ್ರಕಾರ 550 ಮಿಲಿಯನ್ ಡಾಲರ್ (4 ಸಾವಿರ ಕೋಟಿ ರೂ.) ಮೊತ್ತದ ಆಸ್ತಿಯನ್ನು ರಾಜ್ ಕುಂದ್ರಾ ಹೊಂದಿದ್ದಾರೆ.
ಇನ್ನು, ನಟಿ ಶಿಲ್ಪಾ ಶೆಟ್ಟಿ ಆದಾಯ ಕೂಡ ಭರ್ಜರಿಯಾಗಿದೆ. ಸಿನಿಮಾಗಳಿಂದ ದೂರ ಉಳಿದಿದ್ದರೂ ಕೂಡ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಒಂದು ಸಿನಿಮಾಗೆ ಅವರು 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ಅವರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಾರೆ. ರಿಯಾಲಿಟಿ ಶೋಗಳಿಗೆ ಜರ್ಡ್ ಆಗಿಯೂ ಶಿಲ್ಪಾ ಶೆಟ್ಟಿ ಕೆಲಸ ಮಾಡುತ್ತಿದ್ದು, ಅಲ್ಲಿಯೂ ಅವರಿಗೆ ಒಳ್ಳೆಯ ಸಂಭಾವನೆ ಸಿಗುತ್ತಿದೆ.
ದೇಶದ ಹಲವು ಭಾಗಗಳಲ್ಲಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಆಸ್ತಿ ಹೊಂದಿದ್ದಾರೆ. ಪ್ರತಿ ವರ್ಷ ಅಂದಾಜು 120 ಕೋಟಿ ರೂ. ಆದಾಯ ರಾಜ್ ಕುಂದ್ರಾಗೆ ಬರುತ್ತದೆ ಎನ್ನಲಾಗಿದೆ. ಐಪಿಎಲ್ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಸಹ-ಮಾಲೀಕತ್ವವನ್ನು ಈ ದಂಪತಿ ಹೊಂದಿದ್ದಾರೆ. ವಿಯಾನ್ ಇಂಡಸ್ಟ್ರೀಸ್, ಗ್ರೂಪ್ಕೋ ಡೆವೆಲಪರ್ಸ್, ಟಿಎಂಟಿ ಗ್ಲೋಬಲ್, ಜೆಎಲ್ ಸ್ಟ್ರೀಮ್ ಪ್ರೈವೇಟ್ ಲಿಮಿಡೆಟ್ ಸೇರಿದಂತೆ ಹಲವು ಉದ್ಯಮಗಳನ್ನು ರಾಜ್ ಕುಂದ್ರಾ ಹೊಂದಿದ್ದಾರೆ.
ಇದನ್ನೂ ಓದಿ:
ಬಾಲಿವುಡ್ನಷ್ಟು ದೊಡ್ಡದಾಗಿ ಪಾರ್ನ್ ಉದ್ಯಮವನ್ನು ಬೆಳೆಸಬೇಕು ಎಂಬುದು ರಾಜ್ ಕುಂದ್ರಾ ಕನಸಾಗಿತ್ತು
ಅಶ್ಲೀಲ ಸಿನಿಮಾ ದಂಧೆ: ಗಂಡನ ಅನಾಚಾರ ಬಹಿರಂಗ ಆಗೋಕೂ ಮುನ್ನ ಶಿಲ್ಪಾ ಶೆಟ್ಟಿ ಮಾಡಿದ ಪೋಸ್ಟ್ ವೈರಲ್