‘ರಾಜ ಶಿವಾಜಿ’ ಚಿತ್ರದ ಲಾಭ-ನಷ್ಟದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರಿತೇಶ್ ದೇಶ್​​ಮುಖ್

'ರಾಜ ಶಿವಾಜಿ' ಸಿನಿಮಾದ ಭರ್ಜರಿ ಗಳಿಕೆಯ ನಡುವೆ, ನಿರ್ದೇಶಕ ರಿತೇಶ್ ದೇಶ್‌ಮುಖ್ ಬಜೆಟ್ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಚಿತ್ರದ 100 ಕೋಟಿ ಬಜೆಟ್ ಹೇಳಿಕೆಗಳನ್ನು ಅಲ್ಲಗಳೆದಿರುವ ರಿತೇಶ್, ಪ್ರೇಕ್ಷಕರಿಗೆ ಸಿನಿಮಾದ ಅನುಭವವೇ ಮುಖ್ಯ, ಖರ್ಚಿನ ಲೆಕ್ಕಾಚಾರವಲ್ಲ ಎಂದಿದ್ದಾರೆ. ಕೇವಲ 8 ದಿನಗಳಲ್ಲಿ 55 ಕೋಟಿಗೂ ಹೆಚ್ಚು ಗಳಿಸಿರುವ ಈ ಸಿನಿಮಾ, ಡಿಜಿಟಲ್ ಹಕ್ಕುಗಳಿಂದಲೂ ಆದಾಯ ಗಳಿಸಿ, ನಿರ್ಮಾಪಕರಿಗೆ ಲಾಭ ತಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

‘ರಾಜ ಶಿವಾಜಿ’ ಚಿತ್ರದ ಲಾಭ-ನಷ್ಟದ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರಿತೇಶ್ ದೇಶ್​​ಮುಖ್
ರಾಜ ಶಿವಾಜಿ

Updated on: May 09, 2026 | 7:07 AM

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ರಾಜ ಶಿವಾಜಿ’ ಸಿನಿಮಾದ (Raja Shivaji) ಬಗ್ಗೆ ಈಗ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಚಿತ್ರದ ಭರ್ಜರಿ ಗಳಿಕೆಯ ನಡುವೆಯೇ, ಸಿನಿಮಾದ ಬಜೆಟ್ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ನಿರ್ದೇಶಕ ಹಾಗೂ ನಟ ರಿತೇಶ್ ದೇಶ್‌ಮುಖ್ ಈಗ ಪೂರ್ಣವಿರಾಮ ಇಟ್ಟಿದ್ದಾರೆ. ಸಿನಿಮಾ 100 ಕೋಟಿ ರೂಪಾಯಿಯಲ್ಲಿ ನಿರ್ಮಾಣ ಆಗಿದೆ ಎಂದು ಹೇಳಲಾಗಿತ್ತು. ಈ ವಿಷಯ ಪ್ರೇಕ್ಷಕನಿಗೆ ಮುಖ್ಯವಲ್ಲ ಎಂದಿದ್ದಾರೆ.

‘ರಾಜ ಶಿವಾಜಿ’ ಸಿನಿಮಾ ಬಿಡುಗಡೆಯಾದಾಗಿನಿಂದಲೂ ಇದು 100 ಕೋಟಿ ರೂಪಾಯಿ ವೆಚ್ಚದ ಸಿನಿಮಾ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಿತೇಶ್, ‘ಸಿನಿಮಾದ ಅಸಲಿ ಬಜೆಟ್ ಕೇವಲ ನಿರ್ಮಾಪಕರಿಗೆ ಮಾತ್ರ ತಿಳಿದಿರುತ್ತದೆ. ನೀವು 100 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ ಅಥವಾ 10 ಕೋಟಿ ಖರ್ಚು ಮಾಡಿ ಸಿನಿಮಾ ಮಾಡಿದರೂ, ಒಬ್ಬ ಪ್ರೇಕ್ಷಕ ಚಿತ್ರಮಂದಿರಕ್ಕೆ ಬಂದು ಟಿಕೆಟ್​ಗೆ ಎಷ್ಟು ಕೊಡಬೇಕೋ ಅಷ್ಟನ್ನೇ ಕೊಡುತ್ತಾನೆ. ಅವನಿಗೆ ಸಿನಿಮಾ ಇಷ್ಟವಾಗಬೇಕೇ ಹೊರತು, ಅದರ ಹಿಂದಿನ ಖರ್ಚಿನ ಲೆಕ್ಕಾಚಾರವಲ್ಲ’ ಎಂದಿದ್ದಾರೆ ರಿತೇಶ್.

ಇದನ್ನೂ ಓದಿ: ‘ರಾಜ ಶಿವಾಜಿ’ ಚಿತ್ರಕ್ಕೆ ಕೈ ಕೊಟ್ಟ ಹಿಂದಿ ಭಾಷಿಕರು; ಅದೃಷ್ಟ ಬದಲಿಸಿದ್ದು ಯಾರು?

‘ನೀವು ಚಿತ್ರಮಂದಿರಕ್ಕೆ 100 ಅಥವಾ 300 ರೂಪಾಯಿ ಕೊಟ್ಟು ಟಿಕೆಟ್ ಖರೀದಿಸುತ್ತೀರಿ ಅಷ್ಟೇ ನಿಮಗೆ ಮುಖ್ಯವಾಗಬೇಕು. ಸಿನಿಮಾದ ಮ್ಯಾಜಿಕ್ ಅನ್ನು ಅನುಭವಿಸಿ ಹೊರಬರಬೇಕೇ ಹೊರತು, ಅದರ ವೆಚ್ಚದ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಅಮಿತಾಭ್ ಬಚ್ಚನ್ ಅವರ ‘ಶೋಲೆ’ ಕಾಲದಲ್ಲಿ ಯಾರೂ ಬಜೆಟ್ ಬಗ್ಗೆ ಕೇಳುತ್ತಿರಲಿಲ್ಲ, ಕೇವಲ ಮನರಂಜನೆಯನ್ನಷ್ಟೇ ಬಯಸುತ್ತಿದ್ದರು’ ಎಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

8 ದಿನಗಳಲ್ಲಿ 55 ಕೋಟಿ ದಾಟಿದ ಗಳಿಕೆ

ಮೇ 1 ರಂದು ಬಿಡುಗಡೆಯಾದ ‘ರಾಜ ಶಿವಾಜಿ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪಾರುಪತ್ಯ ಮುಂದುವರಿಸಿದೆ. ಕೇವಲ 8 ದಿನಗಳಲ್ಲಿ ಸಿನಿಮಾ 55 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಚಿಕೊಂಡಿದೆ. ಚಿತ್ರಮಂದಿರದ ಗಳಿಕೆಯಷ್ಟೇ ಅಲ್ಲದೆ, ಸ್ಯಾಟಲೈಟ್ ಮತ್ತು ಒಟಿಟಿ ಹಕ್ಕುಗಳ ಮಾರಾಟದಿಂದಲೂ ಚಿತ್ರಕ್ಕೆ ದೊಡ್ಡ ಮೊತ್ತದ ಆದಾಯ ಬಂದಿದೆ. ರಿತೇಶ್ ಹೇಳುವಂತೆ ಬಜೆಟ್ 100 ಕೋಟಿಗಿಂತ ಕಡಿಮೆ ಇದ್ದಲ್ಲಿ, ಈಗಾಗಲೇ ಗಳಿಸಿರುವ 55 ಕೋಟಿ ಹಾಗೂ ಡಿಜಿಟಲ್ ಹಕ್ಕುಗಳ ಆದಾಯವನ್ನು ಸೇರಿಸಿದರೆ ನಿರ್ಮಾಪಕರು ಲಾಭವನ್ನು ಜೇಬಿಗಿಳಿಸುವುದು ಖಚಿತವಾಗಿದೆ. ಸಿನಿಮಾ ನಷ್ಟದಲ್ಲಿದೆ ಎಂದೆಲ್ಲ ವರದಿ ಬಂದಿತ್ತು. ಆದರೆ, ರಿತೇಶ್ ಹೇಳಿಕೆಯಿಂದ ಲಾಭ-ನಷ್ಟದ ಲೆಕ್ಕಾಚಾರ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us