ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಟಾಲಿವುಡ್ ನಟ ರಾಮ್ ಚರಣ್ ನಡುವೆ ಒಳ್ಳೆಯ ಗೆಳೆತನವಿದೆ. ಮುಂಬೈಗೆ ತೆರಳಿದಾಗ ರಣವೀರ್ ಸಿಂಗ್ ಅವರನ್ನು ರಾಮ್ ಚರಣ್ ಭೇಟಿ ಆಗುತ್ತಾರೆ. ಅದೇ ರೀತಿ ರಣವೀರ್ ಸಿಂಗ್ ಹೈದರಾಬಾದ್ಗೆ ಬಂದಾಗ ರಾಮ್ ಚರಣ್ ಅವರನ್ನು ಮೀಟ್ ಮಾಡುತ್ತಾರೆ. ಈಗ ರಣವೀರ್ ಸಿಂಗ್ ಅವರು ಜಾಹೀರಾತು ಶೂಟ್ಗಾಗಿ ಹೈದರಾಬಾದ್ಗೆ ಆಗಮಿಸಿದ್ದರು. ವಿಶೇಷ ಎಂದರೆ ರಾಮ್ ಚರಣ್ ಅವರು ಬಾಲಿವುಡ್ನ ಈ ಹೀರೋಗೆ ವಿಶೇಷ ಆತಿಥ್ಯ ಮಾಡಿದ್ದಾರೆ. ಇದನ್ನು ನೋಡಿ ರಣವೀರ್ ಸಖತ್ ಖುಷಿ ಪಟ್ಟಿದ್ದಾರೆ.
ರಣವೀರ್ ಅವರು ಭಾನುವಾರ (ಡಿಸೆಂಬರ್ 12) ಹೈದರಾಬಾದ್ಗೆ ಬಂದಿದ್ದರು. ಜಾಹೀರಾತು ಶೂಟ್ ಮುಗಿದ ಬಳಿಕ ರಾಮ್ ಚರಣ್ಗೆ ಸಿಕ್ಕಿದ್ದಾರೆ. ಈ ವೇಳೆ ದೀಪಿಕಾ ಪತಿಗೆ ವಿಶೇಷ ಹೈದರಾಬಾದಿ ಬಿರಿಯಾನಿ ಬಡಿಸಿದ್ದಾರೆ. ಇದು ರಾಮ್ ಚರಣ್ ಮನೆಯಲ್ಲೇ ಮಾಡಿದ ಬಿರಿಯಾನಿ ಆಗಿತ್ತು ಅನ್ನೋದು ವಿಶೇಷ. ಇದನ್ನು ಸವಿದು ರಣವೀರ್ ಸಖತ್ ಖುಷಿಯಾಗಿದ್ದಾರೆ.
ಈ ಇಬ್ಬರು ಹೀರೋಗಳ ನಡುವೆ ಒಳ್ಳೆಯ ಬಾಂಡಿಗ್ ಇದೆ. ರಾಮ್ ಚರಣ್ 15ನೇ ಚಿತ್ರಕ್ಕೆ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾಕ್ಕೆ ಕ್ಲ್ಯಾಪ್ ಮಾಡೋಕೆ ರಣವೀರ್ ಸಿಂಗ್ ಅವರು ಮುಂಬೈನಿಂದ ಹೈದರಾಬಾದ್ಗೆ ಆಗಮಿಸಿದ್ದರು. ಇದು ರಾಮ್ಗೆ ಖುಷಿ ನೀಡಿತ್ತು. ಇದನ್ನು ನೆನಪಿನಲ್ಲಿ ಇಟ್ಟುಕೊಂಡು ರಾಮ್ ಚರಣ್ ಅವರು ರಣವೀರ್ಗೆ ಬಿರ್ಯಾನಿ ಬಡಿಸಿದ್ದಾರೆ.
ರಾಮ್ ಚರಣ್ ಹಾಗೂ ಸಲ್ಮಾನ್ ಖಾನ್ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ. ಸಲ್ಲು ಹೈದರಾಬಾದ್ಗೆ ಬಂದಾಗ ರಾಮ್ ಚರಣ್ ಬಿರ್ಯಾನಿ ಕಳುಹಿಸಿದ್ದರು. ರಾಮ್ ಚರಣ್ ನಟನೆಯ ‘ಜಂಜೀರ್’ ಸಿನಿಮಾ ರಿಲೀಸ್ ಆಗುವಾಗ ರಾಮ್ ಚರಣ್ ಬಗ್ಗೆ ಸಲ್ಮಾನ್ ಖಾನ್ ಹೆಚ್ಚಿನ ಕಾಳಜಿ ತೋರಿದ್ದರು. ‘ಜಂಜೀರ್’ ಇದು ರಾಮ್ ಚರಣ್ ನಟನೆಯ ಮೊದಲ ಹಿಂದಿ ಸಿನಿಮಾ.
ಇದನ್ನೂ ಓದಿ: ಪ್ಯಾನ್ ಇಂಡಿಯಾ ಚಿತ್ರಗಳಿಂದ ಏರುತ್ತಲೇ ಇದೆ ಟಾಲಿವುಡ್ ನಟರ ಸಂಭಾವನೆ; ಪ್ರಭಾಸ್, ರಾಮ್ ಚರಣ್ ಪಡೆಯೋದು ಇಷ್ಟೊಂದಾ?
ಆಲಿಯಾಗೆ ಲಿಪ್ ಲಾಕ್ ಮಾಡಲ್ಲ ಎಂದು ದೀಪಿಕಾಗೆ ಪ್ರಾಮಿಸ್ ಮಾಡಿದ ರಣವೀರ್ ಸಿಂಗ್? ಏನಿದು ಕಥೆ?
Published On - 7:00 am, Mon, 13 December 21