ನಟ ರಣವೀರ್ ಸಿಂಗ್ (Ranveer Singh) ಅವರು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅದಕ್ಕೆಲ್ಲ ಕಾರಣ ಆಗಿರುವುದು ಅವರ ಬೆತ್ತಲೆ ಫೋಟೋಶೂಟ್ (Ranveer Singh Photoshoot). ಜನಪ್ರಿಯ ‘ಪೇಪರ್’ ಮ್ಯಾಗಜಿನ್ ಸಲುವಾಗಿ ಅವರು ಸಂಪೂರ್ಣ ನಗ್ನವಾಗಿ ಪೋಸ್ ನೀಡಿದ್ದಾರೆ. ಆ ಪೋಟೋಗಳು ಸಖತ್ ವೈರಲ್ ಆಗಿವೆ. ಅದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗಿದೆ. ಇನ್ನೂ ಕೆಲವರು ರಣವೀರ್ ಸಿಂಗ್ ಪರವಾಗಿ ವಾದ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಕೂಡ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಯಾವಾಗಲೂ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಅವರು ಈಗ ರಣವೀರ್ ಸಿಂಗ್ ಕುರಿತು ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಪ್ರತಿ ಬಾರಿ ಪೋಸ್ಟ್ ಮಾಡುವಾಗಲೂ ಅವರು ನಗ್ನ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಇದನ್ನು ಕಂಡು ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ನಗ್ನ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ರಣವೀರ್ ಸಿಂಗ್ ಅವರು ಮಹಿಳೆಯರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಆದರೆ ಆ ಮಾತನ್ನು ರಾಮ್ ಗೋಪಾಲ್ ವರ್ಮಾ ತಳ್ಳಿಹಾಕಿದ್ದಾರೆ. ‘ಮತ ಚಲಾಯಿಸಲು ಮಹಿಳೆಯರು ದಶಕಗಳ ಕಾಲ ಕಾಯಬೇಕಾಯಿತು. ಅದೇ ರೀತಿ ಪುರುಷನ ಬೆತ್ತಲೆ ಫೋಟೋವನ್ನು ನೋಡಲು ಮಹಿಳೆಯರು ಯಾಕೆ ಕಾಯಬೇಕು? ಗಂಡಸರು ದಶಕಗಳಿಂದಲೂ ಮಹಿಳೆಯರ ಬೆತ್ತಲೆ ಫೋಟೋ ನೋಡುತ್ತಿದ್ದಾರೆ. ರಣವೀರ್ ಸಿಂಗ್ ಅವರಿಂದ ಸ್ತ್ರೀಯರ ಭಾವನೆಗೆ ಧಕ್ಕೆ ಆಗಿದೆ ಎಂಬ ಆರೋಪ ಇದೆ. ಆದರೆ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ವ್ಯಕ್ತಿಯಾಗಿ ರಣವೀರ್ ಸಿಂಗ್ ಅವರನ್ನು ನಾನು ನೋಡುತ್ತೇನೆ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಮಹಿಳೆಯರು ಪುರುಷರ ನಗ್ನ ಫೋಟೋವನ್ನು ನೋಡಿ ಖುಷಿಪಡುತ್ತಾರೋ ಇಲ್ಲವೋ ಎಂಬ ಬಗ್ಗೆ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟರ್ನಲ್ಲಿ ಜನಾಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಅವರು ಪೋಲ್ ಹಾಕಿದ್ದು, ಶೀಘ್ರದಲ್ಲೇ ಅದರ ಫಲಿತಾಂಶವನ್ನು ಹಂಚಿಕೊಳ್ಳುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಅವರು ರಣವೀರ್ ಸಿಂಗ್ ನಗ್ನ ಫೋಟೋಗಳನ್ನು ಇಟ್ಟುಕೊಂಡು ಅನೇಕ ವಿಚಾರಗಳನ್ನು ಮಂಡಿಸುತ್ತಿದ್ದಾರೆ.
Like women had to wait for decades to vote, why should they still wait to see a Man’s nude pics when men were watching women’s nude pics for decades ..I see @RanveerOfficial as a torch bearer for women’s rights in contrast to the allegation of him hurting women’s sentiments? pic.twitter.com/SrSvyn9yDY
— Ram Gopal Varma (@RGVzoomin) July 26, 2022
ರಾಜಕೀಯ, ಸಿನಿಮಾ ಮುಂತಾದ ವಿಷಯಗಳ ಬಗ್ಗೆ ರಾಮ್ ಗೋಪಾಲ್ ಅವರು ಪದೇ ಪದೇ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾರೆ. ಕೆಲವರು ಅವರ ಮಾತನ್ನು ಗಂಭೀರವಾಗಿ ಪರಿಗಣಿಸಿದರೆ, ಇನ್ನೂ ಕೆಲವರು ನಿರ್ಲಕ್ಷ್ಯ ಮಾಡುತ್ತಾರೆ. ಕೆಲವೇ ದಿನಗಳ ಹಿಂದೆ ದ್ರೌಪದಿ ಮುರ್ಮು ಕುರಿತು ಆರ್ಜಿವಿ ಮಾಡಿದ ಟ್ವೀಟ್ನಿಂದ ವಿವಾದ ಸೃಷ್ಟಿ ಆಗಿತ್ತು.
Published On - 10:17 am, Wed, 27 July 22