ಹ್ಯಾಟ್ರಿಕ್ ಸೋಲು ಕಂಡ ಅಕ್ಷಯ್​​ಗೆ ಈಗ ಕಾನೂನು ಕಂಟಕ; ಅಕ್ಕಿಗೆ ಬಂತು ನೋಟಿಸ್

| Updated By: ರಾಜೇಶ್ ದುಗ್ಗುಮನೆ

Updated on: Aug 29, 2022 | 10:48 PM

ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ‘ರಾಮ ಸೇತು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಅಕ್ಷಯ್ ಕುಮಾರ್ ಹಾಗೂ ಚಿತ್ರದ 8 ಮಂದಿಗೆ ನೋಟಿಸ್ ಕಳುಹಿಸಿದ್ದಾರೆ.

ಹ್ಯಾಟ್ರಿಕ್ ಸೋಲು ಕಂಡ ಅಕ್ಷಯ್​​ಗೆ ಈಗ ಕಾನೂನು ಕಂಟಕ; ಅಕ್ಕಿಗೆ ಬಂತು ನೋಟಿಸ್
ಅಕ್ಷಯ್
Follow us on

ಅಕ್ಷಯ್ ಕುಮಾರ್​ಗೆ (Akshay Kumar) ಇತ್ತೀಚೆಗೆ ವಿಘ್ನಗಳೇ ಮುಗಿಯುತ್ತಿಲ್ಲ. ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಕಾಣುವ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಸೊರಗುತ್ತಿವೆ. ತಂಬಾಕು ಜಾಹೀರಾತಿನಲ್ಲಿ ನಟಿಸಿದ್ದ ಕಾರಣಕ್ಕೆ ಅವರು ಸಾಕಷ್ಟು ಟೀಕೆ ಎದುರಿಸಿದರು. ನಂತರ ಆ ಜಾಹೀರಾತಿನಿಂದಲೇ ಹೊರ ಬಂದರು. ಇತ್ತೀಚೆಗೆ ತೆರೆಗೆ ಬಂದ ಅವರ ನಟನೆಯ ‘ರಕ್ಷಾ ಬಂಧನ್’ ಸಿನಿಮಾ (Raksha Bandhan) ಕೂಡ ಸೋಲು ಕಂಡಿತು. ಈಗ ಅವರ ಹೊಸ ಸಿನಿಮಾಗೆ ಕಾನೂನು ತೊಡಕು ಉಂಟಾಗಿದೆ. ಇದು ಗಂಭೀರ ಸ್ವರೂಪ ಪಡೆದುಕೊಡರೆ ಸಿನಿಮಾ ರಿಲೀಸ್​​ಗೂ ಅಡಚಣೆ ಉಂಟಾಗಬಹುದು.

ಅಕ್ಷಯ್ ಕುಮಾರ್, ಜಾಕ್ವೆಲಿನ್ ಫರ್ನಾಂಡಿಸ್ ಮೊದಲಾದವರು ‘ರಾಮ್ ಸೇತು’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಅಕ್ಷಯ್ ಕುಮಾರ್ ಹಾಗೂ ಚಿತ್ರದ 8 ಮಂದಿಗೆ ನೋಟಿಸ್ ಕಳುಹಿಸಿದ್ದಾರೆ. ವಿಷಯವನ್ನು ತಿರುಚಿದ ಆರೋಪ ಸಿನಿಮಾ ತಂಡದ ಮೇಲೆ ಬಂದಿದೆ.

‘ಮುಂಬೈ ಸಿನಿಮಾ (ಬಾಲಿವುಡ್ ಚಿತ್ರರಂಗ) ಮಂದಿ ಸುಳ್ಳು ಹೇಳುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಹೀಗಾಗಿ, ಅವರಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಕಲಿಸಬೇಕಿದೆ. ರಾಮ ಸೇತು ವಿಷಯವನ್ನು ತಿರುಚಿದ್ದಕ್ಕಾಗಿ ನನ್ನ ವಕೀಲರ ಮೂಲಕ 8 ಜನರ ವಿರುದ್ಧ ನೋಟಿಸ್ ಜಾರಿ ಮಾಡಿದ್ದೇನೆ’ ಎಂದಿದ್ದಾರೆ ಸುಬ್ರಮಣಿಯನ್ ಸ್ವಾಮಿ.

ಇದನ್ನೂ ಓದಿ
ಅಕ್ಷಯ್​ ಕುಮಾರ್​ಗೆ 3ನೇ ಸೋಲು; ಭಾರತ ಬಿಟ್ಟು ಕೆನಡಾಗೆ ಪಲಾಯನ ಮಾಡುವ ಪ್ಲ್ಯಾನ್​ ನೆನಪಿಸಿದ ನೆಟ್ಟಿಗರು
Akshay Kumar: ಸೋದರಿಯನ್ನು ನೆನೆದು ಎಲ್ಲರ ಎದುರು ಕಣ್ಣೀರು ಹಾಕಿದ ಅಕ್ಷಯ್​ ಕುಮಾರ್​; ವಿಡಿಯೋ ವೈರಲ್​
Akshay Kumar: ಅತಿ ಹೆಚ್ಚು ಟ್ಯಾಕ್ಸ್​ ಪಾವತಿಸಿದ ಅಕ್ಷಯ್​ ಕುಮಾರ್​; ಆದಾಯ ತೆರಿಗೆ ಇಲಾಖೆಯಿಂದ ಮೆಚ್ಚುಗೆ ಪತ್ರ
Akshay Kumar: ರಾಜಕೀಯಕ್ಕೆ ಬರುತ್ತಾರಾ ಅಕ್ಷಯ್​ ಕುಮಾರ್​? ನೇರ ಪ್ರಶ್ನೆಗೆ ಉತ್ತರಿಸಿದ ‘ಕಿಲಾಡಿ’ ನಟ

ಸುಬ್ರಮಣಿಯನ್ ಸ್ವಾಮಿ ಪರ ವಕೀಲ ಸತ್ಯ ಸಬರ್​ವಾಲ್ ಅವರು ಎಎನ್​ಐ ಜತೆ ಈ ಬಗ್ಗೆ ಮಾತನಾಡಿದ್ದಾರೆ. 2007ರಲ್ಲಿ ನನ್ನ ಕಕ್ಷಿದಾರರು (ಸುಬ್ರಮಣಿಯನ್ ಸ್ವಾಮಿ) ರಾಮಸೇತುವಿನ ಸಂರಕ್ಷಣೆಗಾಗಿ ಸುಪ್ರೀಂಕೋರ್ಟ್‌ನಲ್ಲಿ ಯಶಸ್ವಿಯಾಗಿ ವಾದ ಮಂಡಿಸಿದ್ದರು. ರಾಮಸೇತುವನ್ನು ಛಿದ್ರಗೊಳಿಸುವ ಭಾರತ ಸರ್ಕಾರದ ಸೇತು ಸಮುದ್ರಂ ಯೋಜನೆಯನ್ನು ವಿರೋಧಿಸಿದ್ದರು. ರಾಮ ಸೇತುವನ್ನು ಕೆಡವುವ ಅಥವಾ ಹಾನಿ ಮಾಡುವ ಯಾವುದೇ ಯೋಜನೆ ಕೈಗೊಳ್ಳಬಾರದು ಎಂದು ತಡೆಯಾಜ್ಞೆ ನೀಡಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು’ ಎಂದು ಅವರು ಹೇಳಿದ್ದಾರೆ.

‘ರಾಮ್ ಸೇತು ಸಿನಿಮಾ ಅಕ್ಟೋಬರ್ 24ರಂದು ರಿಲೀಸ್ ಆಗಲು ರೆಡಿ ಇದೆ. ಈ ಚಿತ್ರದಲ್ಲಿ ಕೆಲ ವಿಚಾರಗಳನ್ನು ತಪ್ಪಾಗಿ ತೋರಿಸಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಚಿತ್ರದ ಸ್ಕ್ರಿಪ್ಟ್​ಅನ್ನು ಸುಬ್ರಮಣಿಯನ್ ಸ್ವಾಮಿ ಅವರಿಗೆ ನೀಡಬೇಕು. ಸಿನಿಮಾ ರಿಲೀಸ್​ಗೂ ಮೊದಲೇ ಚಿತ್ರವನ್ನು ಅವರಿಗೆ ತೋರಿಸಬೇಕು’ ಎಂದು ನೋಟಿಸ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ‘ಊ ಅಂಟಾವಾ ಮಾವ..’ ಎಂದು ಸಖತ್ ಆಗಿ ಸ್ಟೆಪ್ ಹಾಕಿದ ಸಮಂತಾ-ಅಕ್ಷಯ್ ಕುಮಾರ್

‘ರಾಮ್ ಸೇತು’ ಸಿನಿಮಾದಲ್ಲಿ ರಾಮ ಸೇತು ನಿಜವೋ ಅಥವಾ ಪುರಾಣವೋ ಎಂಬ ವಿಚಾರವನ್ನು ಹೇಳಲಾಗುತ್ತಿದೆ ಎನ್ನಲಾಗುತ್ತಿದೆ. ಅಭಿಷೇಕ್ ಶರ್ಮಾ ಅವರು ಇದನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಅಕ್ಷಯ್ ಕುಮಾರ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.