Amitabh Bachchan: ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿರುವ ಅಮಿತಾಭ್​ ಬಚ್ಚನ್​; ಆದರೂ ಕಾಡುತ್ತಿದೆ ದೊಡ್ಡ ಚಿಂತೆ

Corona Virus: ‘ಕೆಲಸ ಮಾಡುವ ಜಾಗದಲ್ಲಿ ನನ್ನ ಕೊರತೆಗಳನ್ನು ಸಹಿಸಿಕೊಳ್ತಾರಾ? ಇಂಥ ಹಲವು ವಿಷಯಗಳು ಇವೆ’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದಾರೆ.

Amitabh Bachchan: ಕೊವಿಡ್​ನಿಂದ ಚೇತರಿಸಿಕೊಳ್ಳುತ್ತಿರುವ ಅಮಿತಾಭ್​ ಬಚ್ಚನ್​; ಆದರೂ ಕಾಡುತ್ತಿದೆ ದೊಡ್ಡ ಚಿಂತೆ
ಅಮಿತಾಭ್ ಬಚ್ಚನ್
Follow us
TV9 Web
| Updated By: ಮದನ್​ ಕುಮಾರ್​

Updated on:Aug 30, 2022 | 11:40 AM

ಬಾಲಿವುಡ್​ ಬಿಗ್​-ಬಿ ಅಮಿತಾಭ್​ ಬಚ್ಚನ್​ (Amitabh Bachchan) ಅವರಿಗೆ ಕೊರೊನಾ ವೈರಸ್​ ತಗುಲಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ. ಈಗ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹಲವಾರ ಸಿನಿಮಾ, ಜಾಹೀರಾತು, ಕಿರುತೆರೆ ಕಾರ್ಯಕ್ರಮಗಳಲ್ಲಿ ಬ್ಯುಸಿ ಆಗಿದ್ದ ಅಮಿತಾಭ್​ ಬಚ್ಚನ್​ ಅವರು ಈಗ ಎಲ್ಲವನ್ನೂ ಬಿಟ್ಟು ಐಸೊಲೇಟ್​ (Isolate) ಆಗಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರು ಮತ್ತೆ ಸಹಜ ಜೀವನಕ್ರಮಕ್ಕೆ ಮರಳಲಿದ್ದಾರೆ. ಆದರೂ ಕೂಡ ಈ ಸಂದರ್ಭದಲ್ಲಿ ಅವರಿಗೆ ಚಿಂತೆ ಕಾಡುತ್ತಿದೆ. ಆ ಕುರಿತು ತಮ್ಮ ಬ್ಲಾಗ್​ನಲ್ಲಿ ಅವರು ಬರೆದುಕೊಂಡಿದ್ದಾರೆ. ಕೊವಿಡ್ (Covid 19)​ ಸಂದರ್ಭದಲ್ಲಿ ತಮ್ಮನ್ನು ಚಿಂತೆಗೆ ಒಳಗಾಗುವಂತೆ ಮಾಡಿರುವ ವಿಷಯಗಳ ಬಗ್ಗೆ ಅವರು ವಿವರಣೆ ನೀಡಿದ್ದಾರೆ.

‘ಐಸೊಲೇಷನ್​ನಲ್ಲಿ ದಿನಗಳನ್ನು ಕಳೆಯುತ್ತಿದ್ದೇನೆ. ಮಾಮೂಲಿ ದಿನಗಳಿಗಿಂತಲೂ ಐಸೊಲೇಷನ್ ತುಂಬ ಭಿನ್ನವಾಗಿರುತ್ತದೆ. ಅದಕ್ಕೆ ಮನುಷ್ಯ ಹೊಂದಿಕೊಳ್ಳುತ್ತಾನೆ. ಮತ್ತೆ ದಿನನಿತ್ಯದ ಕೆಲಸ ಶುರುವಾದಾಗ ಆತಂಕ ಉಂಟಾಗುತ್ತದೆ. ಪರಿಸ್ಥಿತಿ ಮೊದಲಿನಂತೆಯೇ ಇರುತ್ತಾ? ಅದನ್ನು ಎದುರಿಸಲು ನಾನು ಶಕ್ತನಾಗಿದ್ದೇನಾ? ನನ್ನಲ್ಲಿ ಕೊರತೆಗಳು ಇರುತ್ತವಾ? ಅದನ್ನು ನಾನು ಹೇಗೆ ನಿಭಾಯಿಸುತ್ತೇನೆ? ಕೆಲಸ ಮಾಡುವ ಜಾಗದಲ್ಲಿ ನನ್ನ ಕೊರತೆಗಳನ್ನು ಸಹಿಸಿಕೊಳ್ತಾರಾ? ಇಂಥ ಹಲವು ವಿಷಯಗಳು ಇವೆ’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದಾರೆ.

ಅಮಿತಾಭ್​ ಬಚ್ಚನ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ಪ್ರತಿದಿನದ ಆಗುಹೋಗುಗಳ ಬಗ್ಗೆ ಅವರು ಟ್ವಿಟರ್​ ಮೂಲಕ ಅಭಿಮಾನಿಗಳಿಗೆ ಅಪ್​ಡೇಟ್​ ನೀಡುತ್ತಾರೆ. ತಮಗೆ ಕೊರೊನಾ ಪಾಸಿಟಿವ್​ ಆದ ವಿಷಯವನ್ನು ಅವರು ಇತ್ತೀಚೆಗೆ ತಿಳಿಸಿದ್ದರು. ‘ಈಗತಾನೇ ನನಗೆ ಕೊವಿಡ್​ ಪಾಸಿಟಿವ್​ ಆಗಿದೆ. ನನ್ನ ಸುತ್ತಮುತ್ತ ಇದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಅಮಿತಾಭ್ ಬಚ್ಚನ್​ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ
Image
ಸಿದ್ದಗಂಗಾ ಶ್ರೀಗಳ ಪಾತ್ರದಲ್ಲಿ ಅಮಿತಾಭ್ ಬಚ್ಚನ್​?; ಸಿದ್ಧವಾಗುತ್ತಿದೆ ಮಿನಿ ಸಿನಿ ಸೀರಿಸ್​
Image
ಅಮಿತಾಭ್​ ಬಚ್ಚನ್​ ಸಿನಿಮಾಗೆ ತಡೆಕೋರಿ ಅರ್ಜಿ ಸಲ್ಲಿಸಿದ ವ್ಯಕ್ತಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿದ ಕೋರ್ಟ್​
Image
79ರ ಪ್ರಾಯದ ಅಮಿತಾಭ್​ ಆರೋಗ್ಯದ ಬಗ್ಗೆ ಮೂಡಿದೆ ಆತಂಕ; ಒಂದೇ ಟ್ವೀಟ್​ನಿಂದ ಗಾಬರಿಗೊಳಿಸಿದ ಬಿಗ್​ ಬಿ
Image
ಅಮಿತಾಭ್​ ಬಚ್ಚನ್​ ವ್ಯಕ್ತಿತ್ವ ಎಂಥದ್ದು? ಇಂಚಿಂಚು ವಿವರಿಸಿದ ರಶ್ಮಿಕಾ ಮಂದಣ್ಣ

ಅಮಿತಾಭ್​ ಬಚ್ಚನ್ ಅವರಿಗೆ ಕೊವಿಡ್​ ಪಾಸಿಟಿವ್​ ಆಗಿದ್ದು ಇದೇ ಮೊದಲೇನಲ್ಲ. 2020ರಲ್ಲಿ ಅವರು ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಇಡೀ ಕುಟುಂಬಕ್ಕೆ ವೈರಸ್​ ಕಾಟ ನೀಡಿತ್ತು. ಹಲವು ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಈಗ ಮತ್ತೆ ಕೊವಿಡ್​ ವಿರುದ್ಧ ಅವರು ಹೋರಾಡುತ್ತಿದ್ದಾರೆ. ಅಮಿತಾಭ್ ಬಚ್ಚನ್​ ಅವರಿಗೆ ಈಗ 79 ವರ್ಷ ವಯಸ್ಸು. ಹಾಗಾಗಿ ಪ್ರತಿ ಬಾರಿ ಅವರ ಅನಾರೋಗ್ಯದ ಬಗ್ಗೆ ಸುದ್ದಿ ಕೇಳಿಬಂದಾಗ ಅಭಿಮಾನಿಗಳು ಆತಂಕಕ್ಕೆ ಒಳಗಾಗುತ್ತಾರೆ.

ಈ ವಯಸ್ಸಿನಲ್ಲೂ ಅಮಿತಾಭ್​ ಬಚ್ಚನ್​ ಅವರ ಉತ್ಸಾಹ ಕುಂದಿಲ್ಲ. ಹದಿಹರೆಯದ ಯುವಕನಂತೆ ಅವರು ಕೆಲಸ ಮಾಡುತ್ತಾರೆ. ಚಿತ್ರರಂಗಕ್ಕೆ ಕಾಲಿಟ್ಟು ಹಲವು ದಶಕಗಳು ಕಳೆದಿದ್ದರೂ ಕೂಡ ಅವರ ಚಾರ್ಮ್​ ಕಡಿಮೆ ಆಗಿಲ್ಲ. ಈಗಲೂ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಹೊಸ ಹೊಸ ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಲೇ ಇವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:40 am, Tue, 30 August 22