‘ರಾಮಾಯಣ’ ಅಡ್ವಾನ್ಸ್ ಬುಕಿಂಗ್: ನೂರು ಕೋಟಿ ದಾಟಿದ ಮುಂಗಡ ಗಳಿಕೆ

‘ರಾಮಾಯಣ’ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಈ ಚಿತ್ರವು ಮುಂಗಡ ಟಿಕೆಟ್ ಮಾರಾಟದಲ್ಲಿಯೇ 100 ಕೋಟಿ ರೂ.ಗಳ ಗಡಿ ದಾಟಿ ಸಾಗುತ್ತಿದೆ. ಸಿನಿಮಾ ರಿಲೀಸ್​​ಗೆ ಮುಂಚೆ ಮುಂಗಡ ಟಿಕೆಟ್​ ನಿಂದಲೇ 100 ಕೋಟಿ ಗಳಿಕೆ ಕಂಡಿರವ ಸಿನಿಮಾಗಳು ಬೆರಳೆಣಿಯಷ್ಟಿದ್ದು, ‘ರಾಮಾಯಣ’ ಸಿನಿಮಾ ಸಹ ಆ ಪಟ್ಟಿ ಸೇರಿಕೊಂಡಿದೆ.

‘ರಾಮಾಯಣ’ ಅಡ್ವಾನ್ಸ್ ಬುಕಿಂಗ್: ನೂರು ಕೋಟಿ ದಾಟಿದ ಮುಂಗಡ ಗಳಿಕೆ
ರಾಮಾಯಣ

Updated on: Nov 03, 2026 | 4:15 PM

ಮುಖ್ಯಾಂಶಗಳು

  • ‘ರಾಮಾಯಣ’ ಸಿನಿಮಾದ ಅಡ್ವಾನ್ಸ್ ಬುಕಿಂಗ್
  • ‘ರಾಮಾಯಣ’ ಸಿನಿಮಾ ಮುಂಗಡ ಬುಕಿಂಗ್
  • ‘ರಾಮಾಯಣ’ 100 ಕೋಟಿಗೂ ಹೆಚ್ಚು ಗಳಿಸಿದೆ

ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರವು ಬಿಡುಗಡೆಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಹೊಸ ದಾಖಲೆ ಬರೆದಿದೆ. ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಂತೆ, ಈ ಚಿತ್ರವು ಮುಂಗಡ ಟಿಕೆಟ್ ಮಾರಾಟದಲ್ಲಿಯೇ 100 ಕೋಟಿ ರೂ.ಗಳ ಗಡಿ ದಾಟಿ ಸಾಗುತ್ತಿದೆ. ಸಿನಿಮಾ ರಿಲೀಸ್​​ಗೆ ಮುಂಚೆ ಮುಂಗಡ ಟಿಕೆಟ್​ ನಿಂದಲೇ 100 ಕೋಟಿ ಗಳಿಕೆ ಕಂಡಿರವ ಸಿನಿಮಾಗಳು ಬೆರಳೆಣಿಯಷ್ಟಿದ್ದು, ‘ರಾಮಾಯಣ’ ಸಿನಿಮಾ ಸಹ ಆ ಪಟ್ಟಿ ಸೇರಿಕೊಂಡಿದೆ.

ನವೆಂಬರ್ 5ರಂದು ‘ರಾಮಾಯಣ’ ಸಿನಿಮಾ ರಿಲೀಸ್ ಆಗಲಿದ್ದು, ಸಿನಿಮಾದ ಅಡ್ವಾನ್ಸ್ ಬುಕಿಂಗ್ ದಸರಾ ಹಬ್ಬದಂದೇ ಆರಂಭ ಆಗಿತ್ತು. 15 ದಿನಗಳ ಮುಂಚಿತವಾಗಿ ‘ರಾಮಾಯಣ‘ ಚಿತ್ರದ ಮುಂಗಡ ಬುಕಿಂಗ್ ಆರಂಭವಾಗಿದ್ದು ಸಿನಿಮಾಕ್ಕೆ ದೊಡ್ಡ ಸಹಾಯ ಆಗಿದೆ. ಆರಂಭದ ಕೆಲ ದಿನಗಳು ಸಿನಿಮಾದ ಮುಂಗಡ ಬುಕಿಂಗ್ ತುಸು ಮಂದಗತಿಯಲ್ಲೇ ಸಾಗಿತ್ತು. ಆದರೆ ದಿನಗಳು ಕಳೆದಂತೆ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಅದ್ಧೂರಿಯಾಗಿ ಆಗುತ್ತಿದೆ. ಆರಂಭದಲ್ಲಿ ಕೇವಲ ಮುಂಬೈ, ದೆಹಲಿ ಅಂಥಹಾ ಪ್ರದೇಶಗಳಲ್ಲಿ ಮಾತ್ರ ಮುಂಗಡ ಬುಕಿಂಗ್ ಓಪನ್ ಮಾಡಲಾಗಿತ್ತು. ಅದೂ ಸೀಮಿತ ಸ್ಕ್ರೀನ್​​ಗಳಿಗೆ, ಜೊತೆಗೆ ಹೆಚ್ಚಿನ ಸಿಂಗಲ್-ಸ್ಕ್ರೀನ್ ಮತ್ತು ಸಣ್ಣ ಕೇಂದ್ರಗಳು ಕಳೆದ ವಾರದವರೆಗೆ ಮುಂಗಡ ಬುಕಿಂಗ್ ತೆರೆದಿರಲಿಲ್ಲ. ಚಿತ್ರದ ವಿತರಕರಾದ ಧರ್ಮ ಪ್ರೊಡಕ್ಷನ್ಸ್‌ ಹೆಚ್ಚಿನ ಆದಾಯದ ಪಾಲಿನ ಕುರಿತು ಪ್ರದರ್ಶಕರೊಂದಿಗೆ ಮಾತುಕತೆ ನಡೆಸುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು. ನಂತರ ಕಳೆದ ಶುಕ್ರವಾರ ಈ ಒಪ್ಪಂದದ ಬಿಕ್ಕಟ್ಟು ಬಗೆಹರಿದು, ವಾರಾಂತ್ಯದ ವೇಳೆಗೆ ಹೆಚ್ಚಿನ ಥಿಯೇಟರ್‌ಗಳಲ್ಲಿ ಸ್ಕ್ರೀನ್‌ಗಳನ್ನು ಸೇರಿಸಲಾಯಿತು.

ಇದನ್ನೂ ಓದಿ:ಯಶ್​​ ಅವರ ಒಂದು ಫೈಟ್​​ಗೆ 6.5 ವರ್ಷ ಶ್ರಮ, ‘ರಾಮಾಯಣ’ಕ್ಕೆ ಪಟ್ಟ ಕಷ್ಟ ವಿವರಿಸಿದ ನಿರ್ದೇಶಕ

ಕಳೆದ ಮೂರು ದಿನಗಳಲ್ಲಿ ‘ರಾಮಾಯಣ’ ಚಿತ್ರದ ಜಾಗತಿಕ ಮುಂಗಡ ಮಾರಾಟದಲ್ಲಿ ಭಾರಿ ಏರಿಕೆಯಾಗಿದೆ. ಅದರಲ್ಲೂ ಲಾಸ್ ಏಂಜಲ್ಸ್​​​ನಲ್ಲಿ ಸಿನಿಮಾದ ಪ್ರೀಮಿಯರ್ ಶೋನ ಬಳಿಕವಂತೂ ಅಮೆರಿಕದಲ್ಲಿ ದೊಡ್ಡ ಮಟ್ಟದಲ್ಲಿ ಟಿಕೆಟ್ ಮಾರಾಟ ಆಗುತ್ತಿದೆ. ಮಂಗಳವಾರ ಬೆಳಗಿನ ವೇಳೆಗೆ ಚಿತ್ರದ ಸ್ಕ್ರೀನ್‌ಗಳ ಸಂಖ್ಯೆ 5000 ದಾಟಿದೆ. ಇದರಲ್ಲಿ ಕೇವಲ ಕಳೆದ 24 ಗಂಟೆಗಳಲ್ಲಿಯೇ 1500 ಕ್ಕೂ ಹೆಚ್ಚು ಸ್ಕ್ರೀನ್‌ಗಳು ಸೇರ್ಪಡೆಗೊಂಡಿವೆ. ಬಿಡುಗಡೆಗೆ ಎರಡು ದಿನಗಳ ಮೊದಲು ಅಂದರೆ ನವೆಂಬರ್ 3 ರ ಬೆಳಗಿನ ವೇಳೆಗೆ, ಚಿತ್ರವು ಭಾರತದಲ್ಲೇ ಮುಂಗಡ ಮಾರಾಟದ ಮೂಲಕ 58 ಕೋಟಿ ರೂ.ಗಳನ್ನು ಗಳಿಸಿದೆ. ಇದರಲ್ಲಿ ಮೊದಲ ದಿನದ ಮುಂಗಡ ಬುಕಿಂಗ್‌ನಿಂದಲೇ 27 ಕೋಟಿ ರೂ.ಗಳೆಂಬ ಆಕರ್ಷಕ ಗಳಿಕೆ ಸೇರಿದೆ. ವಿಶೇಷವೆಂದರೆ, ಕೇವಲ ಬಿಡುಗಡೆಯ ಮೊದಲ ದಿನ ಮಾತ್ರವಲ್ಲದೆ, ಇಡೀ ವಾರಾಂತ್ಯದ ದಿನಗಳ ಟಿಕೆಟ್‌ಗಳಿಗೂ ಭಾರೀ ಬೇಡಿಕೆ ಕಂಡುಬಂದಿದೆ. ಇಲ್ಲಿಯವರೆಗೆ 2 ಮತ್ತು 3 ನೇ ದಿನಗಳ ಮುಂಗಡ ಮಾರಾಟದಿಂದಲೇ 25 ಕೋಟಿ ರೂ.ಗಳ ಒಟ್ಟು ಗಳಿಕೆಯಾಗಿದೆ. ಭಾನುವಾರದ 4 ನೇ ದಿನದ ಶೋಗಳಿಗೆ ಬುಕಿಂಗ್ ಸದ್ಯಕ್ಕೆ ಸೀಮಿತವಾಗಿದ್ದರೂ, ಅದಕ್ಕೂ ನಿಧಾನವಾಗಿ ಉತ್ತಮ ಬೇಡಿಕೆ ಬರುತ್ತಿದೆ.

ಭಾರತದಾದ್ಯಂತ ಮುಂಗಡ ಬುಕಿಂಗ್‌ನಲ್ಲಿ ‘ರಾಮಾಯಣ’ ಚಿತ್ರವು ಈಗಾಗಲೇ ಸುಮಾರು 15 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಕೇವಲ ಶೇ. 4 ರಷ್ಟು ಸ್ಕ್ರೀನ್‌ಗಳನ್ನು ಹೊಂದಿದ್ದರೂ ಸಹ, ಐಮ್ಯಾಕ್ಸ್ (IMAX) ಸೇರಿದಂತೆ ಪ್ರೀಮಿಯಂ ಫಾರ್ಮ್ಯಾಟ್‌ಗಳು ಒಟ್ಟು ಮಾರಾಟದ ಸುಮಾರು ಕಾಲುಭಾಗದಷ್ಟನ್ನು ಮುನ್ನಡೆಸುತ್ತಿರುವುದು ವಿಶೇಷ.

ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಚಿತ್ರವು ದಾಖಲೆಯ ಓಟವನ್ನು ಮುಂದುವರಿಸಿದೆ. ಉತ್ತರ ಅಮೆರಿಕದಲ್ಲಿ ನವೆಂಬರ್ 4 ರಂದು, ಅಂದರೆ ಚಿತ್ರ ಬಿಡುಗಡೆಯ ಮುನ್ನಾ ದಿನ ಪ್ರೀವ್ಯುಗಳು ನಡೆಯಲಿವೆ. ವಿಶ್ವ ಪ್ರೀಮಿಯರ್‌ನ ನಂತರದ 24 ಗಂಟೆಗಳಲ್ಲಿ ಚಿತ್ರದ ಕಲೆಕ್ಷನ್ ಶೇ. 27 ರಷ್ಟು ಜಿಗಿತ ಕಂಡಿದೆ. ಮಂಗಳವಾರ ಬೆಳಗಿನ ವೇಳೆಗೆ, ಯುಎಸ್‌ನಲ್ಲಿಮ ಪ್ರೀಮಿಯರ್ ಶೋಗಳಿಂದಲೇ 1.5 ಮಿಲಿಯನ್ ಡಾಲರ್‌ಗೂ ಅಧಿಕ ಮೊತ್ತ ಕಲೆ ಹಾಕಿದೆ. ಸಾಗರೋತ್ತರ ಮುಂಗಡ ಬುಕಿಂಗ್‌ನಿಂದ ಚಿತ್ರವು ಒಟ್ಟು 5 ಮಿಲಿಯನ್ ಡಾಲರ್ ಗಳಿಸಿದೆ. ಇದರೊಂದಿಗೆ ಬಿಡುಗಡೆಗೆ ಎರಡು ದಿನಗಳ ಮುಂಚೆಯೇ ಚಿತ್ರದ ಜಾಗತಿಕ ಮುಂಗಡ ಬುಕಿಂಗ್ ಒಟ್ಟು 105 ಕೋಟಿ ರೂ.ಗಳನ್ನು ಮುಟ್ಟಿದೆ.

ಯಾವುದೇ ಭಾರತೀಯ ಚಲನಚಿತ್ರವು ಮುಂಗಡ ಬುಕಿಂಗ್‌ನಲ್ಲಿ 100 ಕೋಟಿ ರೂ.ಗಳನ್ನು ದಾಟುವುದು ಅತ್ಯಂತ ಅಪರೂಪ. ಇಲ್ಲಿಯವರೆಗೆ ‘ಬಾಹುಬಲಿ 2’, ‘ಆರ್‌ಆರ್‌ಆರ್’, ‘ಪುಷ್ಪ 2’ ಮತ್ತು ‘ಧುರಂಧರ್ 2’ ಸೇರಿದಂತೆ ಬೆರಳೆಣಿಕೆಯಷ್ಟು ಭಾರತೀಯ ಚಿತ್ರಗಳು ಮಾತ್ರ ಈ ಸಾಧನೆ ಮಾಡಿವೆ. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ‘ರಾಮಾಯಣ’ ಚಿತ್ರವು ಈ ಎಲ್ಲಾ ಚಿತ್ರಗಳಂತೆ ಪ್ರಬಲ ಆರಂಭವನ್ನು ಪಡೆಯಲಿದ್ದು, ಸಾರ್ವಕಾಲಿಕ ಅತ್ಯಧಿಕ ಆರಂಭಿಕ ದಿನದ ಟಾಪ್-5 ಪಟ್ಟಿಗೆ ಸೇರುವ ನಿರೀಕ್ಷೆಯಿದೆ. ಸಿನಿಮಾ ನವೆಂಬರ್ 5ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us