‘ಅನಿಮಲ್​’ ಕಲೆಕ್ಷನ್​ ಬಗ್ಗೆ ರಣಬೀರ್​ ಕಪೂರ್​ ಬಯಸಿದ್ದು ಎಷ್ಟು? ಆಗಿದ್ದೆಷ್ಟು?

ಎಲ್ಲರ ನಿರೀಕ್ಷೆಯನ್ನೂ ಮೀರಿ ‘ಅನಿಮಲ್​’ ಸಿನಿಮಾ ಕಲೆಕ್ಷನ್​ ಮಾಡಿದೆ. ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ ಬಂಗಾರದ ಬೆಳೆ ತೆಗೆದಿದೆ. ಈ ಚಿತ್ರದಲ್ಲಿ ನಟಿಸಿದ ಬಾಬಿ ಡಿಯೋಲ್​, ಅನಿಲ್​ ಕಪೂರ್​, ರಣಬೀರ್​ ಕಪೂರ್​, ತೃಪ್ತಿ ದಿಮ್ರಿ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಅನಿಮಲ್​’ ಕಲೆಕ್ಷನ್​ ಬಗ್ಗೆ ರಣಬೀರ್​ ಕಪೂರ್​ ಬಯಸಿದ್ದು ಎಷ್ಟು? ಆಗಿದ್ದೆಷ್ಟು?
ರಣಬೀರ್, ಅನಿಲ್ ಕಪೂರ್

Updated on: Dec 27, 2023 | 6:53 PM

ಇತ್ತೀಚಿನ ವರ್ಷಗಳಲ್ಲಿ ದಕ್ಷಿಣ ಭಾರತದ ಸಿನಿಮಾಗಳ ಅಬ್ಬರದ ನಡುವೆ ಹಿಂದಿ ಸಿನಿಮಾಗಳು ಮುಗ್ಗರಿಸುತ್ತಿದ್ದವು. ಆದರೆ 2023ರಲ್ಲಿ ಟ್ರೆಂಡ್​ ಬದಲಾಯಿತು. ‘ಗದರ್​ 2’, ‘ಜವಾನ್​’, ‘ಪಠಾಣ್​’ ಮುಂತಾದ ಸಿನಿಮಾಗಳು ಮೈ ಕೊಡವಿ ನಿಂತುಕೊಂಡವು. ಈ ವರ್ಷ ಡಿಸೆಂಬರ್ 1ರಂದು ಬಿಡುಗಡೆ ಆದ ಅನಿಮಲ್​’ ಸಿನಿಮಾ (Animal Movie) ಕೂಡ ಭರ್ಜರಿ ಕಮಾಯಿ ಮಾಡಿದೆ. ಈ ಸಿನಿಮಾದಲ್ಲಿ ರಣಬೀರ್​ ಕಪೂರ್​ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನ ಮಾಡಿದ ಈ ಚಿತ್ರದ ಬಗ್ಗೆ ರಣಬೀರ್​ ಕಪೂರ್​ (Ranbir Kapoor) ಅವರಿಗೆ ಭಾರಿ ನಿರೀಕ್ಷೆ ಇತ್ತು. ಸಿನಿಮಾದ ಶೂಟಿಂಗ್​ ಸಂದರ್ಭದಲ್ಲೇ ಅವರು 500 ಕೋಟಿ ರೂಪಾಯಿ ಕಲೆಕ್ಷನ್​ (Animal Box Office Collection) ಬಗ್ಗೆ ಮಾತನಾಡಿದ್ದರು ಎಂಬುದು ಈಗ ಗೊತ್ತಾಗಿದೆ.

‘ಅನಿಮಲ್​’ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಪ್ರಣಯ್​ ರೆಡ್ಡಿ ವಂಗಾ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಶೂಟಿಂಗ್​ ಸಂದರ್ಭದಲ್ಲಿ ನಡೆದ ಮಾತುಕತೆಯ ಬಗ್ಗೆ ಅವರು ಬಾಯಿ ಬಿಟ್ಟಿದ್ದಾರೆ. ಚಿತ್ರತಂಡದ ಪ್ರತಿಯೊಬ್ಬರ ಬಳಿಯೂ ಹೋಗಿ ರಣಬೀರ್​ ಕಪೂರ್​ ಅವರು ಕಲೆಕ್ಷನ್​ ಬಗ್ಗೆ ಭವಿಷ್ಯ ಕೇಳುತ್ತಿದ್ದರು ಎಂಬುದನ್ನು ಪ್ರಣಯ್​ ತಿಳಿಸಿದ್ದಾರೆ.

ಇದನ್ನೂ ಓದಿ: ಮಗಳ ಮುಖ ತೋರಿಸಿ 1 ಲಕ್ಷ ರೂಪಾಯಿ ದಾನ ಮಾಡಿದ ರಣಬೀರ್​ ಕಪೂರ್​

ಅನಿಲ್​ ಕಪೂರ್​ ಬಳಿ ಕೇಳಿದಾಗ, ‘350 ಕೋಟಿ ರೂಪಾಯಿ ಆಗಬಹುದು. 400 ಕೋಟಿ ರೂಪಾಯಿ ಆದರೆ ಇನ್ನೂ ಖುಷಿ ಆಗುತ್ತದೆ’ ಎಂದು ಹೇಳಿದ್ದರಂತೆ. ನಟಿ ರಶ್ಮಿಕಾ ಮಂದಣ್ಣ ಅವರು 400 ಕೋಟಿ ರೂಪಾಯಿ ಕಲೆಕ್ಷನ್​ ಆದರೆ ಉತ್ತಮ ಎಂದು ಹೇಳಿದ್ದರು. ‘500 ಕೋಟಿ ರೂಪಾಯಿಗಿಂತ ಕಡಿಮೆ ಕಲೆಕ್ಷನ್​ ಆದರೆ ನನಗೆ ಖುಷಿ ಆಗುವುದಿಲ್ಲ’ ಎಂದು ಪ್ರಣಯ್​ ಹೇಳಿದ್ದರು. ರಣಬೀರ್​ ಕಪೂರ್​ ಕೂಡ 500 ಕೋಟಿ ರೂಪಾಯಿ ಆಗಬೇಕು ಎಂದು ಬಯಸಿದ್ದರು.

ಇದನ್ನೂ ಓದಿ: ರಣಬೀರ್​ ಕಪೂರ್​ ಜತೆ ತೃಪ್ತಿ ದಿಮ್ರಿ ಬೋಲ್ಡ್​ ಪಾತ್ರ: ‘ಅನಿಮಲ್​’ ಚಿತ್ರಕ್ಕೆ ಈ ಸುಂದರಿ ಆಯ್ಕೆ ಆಗಿದ್ದು ಹೇಗೆ?

ಎಲ್ಲರ ನಿರೀಕ್ಷೆಯನ್ನೂ ಮೀರಿ ‘ಅನಿಮಲ್​’ ಸಿನಿಮಾ ಕಲೆಕ್ಷನ್​ ಮಾಡಿದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾ 537 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡುವ ಮೂಲಕ ಬಂಗಾರದ ಬೆಳೆ ತೆಗೆದಿದೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ 850 ಕೋಟಿ ರೂಪಾಯಿಗಿಂತಲೂ ಆಧಿಕ ಕಲೆಕ್ಷನ್​ ಮಾಡಿದೆ. ಈ ಚಿತ್ರದಲ್ಲಿ ನಟಿಸಿದ ಬಾಬಿ ಡಿಯೋಲ್​ ಅವರ ಅಭಿನಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us