‘ಜಾಸ್ತಿ ಮಾತಾಡ್ತಾ ಇದೀಯ ನೀನು’: ಪಾಪರಾಜಿಗಳ ಮೇಲೆ ರೊಚ್ಚಿಗೆದ್ದ ರಣಬೀರ್ ಕಪೂರ್

ಪಾಪರಾಜಿಗಳು ಆಗಾಗ ಮಿತಿ ಮೀರಿ ನಡೆದುಕೊಳ್ಳುತ್ತಾರೆ. ಇದರಿಂದ ಸೆಲೆಬ್ರಿಟಿಗಳಿಗೆ ಕಿರಿಕಿರಿ ಆಗುತ್ತದೆ. ರಣಬೀರ್ ಕಪೂರ್ ಅವರು ಕೂಡ ಪಾಪರಾಜಿಗಳ ನಡವಳಿಕೆಯನ್ನು ಖಂಡಿಸಿದ್ದಾರೆ. ಅತಿಯಾಗಿ ಮಾತನಾಡುತ್ತಿದ್ದವರಿಗೆ ಅವರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಜಾಸ್ತಿ ಮಾತಾಡ್ತಾ ಇದೀಯ ನೀನು’: ಪಾಪರಾಜಿಗಳ ಮೇಲೆ ರೊಚ್ಚಿಗೆದ್ದ ರಣಬೀರ್ ಕಪೂರ್
Ranbir Kapoor

Updated on: Sep 27, 2026 | 2:35 PM

ಮುಂಬೈನಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಪತ್ರಿಕಾಗೋಷ್ಠಿ ಹಾಗೂ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಫ್ಯಾಷನ್ ಶೋ ಬಳಿಕ ಬಾಲಿವುಡ್ ನಟ ರಣಬೀರ್ ಕಪೂರ್ ಅವರು ತಮ್ಮ ಪತ್ನಿ ಆಲಿಯಾ ಭಟ್, ‘ಲವ್ ಆ್ಯಂಡ್ ವಾರ್’ ಚಿತ್ರದ ಸಹನಟ ವಿಕ್ಕಿ ಕೌಶಲ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಶನಿವಾರ (ಸೆಪ್ಟೆಂಬರ್ 26) ರಾತ್ರಿ ಡಿನ್ನರ್‌ಗೆ ತೆರಳಿದ್ದರು. ಆದರೆ, ಈ ಸಂದರ್ಭದಲ್ಲಿ ಕ್ಯಾಮೆರಾಗಳ ಮುಂದೆ ಪೋಸ್ ನೀಡುವಾಗ ಛಾಯಾಗ್ರಾಹಕರೊಬ್ಬರ ನಡವಳಿಕೆಗೆ ರಣಬೀರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಡಿನ್ನರ್ ಮುಗಿಸಿ ಹೊರಬಂದಾಗ ರಣಬೀರ್-ಆಲಿಯಾ ದಂಪತಿ, ವಿಕ್ಕಿ ಹಾಗೂ ಬನ್ಸಾಲಿ ಒಟ್ಟಿಗೆ ನಿಂತು ಛಾಯಾಗ್ರಾಹಕರಿಗೆ ಪೋಸ್ ನೀಡುತ್ತಿದ್ದರು. ರಣಬೀರ್ ಅವರು ಆಲಿವ್-ಗ್ರೀನ್ ಕುರ್ತಾದಲ್ಲಿ ಮಿಂಚಿದರೆ, ಆಲಿಯಾ ನಿಯಾನ್ ಗ್ರೀನ್ ಗೌನ್ ಹಾಗೂ ವಿಕ್ಕಿ ಬಿಳಿ ಶರ್ಟ್‌ನಲ್ಲಿ ಕಂಗೊಳಿಸುತ್ತಿದ್ದರು. ಪೋಟೋ ತೆಗೆಸಿಕೊಳ್ಳುವಾಗ ನಿರ್ದೇಶಕ ಬನ್ಸಾಲಿ ಪಕ್ಕಕ್ಕೆ ಸರಿಯಲು ಯತ್ನಿಸಿದಾಗ, ರಣಬೀರ್ ಅವರನ್ನು ಮತ್ತೆ ಹತ್ತಿರ ಕರೆದು ಒಟ್ಟಿಗೆ ಫೋಟೋಗೆ ನಿಂತರು.

ಫೋಟೋ ಸೆಷನ್ ಮುಗಿಸಿ ಎಲ್ಲರೂ ಕಾರಿನತ್ತ ಹೊರಡುವಾಗ, ಛಾಯಾಗ್ರಾಹಕರೊಬ್ಬರು ರಣಬೀರ್ ಅವರಿಗೆ ಆಲಿಯಾ ಮತ್ತು ವಿಕ್ಕಿ ಜೊತೆ ಮತ್ತೊಮ್ಮೆ ಪೋಸ್ ನೀಡುವಂತೆ ಪದೇ ಪದೇ ಜೋರಾಗಿ ಕೂಗಾಡಲು ಶುರುಮಾಡಿದರು. ಇದರಿಂದ ಸಿಟ್ಟಾದ ರಣಬೀರ್, ವಾಪಸ್ ತಿರುಗಿ ನೋಡಿ ‘ನೀನು ಜಾಸ್ತಿ ಮಾತನಾಡುತ್ತಿದ್ದೀಯಾ’ ಎಂದು ಗರಂ ಆಗಿ ಹೇಳಿದರು. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

‘ಲವ್ ಆ್ಯಂಡ್ ವಾರ್’ ಹಾಗೂ ‘ರಾಮಾಯಣ’ ನಿರೀಕ್ಷೆ:

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಲವ್ ಆ್ಯಂಡ್ ವಾರ್’ ಒಂದು ಪೀರಿಯಡ್ ರೊಮ್ಯಾಂಟಿಕ್ ವಾರ್ ಡ್ರಾಮಾವಾಗಿದ್ದು, ರಣಬೀರ್ ಹಾಗೂ ವಿಕ್ಕಿ ಕೌಶಲ್ ಭಾರತೀಯ ವಾಯುಸೇನಾ ಅಧಿಕಾರಿಗಳಾಗಿ ನಟಿಸುತ್ತಿದ್ದಾರೆ. ಇಬ್ಬರ ನಡುವೆ ಆಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಮೇಲೆ ನಿರೀಕ್ಷೆ ಇದೆ.

ಇದನ್ನೂ ಓದಿ: ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ರಕ್ತ ಸಿಕ್ತ ಲುಕ್​ನಲ್ಲಿ ರಣಬೀರ್; ರಾಮನ ಪಾತ್ರ ಹೋಲಿಸಿ ಟೀಕೆ

ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ: ಪಾರ್ಟ್ 1’ ಸಿನಿಮಾ 2026ರ ದೀಪಾವಳಿ ಹಬ್ಬದ ಪ್ರಯುಕ್ತ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್ ಸೇರಿದಂತೆ ದೊಡ್ಡ ತಾರಾಗಣವಿದೆ. ಎರಡನೇ ಭಾಗವು 2027ರ ದೀಪಾವಳಿಗೆ ತೆರೆಕಾಣಲಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ನಡೆದ ಈ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಗೂ ಅಂತಾರಾಷ್ಟ್ರೀಯ ಯೂಟ್ಯೂಬರ್ ಮಿಸ್ಟರ್ ಬೀಸ್ಟ್ ಕೂಡ ಭಾಗವಹಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us