AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ಕಿತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ

3 Idiots: ಆಮಿರ್ ಖಾನ್ ನಟನೆಯ ‘3 ಇಡಿಯಟ್ಸ್’ ಸಿನಿಮಾ ಯಾರಿಗೆ ನೆನಪಿಲ್ಲ. ಆ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿ ಒಂದು ಶಾಲೆಯನ್ನು ತೋರಿಸಲಾಗುತ್ತದೆ. ಅಲ್ಲಿನ ವಿದ್ಯಾರ್ಥಿಗಳು ಪ್ರಯೋಗಿಕ ಶಿಕ್ಷಣ ಕಲಿಯುತ್ತಿರುತ್ತಾರೆ. ಅಸಲಿಗೆ ಈ ಶಾಲೆಯ ಹೆಸರು ಡ್ರಕ್ ಪದ್ಮಾ ಕಾರ್ಪೊ ಸ್ಕೂಲ್, 20 ವರ್ಷಗಳ ಸತತ ಪ್ರಯತ್ನದ ಬಳಿಕ ಕೊನೆಗೂ ಈ ಶಾಲೆಗೆ ಮಾನ್ಯತೆ ದೊರೆತಿದೆ.

20 ವರ್ಷಗಳ ಪ್ರಯತ್ನದ ಬಳಿಕ ಕೊನೆಗೂ ಸಿಕ್ಕಿತು ‘3 ಇಡಿಯಟ್ಸ್’ ಶಾಲೆಗೆ ಮಾನ್ಯತೆ
3 Idiots
ಮಂಜುನಾಥ ಸಿ.
|

Updated on: Apr 27, 2025 | 6:48 PM

Share

‘3 ಇಡಿಯಟ್ಸ್’ (3 Idiots) ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಲಡಾಕ್​ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ. ಅಸಲಿಗೆ ‘3 ಇಡಿಯಟ್ಸ್’ ಸಿನಿಮಾನಲ್ಲಿ ತೋರಿಸಲಾಗಿರುವ ಆ ಶಾಲೆಯ ಹೆಸರು ಡ್ರಕ್ ಪದ್ಮಾ ಕಾರ್ಪೊ ಸ್ಕೂಲ್. ಈ ಶಾಲೆಗೆ ಹಲವು ವರ್ಷದ ಪ್ರಯತ್ನದ ಬಳಿಕ ಕೊನೆಗೂ ಸಿಬಿಎಫ್​ಸಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮಾನ್ಯತೆ ದೊರೆತಿದೆ.

ರ್ಯಾಂಚೊ ಸ್ಕೂಲ್ (3 ಇಡಿಯಟ್ಸ್​ ಸಿನಿಮಾನಲ್ಲಿ ಆಮಿರ್ ಖಾನ್ ಹೆಸರು ರ್ಯಾಂಚೊ) ಎಂದೇ ಖ್ಯಾತವಾಗಿರುವ ಈ ಶಾಲೆ ಜಮ್ಮು ಕಾಶ್ಮೀರ ಸ್ಟೇಟ್ ಬೋರ್ಡ್ ಆಫ್ ಸ್ಕೂಲ್ ಎಜುಕೇಶನ್ ಅಡಿಯಲ್ಲಿ ಬರುತ್ತದೆ. ಹಲವು ವರ್ಷಗಳಿಂದಲೂ ತನ್ನ ಭಿನ್ನ ರೀತಿಯ ಕಲಿಕೆಯಿಂದ ಗಮನ ಸೆಳೆದಿದೆ. ಎನ್​ಇಪಿ (ನ್ಯೂ ಎಜುಕೇಶನ್ ಪಾಲಿಸಿ) ಬರುವ ಮೊದಲಿನಿಂದಲೂ ಈ ಶಾಲೆಯಲ್ಲಿ ಕಲಿಕೆಯನ್ನು ಪ್ರಯೋಗಿಕ ರೀತಿಯಿಂದಲೇ ಮಾಡಲಾಗುತ್ತಿತ್ತು. ಈ ಶಾಲೆಯು ಸುಮಾರು 20 ವರ್ಷಗಳಿಂದಲೂ ಸಿಬಿಎಫ್​ಸಿ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಮಾನ್ಯತೆಗಾಗಿ ಪ್ರಯತ್ನ ಮಾಡುತ್ತಲೇ ಇತ್ತು. ಆದರೆ ದೊರೆತಿರಲಿಲ್ಲ. ಈಗ ಶಾಲೆಗೆ ಸಿಬಿಎಫ್​ಸಿ ಮಾನ್ಯತೆ ದೊರೆತಿದೆ.

2009 ರಲ್ಲಿ ಬಿಡುಗಡೆ ಆದ ‘3 ಇಡಿಯಟ್ಸ್’ ಸಿನಿಮಾ ಇದೇ ಶಾಲೆಯಲ್ಲಿ ಚಿತ್ರೀಕರಣವಾಗಿತ್ತು. ಆಗಿನಿಂದಲೂ ಈ ಶಾಲೆಯನ್ನು ರ್ಯಾಂಚೊ ಶಾಲೆ ಎಂದು ಕರೆಯಲಾಗುತ್ತಿತ್ತು. ಇಲ್ಲಿನ ವಿದ್ಯಾರ್ಥಿಗಳು ಜಮ್ಮು ಕಾಶ್ಮೀರ ಬೋರ್ಡ್​ನ ಇತರೆ ಶಾಲೆಗಳಿಗಿಂತಲೂ ಭಿನ್ನರೀತಿಯ ಶಿಕ್ಷಣವನ್ನು ಕಲಿಯುತ್ತಿದ್ದರು. ಶಾಲೆಯು ರಾಷ್ಟ್ರೀಯ ಮಾನ್ಯತೆಗಾಗಿ ಪ್ರಯತ್ನ ಮಾಡುತ್ತಲೇ ಇತ್ತಾದರೂ ಜಮ್ಮು ಕಾಶ್ಮೀರ ಬೋರ್ಡ್​ನ ಕಾರಣದಿಂದ ಮಾನ್ಯತೆ ದೊರೆತಿರಲಿಲ್ಲ. ಆದರೆ ಕೊನೆಗೂ ಈಗ ಸಿಬಿಎಫ್​ಸಿ ಮಾನ್ಯತೆ ಸಿಕ್ಕಿದೆ.

ಇದನ್ನೂ ಓದಿ:ಶಾರುಖ್ ಖಾನ್ ರೀತಿಯೇ ಮನೆ ಬಿಡಲು ನಿರ್ಧರಿಸಿದ ಆಮಿರ್ ಖಾನ್; ಕಾರಣ ಏನು?

ಸಿಬಿಎಫ್​ಸಿ ಮಾನ್ಯತೆ ದೊರಕಲು ಜಮ್ಮು ಕಾಶ್ಮೀರ ಬೋರ್ಡ್​ನಿಂದ ‘ನೋ ಅಬ್ಜೆಕ್ಷನ್’ ಪ್ರಮಾಣ ಪತ್ರ ಪಡೆಯಬೇಕಿರುವ ನಿಯಮ ಇದೆ. ಆದರೆ ರ್ಯಾಂಚೊ ಶಾಲೆಗೆ ಜಮ್ಮು ಕಾಶ್ಮೀರ ಬೋರ್ಡ್ ಸುಮಾರು 20 ವರ್ಷದಿಂದಲೂ ನೋ ಅಬ್ಜೆಕ್ಷನ್ ಪ್ರಮಾಣ ಪತ್ರ ನೀಡಿಯೇ ಇರಲಿಲ್ಲವಂತೆ. ಇದೀಗ ಹಲವು ಪ್ರಯತ್ನಗಳ ಬಳಿಕ ಕೊನೆಗೂ ಮಾನ್ಯತೆ ದೊರೆತಿದ್ದ, ರ್ಯಾಂಚೊ ಶಾಲೆಯ ಮಕ್ಕಳು ಇನ್ನು ಮುಂದೆ ಸಿಬಿಎಫ್​ಸಿ ಪಠ್ಯವನ್ನು ಓದಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಇಂದು ಈ ರಾಶಿಯವರು ನಿರ್ಲಕ್ಷ್ಯತನವನ್ನು ತ್ಯಜಿಸಿದರೆ ಉತ್ತಮ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ಬೆಂಗಳೂರು: ಹೊಯ್ಸಳ ನಗರ ಪಬ್​ನಲ್ಲಿ ಅಗ್ನಿ ಅವಘಡ, ತಪ್ಪಿದ ಭಾರಿ ದುರಂತ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ನನ್ನ ಹೇಳಿಕೆ ತಿರುಚಲಾಗಿದೆ: ವಿವಾದಾತ್ಮಕ ಹೇಳಿಕೆ ಬಗ್ಗೆ ಛಲವಾದಿ ಸ್ಪಷ್ಟನೆ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಹಿರಿಯೂರು ಉಪಚುನಾವಣೆ: ಕಾಂಗ್ರೆಸ್​​ ಅಭ್ಯರ್ಥಿಯ ಸುಳಿವು ನೀಡಿದ ಡಿಕೆಶಿ
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಛಲವಾದಿ ನಾರಾಯಣಸ್ವಾಮಿ ಮನೆಗೆ ಮುತ್ತಿಗೆ ಯತ್ನ; ಕೈ ಕಾರ್ಯಕರ್ತರು ವಶಕ್ಕೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಮುತ್ತುಸ್ವಾಮಿ ದೀಕ್ಷಿತರ್ 250ನೇ ಜಯಂತಿ ಪ್ರಯುಕ್ತ 250 ರೂ. ನಾಣ್ಯ ಬಿಡುಗಡೆ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ಪರೀಕ್ಷಾ ಅಕ್ರಮ ತಡೆಗೆ ಕೆಇಎಯಿಂದ ಹೊಸ ಮಾರ್ಗಸೂಚಿ ಪ್ರಕಟ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್