ಬಾಲಿವುಡ್ಗೆ ಈ ವರ್ಷ ಅದೃಷ್ಟ ಕೈಕೊಟ್ಟಿದೆ. ಈ ಬಾರಿ ತೆರೆಗೆ ಬಂದ ಸಿನಿಮಾಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಗೆದ್ದಿವೆ. ಸ್ಟಾರ್ ಹೀರೋಗಳ ಚಿತ್ರಗಳು ಕೂಡ ಸೋಲು ಕಾಣುತ್ತಿವೆ. ರಣವೀರ್ ಸಿಂಗ್ (Ranveer Singh) ನಟನೆಯ ‘ಸರ್ಕಸ್’ ಸಿನಿಮಾ ಇತ್ತೀಚೆಗೆ ತೆರೆಗೆ ಬಂತು. ಗೆಲುವಿನೊಂದಿಗೆ ಈ ವರ್ಷವನ್ನು ಪೂರ್ಣಗೊಳಿಸಬಹುದು ಎಂದು ಬಾಲಿವುಡ್ ಮಂದಿ ಭಾವಿಸಿದ್ದರು. ಆದರೆ, ಅದು ಸುಳ್ಳಾಗಿದೆ. ‘ಸರ್ಕಸ್’ ಸಿನಿಮಾ (Circus Movie) ಹೀನಾಯವಾಗಿ ಸೋತಿದೆ. ಈ ಮಧ್ಯೆ ರಣವೀರ್ ಹಾಗೂ ದೀಪಿಕಾ ಮುಂಬೈ ಬಿಟ್ಟು ರಜೆಯ ಮಜ ಕಳೆಯಲು ತೆರಳಿದ್ದಾರೆ.
ವರ್ಷಾಂತ್ಯ ಬಂತು ಎಂದರೆ ಬಹುತೇಕ ಸೆಲೆಬ್ರಿಟಿಗಳು ವೆಕೇಶನ್ಮೂಡ್ಗೆ ತೆರಳುತ್ತಾರೆ. ಕುಟುಂಬದವರ ಜತೆ ವಿದೇಶಿ ಪ್ರಯಾಣ ಮಾಡುತ್ತಾರೆ. ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ಇದಕ್ಕೆ ಹೊರತಾಗಿಲ್ಲ. ‘ಸರ್ಕಸ್’ ಸೋಲಿನ ಬೆನ್ನಲ್ಲೇ ರಣವೀರ್ ಸಿಂಗ್ ಅವರು ಪತ್ನಿ ಜತೆ ಮುಂಬೈ ಬಿಟ್ಟು ತೆರಳಿದ್ದಾರೆ. ಅವರು ಬೋಟ್ ಏರಿ ಹೊರಟಿರುವ ವಿಡಿಯೋ ವೈರಲ್ ಆಗಿದೆ. ಮೂಲಗಳ ಪ್ರಕಾರ ಕ್ರ್ಯೂಸ್ ಶಿಪ್ ಏರಿ ಅವರು ವಿದೇಶಕ್ಕೆ ತೆರಳಿದ್ದಾರೆ ಎನ್ನಲಾಗುತ್ತಿದೆ.
ರೋಹಿತ್ ಶೆಟ್ಟಿ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡುತ್ತವೆ. ಆದರೆ, ‘ಸರ್ಕಸ್’ ಸಿನಿಮಾದಲ್ಲಿ ಈ ಮ್ಯಾಜಿಕ್ ಕೆಲಸ ಮಾಡಿಲ್ಲ. ಕಡಿಮೆ ರೇಟಿಂಗ್ ಪಡೆಯುವುದರ ಜತೆಗೆ ಬಾಕ್ಸ್ ಆಫೀಸ್ನಲ್ಲಿ ಡಲ್ ಆರಂಭ ಕಾಣುವ ಮೂಲಕ ಸಿನಿಮಾ ಸೋಲಿನ ರುಚಿ ಕಂಡಿದೆ. ರಣವೀರ್ ಸಿಂಗ್ ಅವರು ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿದೆ.
ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ವಿಚ್ಛೇದನ ಪಡೆಯುತ್ತಾರೆ ಎನ್ನುವ ಸುದ್ದಿ ಇತ್ತೀಚೆಗೆ ಹುಟ್ಟಿಕೊಂಡಿತ್ತು. ಇದನ್ನು ಕೇಳಿ ಅಭಿಮಾನಿಗಳು ಬೇಸರಗೊಂಡರು. ಚಿತ್ರರಂಗದ ಅನೇಕರು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಈ ಸಾಲಿಗೆ ಈ ಜೋಡಿಯೂ ಸೇರ್ಪಡೆ ಆಗಲಿದೆಯೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಿತ್ತು. ಆದರೆ, ಇದು ಸುಳ್ಳು ಎಂಬುದು ಬಳಿಕ ಗೊತ್ತಾಯಿತು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.
#Cirkus continues to send shock waves… After a dismal start on Day 1, the biz is flat on Day 2… #Maharashtra and #Gujarat – the prime markets of #RohitShetty movies – remain low… All eyes on Day 3
[#Christmas]… Fri 6.25 cr, Sat 6.40 cr+. Total: ₹ 12.65 cr. #India biz. pic.twitter.com/Ix02PbCYUJ— taran adarsh (@taran_adarsh) December 25, 2022
ಇದನ್ನೂ ಓದಿ: ಫಿಫಾ ವಿಶ್ವಕಪ್ ಫೈನಲ್ ವೇಳೆ ರವಿ ಶಾಸ್ತ್ರಿಗೆ ಕಿಸ್ ಮಾಡಿದ ರಣವೀರ್ ಸಿಂಗ್; ಇಲ್ಲಿದೆ ವೈರಲ್ ವಿಡಿಯೋ
ರಣವೀರ್ ಸಿಂಗ್ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ದೀಪಿಕಾ ಪಡುಕೋಣೆ ಅವರು ‘ಪಠಾಣ್’ ಸಿನಿಮಾ ರಿಲೀಸ್ ಅನ್ನು ಎದುರು ನೋಡುತ್ತಿದ್ದಾರೆ. ವಿವಾದದಿಂದ ಸದ್ದು ಮಾಡಿದ ಈ ಸಿನಿಮಾ 2023ರ ಜನವರಿ 25ರಂದು ತೆರೆಗೆ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ