ನಟ ರಣವೀರ್ ಸಿಂಗ್ (Ranveer Singh) ಅವರು ಬಾಲಿವುಡ್ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಅವರ ಪ್ರತಿಭೆ ಏನು ಎಂಬುದು ಸಾಬೀತಾಗಿದೆ. ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ರಣವೀರ್ ಸಿಂಗ್ ನೀಡಿದ್ದಾರೆ. ಪ್ರತಿ ಸಿನಿಮಾಗೆ ಅವರಿಗೆ ಕೋಟ್ಯಂತರ ರೂಪಾಯಿ ಸಂಭಾವನೆ ಸಿಗುತ್ತದೆ. ಜಾಹೀರಾತು, ಬಿಸ್ನೆಸ್ ಸೇರಿದಂತೆ ಹಲವು ಮೂಲಗಳಿಂದ ಅವರಿಗೆ ಆದಾಯ ಹರಿದುಬರುತ್ತದೆ. ರಣವೀರ್ ಸಿಂಗ್ ಅವರು ಒಟ್ಟು ಎಷ್ಟು ಆಸ್ತಿ (Ranveer Singh Net Worth) ಹೊಂದಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಪ್ರತಿ ವರ್ಷದ ಆದಾಯಕ್ಕೆ ಅನುಗುಣವಾಗಿ ಈ ಸಂಖ್ಯೆಯಲ್ಲಿ ವ್ಯತ್ಯಾಸ ಆಗುತ್ತಿದೆ. ಸದ್ಯದ ಮಾಹಿತಿ ಪ್ರಕಾರ ರಣವೀರ್ ಸಿಂಗ್ ಅವರು 223 ಕೋಟಿ ರೂಪಾಯಿಗಳ ಒಡೆಯ. ಅವರ ಪತ್ನಿ ದೀಪಿಕಾ ಪಡುಕೋಣೆ (Deepika Padukone) ಕೂಡ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಅವರ ಬಳಿಯೂ ಬಹುಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ.
2010ರಿಂದಲೂ ರಣವೀರ್ ಸಿಂಗ್ ಅವರು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ‘ಬ್ಯಾಂಡ್ ಬಾಜಾ ಬಾರಾತ್’ ಸಿನಿಮಾದಿಂದ ಆರಂಭವಾದ ಅವರ ಬಣ್ಣದ ಲೋಕದ ಪಯಣ ಈವರೆಗೂ ಯಶಸ್ವಿಯಾಗಿ ಸಾಗಿ ಬಂದಿದೆ. ಇತ್ತೀಚಿಗೆ ರಿಲೀಸ್ ಆದ ರಣವೀರ್ ಸಿಂಗ್ ಅವರ ಎರಡು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋತಿವೆ. ‘83’ ಹಾಗೂ ‘ಜಯೇಶ್ ಭಾಯ್ ಜೋರ್ದಾರ್’ ಚಿತ್ರಕ್ಕೆ ನಿರೀಕ್ಷಿತ ಮಟ್ಟದ ಕಲೆಕ್ಷನ್ ಆಗಿಲ್ಲ. ಹಾಗೆಂದಮಾತ್ರಕ್ಕೆ ರಣವೀರ್ ಸಿಂಗ್ ಅವರ ಆಸ್ತಿ ಕಡಿಮೆ ಆಗಿಲ್ಲ.
ಅನೇಕ ಜಾಹೀರಾತುಗಳಲ್ಲಿ ನಟಿಸುವ ಮೂಲಕ ರಣವೀರ್ ಸಿಂಗ್ ಅವರು ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಯಾವುದಾದರೂ ಬ್ರ್ಯಾಂಡ್ ಅನ್ನು ಪ್ರಚಾರ ಮಾಡಿದರೂ ಅವರಿಗೆ ಕೈತುಂಬ ಸಂಬಳ ಸಿಗುತ್ತದೆ. ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರ ಆದಾಯ ಸೇರಿದರೆ 330 ಕೋಟಿ ರೂಪಾಯಿಗೂ ಅಧಿಕ ಆಗಲಿದೆ. ಇಬ್ಬರೂ ಈಗ ಅನೇಕ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆಗಿದ್ದಾರೆ. ಏಷ್ಯಾದ ಶ್ರೀಮಂತ ಸೆಲೆಬ್ರಿಟಿ ದಂಪತಿಗಳ ಪಟ್ಟಿಯಲ್ಲಿ ಈ ಜೋಡಿಗೆ ನಾಲ್ಕನೇ ಸ್ಥಾನವಿದೆ.
ಪ್ರಸ್ತುತ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಶೂಟಿಂಗ್ನಲ್ಲಿ ರಣವೀರ್ ಸಿಂಗ್ ತೊಡಗಿಕೊಂಡಿದ್ದಾರೆ. ಅತ್ತ ದೀಪಿಕಾ ಪಡುಕೋಣೆ ಅವರು ಶಾರುಖ್ ಖಾನ್ ಜೊತೆ ‘ಪಠಾಣ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸ್ಟಾರ್ ದಂಪತಿಗೆ ಇನ್ನಷ್ಟು ಯಶಸ್ಸು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ರಣವೀರ್ ಸಿಂಗ್ ಹೊಸ ಸಿನಿಮಾ ಲೀಕ್; ‘ಜಯೇಶ್ಭಾಯ್’ಗೆ 2 ಆಘಾತ
ರಣವೀರ್ ಸಿಂಗ್ ಹೀಗೆಲ್ಲ ಚಿತ್ರ-ವಿಚಿತ್ರ ಬಟ್ಟೆ ಹಾಕೋದು ಯಾಕೆ? ಕಡೆಗೂ ಸತ್ಯ ಬಾಯ್ಬಿಟ್ಟ ನಟ
Published On - 8:59 am, Wed, 6 July 22