
ಬಾಲಿವುಡ್ ನಟ ರಣವೀರ್ ಸಿಂಗ್ ಅವರ ‘ಧುರಂಧರ್’ ಪ್ರಸ್ತುತ ಸುದ್ದಿಯಲ್ಲಿದೆ. ಈ ಚಿತ್ರದ ಕ್ರೇಜ್ ಅದ್ಭುತವಾಗಿದೆ. ಈ ಸಿನಿಮಾ 410 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿದೆ. ಸಾಮಾನ್ಯ ಪ್ರೇಕ್ಷಕರಿಂದ ಹಿಡಿದು ಸ್ಟಾರ್ ಮಂದಿ ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರವನ್ನು ಹೊಗಳುತ್ತಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಲಾಭ ಗಳಿಸಿದೆ. ಇತ್ತೀಚೆಗೆ, ನಟಿ ಶ್ರದ್ಧಾ ಕಪೂರ್ ಕೂಡ ಚಿತ್ರಮಂದಿರಕ್ಕೆ ಹೋಗಿ ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದರು. ಅದರ ನಂತರ ಅವರ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯುತ್ತಿದೆ.
ಶ್ರದ್ಧಾ ಕಪೂರ್ ಧುರಂಧರ್ ಚಿತ್ರವನ್ನು ಹೊಗಳಿದ್ದಾರೆ. ಮುಂದಿನ ಭಾಗವನ್ನು ನೋಡಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಶ್ರದ್ಧಾ ಕಪೂರ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ‘ಧುರಂಧರ್’ ಚಿತ್ರದ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಒಂದಲ್ಲ ಮೂರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಮತ್ತು ಅದರ ನಿರ್ಮಾಪಕರನ್ನು ಟೀಕಿಸಿದವರಿಗೆ ಅವರು ಉತ್ತಮ ಉತ್ತರವನ್ನು ನೀಡಿದ್ದಾರೆ. ಎರಡನೇ ಬಾರಿಗೆ ಚಿತ್ರವನ್ನು ನೋಡುವುದಾಗಿ ಅವರು ಹೇಳಿದ್ದಾರೆ.
‘ಧುರಂಧರ್ ಚಿತ್ರವು ತುಂಬಾ ಅದ್ಭುತವಾಗಿದೆ’ ಎಂದು ಶ್ರದ್ಧಾ ಮೊದಲ ಸ್ಟೋರಿಯಲ್ಲಿ ಹೇಳಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, ‘ಭಾಗ ಎರಡಕ್ಕಾಗಿ ನಮ್ಮನ್ನು 3 ತಿಂಗಳು ಕಾಯುವಂತೆ ಮಾಡುತ್ತಿದ್ದಾರೆ. ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ, ದಯವಿಟ್ಟು ಅದನ್ನು ಸ್ವಲ್ಪ ಮುಂಚಿತವಾಗಿ ಬಿಡುಗಡೆ ಮಾಡಿ. ಎಂತಹ ಅದ್ಭುತ ಅನುಭವ. ನಾನು ಬೆಳಿಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಾಗದೇ ಇದ್ದಿದ್ದರೆ, ನಾನು ಈಗ ಅದನ್ನು ಎರಡನೇ ಬಾರಿಗೆ ನೋಡಲು ಹೋಗುತ್ತಿದ್ದೆ. ಛಾವಾ, ಸೈಯಾರಾ, ಧುರಂಧರ್ ಎಲ್ಲವೂ 2025ರ ಒಳ್ಳೆಯ ಸಿನಿಮಾಗಳು’ ಎಂದಿರುವ ಅವರು, ‘ಹಿಂದಿ ಸಿನಿಮಾ’ ರಾಕೆಟ್ ರೀತಿ ಹೋಗುತ್ತಿದೆ ಎಂದು ಹೇಳಿಕೊಂಡಿದ್ದಾರೆ .
‘ಧುರಂಧರ್’ ಚಿತ್ರದ ಬಗ್ಗೆ ಹೇಳುವುದಾದರೆ, ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಡಿಸೆಂಬರ್ 5 ರಂದು ಬಿಡುಗಡೆಯಾದ ನಂತರ, ಈ ಚಿತ್ರವು 411 ಕೋಟಿ ರೂ.ಗಳನ್ನು ಗಳಿಸಿದೆ. ‘ಧುರಂಧರ್’ ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರದ ಎರಡನೇ ಭಾಗ ಮಾರ್ಚ್ 19ಕ್ಕೆ ತೆರೆಗೆ ಬರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.