‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?

ರಶ್ಮಿಕಾ ಮಂದಣ್ಣ ಅವರು ಯಶಸ್ವಿ ನಟಿ. ಅವರು ಕುಟುಂಬಕ್ಕೆ ಆದ್ಯತೆ ನೀಡುತ್ತಾರೆ. ತಂಗಿ ಶಿಮನ್ ಮಂದಣ್ಣ ಜೊತೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ರಶ್ಮಿಕಾ ತಮ್ಮ ತಂಗಿಗೆ ಸವಲತ್ತುಗಳನ್ನು ನೀಡದೇ ಇರಲು ನಿರ್ಧರಿಸಿದ್ದಾರೆ. ಅವರ 16 ವರ್ಷಗಳ ವಯಸ್ಸಿನ ಅಂತರದ ಬಗ್ಗೆಯೂ ರಶ್ಮಿಕಾ ಮಾತನಾಡಿದ್ದಾರೆ.

‘ನನ್ನ ತಂಗಿಗೆ ಸವಲತ್ತು ಸಿಗಬಾರದು’; ರಶ್ಮಿಕಾ ಮಂದಣ್ಣ ಹೀಗೆ ಅಂದಿದ್ಯಾಕೆ?
ರಶ್ಮಿಕಾ
Edited By:

Updated on: Mar 01, 2025 | 8:19 AM

ರಶ್ಮಿಕಾ ಮಂದಣ್ಣ ಅವರು ಭಾರತ ಚಿತ್ರರಂಗದ ಶ್ರೇಷ್ಠ ನಟಿಯರಲ್ಲಿ ಒಬ್ಬರು. ಅವರ ನಟನೆಯ ‘ಛಾವ’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಯಶಸ್ಸು ಕಂಡಿದೆ. ಛತ್ರಪತಿ ಸಾಂಭಾಜಿ ಮಹಾರಾಜ್ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದೊಂದು ಐತಿಹಾಸಿಕ ಕಥಾ ಹಂದರ ಹೊಂದಿರೋ ಚಿತ್ರ ಆಗಿರುವುದರಿಂದ ರಶ್ಮಿಕಾ ಮಂದಣ್ಣ ಮೆಚ್ಚುಗೆ ಪಡೆದರು. ಅವರು ಇತ್ತೀಚೆಗೆ ತಮ್ಮ ತಂಗಿಯ ಬಗ್ಗೆ ಮಾತನಾಡಿದ್ದರು.

ರಶ್ಮಿಕಾ ಸಹೋದರಿಯ ಹೆಸರು ಶಿಮನ್ ಮಂದಣ್ಣ. ಅವಳು ಇನ್ನೂ ಶಿಕ್ಷಣ ಪಡೆಯುತ್ತಾ ಇದ್ದಾಳೆ. ರಶ್ಮಿಕಾ ಹಾಗೂ ಶಿಮನ್ ಮಧ್ಯೆ 16 ವರ್ಷಗಳ ವಯಸ್ಸಿನ ಅಂತರ ಇದೆ. ಇದು ಬಹುತೇಕರಿಗೆ ಗೊತ್ತಿದೆ. ರಶ್ಮಿಕಾ ಚಿತ್ರರಂಗಕ್ಕೆ ಬಂದಾಗ ಈ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಈಗ ರಶ್ಮಿಕಾ ಮಂದಣ್ಣ ಅವರು ತನ್ನ ತಂಗಿಗೆ ಯಾವ ರೀತಿಯ ವಾತಾವರಣ ಸೃಷ್ಟಿಸುತ್ತಿದ್ದೇನೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
ಮುಂಜಾನೆ ನಾಲ್ಕು ಗಂಟೆಗೆ ರಶ್ಮಿಕಾ ತಿನ್ನೋ ಸ್ನ್ಯಾಕ್ಸ್ ಏನು? ಫೋಟೋ ವೈರಲ್
ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಅನುಮಾನ

‘ನಮ್ಮ ಮಧ್ಯೆ 16 ವರ್ಷಗಳ ಅಂತರ ಇದೆ. ಇದು ನಿನ್ನ ಜೀವನ. ನಿನ್ನ ಜೀವನದಲ್ಲಿ ನಮ್ಮನ್ನು ಸೇರಿಸಿಕೊಳ್ಳಬೇಡ ಎಂದು ನನ್ನ ತಂದೆ ತಾಯಿ ಹೇಳಿದ್ದರು. ನನ್ನ ತಂಗಿಗೆ ಕೇಳಿದ್ದನ್ನು ಪಡೆದುಕೊಳ್ಳಬಹುದು. ಅವಳಿಗೆ ಅದು ಸಿಗೋಕೆ ನನಗೆ ಇಷ್ಟ ಇಲ್ಲ. ಬಾಲ್ಯದಲ್ಲಿ ನಾನು ಹೇಗೆ ಇದ್ದೆನೋ ಅದೇ ವಾತಾವರಣ ಅವಳಿಗೂ ಸಿಗಬೇಕು. ಆ ವಾತಾವರಣ ಸಿಕ್ಕಿದ್ದರಿಂದಲೇ ನಾನು ಈಗ ಹೀಗೆ ಇದ್ದೇನೆ. ನಾನು ಭದ್ರತೆ, ಕಂಫರ್ಟ್​ನ ಕೊಡಬಹುದು, ಆದರೆ ಐಷಾರಾಮಿ ಸವಲತ್ತುಗಳನ್ನು ನೀಡಲಾರೆ ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಮಂದಣ್ಣ ಚಿತ್ರರಂಗದ ಯಶಸ್ವಿ ನಾಯಕಿಯರಲ್ಲಿ ಒಬ್ಬರು. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ‘ಛಾವಾ’ ಚಿತ್ರ ಅವರ ವೃತ್ತಿ ಬದುಕನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದೆ. ರಶ್ಮಿಕಾ ಮಂದಣ್ಣ ಅವರು ಬಾಲಿವುಡ್​​ನಲ್ಲಿ ಮತ್ತಷ್ಟು ಬೇಡಿಕೆ ಸೃಷ್ಟಿಸಿಕೊಳ್ಳಲು ಇದು ಸಹಕಾರಿ ಆಗಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು

ರಶ್ಮಿಕಾ ಮಂದಣ್ಣ ಅವರು ‘ಸಿಖಂದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಹಿಟ್ ಆದರೆ, ರಶ್ಮಿಕಾ ಅವರನ್ನು ಯಾರೂ ಹಿಡಿಯೋಕೆ ಸಾಧ್ಯವಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಖುಷಿ ಇದೆ. ತೆಲುಗು-ತಮಿಳಿನಲ್ಲೂ ಅವರು ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:50 am, Sat, 1 March 25