AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಯ ಸಂಭಾವನೆ ಬಗ್ಗೆ ತಮಾಷೆ ಮಾಡಿದ ಶಾರುಖ್ ಖಾನ್, ಅಷ್ಟಕ್ಕೂ ಗೌರಿ ಖಾನ್ ಸಂಭಾವನೆ ಎಷ್ಟು?

Shah Rukh Khan-Gauri Khan: ಶಾರುಖ್ ಖಾನ್ ಏಷ್ಯಾದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಅವರೂ ಸಹ ಒಬ್ಬರು. ಅವರ ಪತ್ನಿ ಗೌರಿ ಖಾನ್ ನಟಿ ಅಲ್ಲದಿದ್ದರೂ ನಟಿಯರಿಗಿಂತಲೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಆ ಬಗ್ಗೆ ಸ್ವತಃ ಶಾರುಖ್ ಖಾನ್ ತಮಾಷೆ ಮಾಡಿದ್ದರಂತೆ.

ಪತ್ನಿಯ ಸಂಭಾವನೆ ಬಗ್ಗೆ ತಮಾಷೆ ಮಾಡಿದ ಶಾರುಖ್ ಖಾನ್, ಅಷ್ಟಕ್ಕೂ ಗೌರಿ ಖಾನ್ ಸಂಭಾವನೆ ಎಷ್ಟು?
Srk Gauri Khan
Follow us
ಮಂಜುನಾಥ ಸಿ.
|

Updated on: Mar 01, 2025 | 7:07 PM

ಶಾರುಖ್ ಖಾನ್, ಭಾರತದ ಸ್ಟಾರ್ ನಟ. ಸಿನಿಮಾ ಒಂದಕ್ಕೆ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಶಾರುಖ್ ಖಾನ್ ಸಹ ಒಬ್ಬರು. ನಟನೆಯಿಂದ ಮಾತ್ರವೇ ಅಲ್ಲದೆ ಸ್ಟುಡಿಯೋ, ನಿರ್ಮಾಣ ಸಂಸ್ಥೆ, ರಿಯಲ್ ಎಸ್ಟೇಟ್ ಇನ್ನೂ ಹಲವು ಉದ್ಯಮಗಳಿಂದಲೂ ಶಾರುಖ್ ಖಾನ್ ಹಣ ಗಳಿಸುತ್ತಾರೆ. ಭಾರತದ ಮಾತ್ರವೇ ಅಲ್ಲದೆ ಏಷಿಯಾದ ಅತ್ಯಂತ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರುಖ್ ಖಾನ್ ಹೆಸರಿದೆ. ಶಾರುಖ್ ಖಾನ್ ಪತ್ನಿ ಗೌರಿ ಖಾನ್ ನಟಿಯಲ್ಲದಿದ್ದರೂ ಸಹ ಯಾವ ನಟಿಯರಿಗೂ ಕಡಿಮೆ ಇಲ್ಲದಷ್ಟು ಸಂಭಾವನೆ ಪಡೆಯುತ್ತಾರೆ!

ಗೌರಿ ಖಾನ್, ಭಾರತದ ಸೆಲೆಬ್ರಿಟಿ ಇಂಟೀರಿಯರ್ ಡಿಸೈನರ್​ಗಳಲ್ಲಿ ಒಬ್ಬರು. ಹಲವು ವರ್ಷಗಳಿಂದಲೂ ಖಾಸಗಿಯಾಗಿ ಹಲವು ಸೆಲೆಬ್ರಿಟಿಗಳ ಮನೆಗಳ ಒಳಾಂಗಣ ವಿನ್ಯಾಸ ಮಾಡುತ್ತಾ ಬಂದಿರುವ ಗೌರಿ ಖಾನ್, ಕೆಲ ವರ್ಷಗಳ ಹಿಂದೆಯಷ್ಟೆ ಗೆಳತಿ, ಹೃತಿಕ್ ರೋಷನ್​ರ ಮಾಜಿ ಪತ್ನಿ ಸುಸೇನ್ ಅವರೊಟ್ಟಿಗೆ ಸೇರಿಕೊಂಡು ತಮ್ಮದೇ ಆದ ಒಳಾಂಗಣ ವಿನ್ಯಾಸ ಸಂಸ್ಥೆಯನ್ನು ಆರಂಭಿಸಿದ್ದು, ದೇಶದ ಹಲವು ಪ್ರಮುಖ ಸಿನಿಮಾ ಸೆಲೆಬ್ರಿಟಿಗಳು, ಉದ್ಯಮಿಗಳು, ಹೋಟೆಲ್​ಗಳ ಒಳಾಂಗಣ ವಿನ್ಯಾಸ ಮಾಡುತ್ತಾರೆ.

ಖ್ಯಾತ ಪಂಜಾಬಿ ಗಾಯಕ ಮಿಕಾ ಸಿಂಗ್, ಹಲವಾರು ಮನೆಗಳನ್ನು ಕಟ್ಟಿದ್ದಾರೆ. ಇತ್ತೀಚೆಗೆ ಅವರು ತಮ್ಮ 99ನೇ ಮನೆ ನಿರ್ಮಿಸಿದರು. ಅವರ 99ನೇ ಮನೆಯ ಒಳಾಂಗಣ ವಿನ್ಯಾಸವನ್ನು ಗೌರಿ ಖಾನ್ ಅವರಿಂದಲೇ ಮಾಡಿಸಬೇಕು ಎಂಬುದು ಅವರ ಆಸೆಯಾಗಿತ್ತಂತೆ. ಅದರಂತೆ ಅವರು ಶಾರುಖ್ ಖಾನ್ ಅವರನ್ನು ಕೇಳಿದರಂತೆ. ‘ಗೌರಿ ಖಾನ್ ಅವರನ್ನು ಕೇಳಿ, ನಮ್ಮ ಮನೆಯ ಒಳಾಂಗಣ ವಿನ್ಯಾಸ ಅವರು ಮಾಡಿಕೊಡುತ್ತಾರಾ’ ಎಂದು ಕೇಳಿದ್ದಾರೆ. ಅದಕ್ಕೆ ಶಾರುಖ್ ಖಾನ್, ‘ಅಯ್ಯೋ ಆಕೆಯಿಂದ ಮಾಡಿಸಿದರೆ ನಿನ್ನ ಕತೆ ಮುಗಿದಂತೆ, ಲೂಟಿ ಮಾಡಿಬಿಡುತ್ತಾಳೆ, ಆಕೆ ಬಹಳ ದುಬಾರಿ’ ಎಂದರಂತೆ.

ಇದನ್ನೂ ಓದಿ:ಶಾರುಖ್ ಖಾನ್ ಮನ್ನತ್​ಗೆ ಇದೆ 100 ವರ್ಷಗಳ ಇತಿಹಾಸ; ಇದರ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ

ಆದರೆ ಹಠ ಬಿಡದ ಮಿಕ್ಕಾ ಸಿಂಗ್, ಇಲ್ಲಿ ನನ್ನ ಮನೆಯ ವಿನ್ಯಾಸ ಅವರೇ ಮಾಡಬೇಕು ನೀವು ಮಾತನಾಡಿ ಎಂದರಂತೆ. ಆದರೆ ಶಾರುಖ್ ಖಾನ್ ಅದಕ್ಕೆ ಒಪ್ಪದೆ, ನೀನೇ ಮಾತನಾಡು ಎಂದರಂತೆ. ಕೊನೆಗೆ ಮಿಕ್ಕಾ ಸಿಂಗ್, ಗೌರಿ ಖಾನ್ ಜೊತೆ ಮಾತನಾಡಿ, ಮನೆ ಎಲ್ಲ ತೋರಿಸಿದ್ದಾರೆ. ಆಗ ಗೌರಿ ಖಾನ್ ಅವರದ್ದು ಒಂದೇ ಒಂದು ಷರತ್ತು ಇತ್ತಂತೆ. ನಾನು ಏನೇ ಮಾಡಿದರು ಪ್ರಶ್ನೆ ಕೇಳಬಾರದು ಎಂದಿದ್ದರಂತೆ. ಅದರಂತೆ ಮಿಕ್ಕಾ ಸಿಂಗ್ ಸಹ ಯಾವುದೇ ಪ್ರಶ್ನೆ ಕೇಳಲಿಲ್ಲವಂತೆ. ಎರಡು ವರ್ಷಗಳ ಕಾಲ ಒಳಾಂಗಣ ವಿನ್ಯಾಸ ಮಾಡಿದ ಗೌರಿ ಖಾನ್ ಬಹಳ ಚೆನ್ನಾಗಿ ಮಾಡಿದ್ದಾರೆ ಎಂದಿದ್ದಾರೆ ಮಿಕ್ಕಾ ಸಿಂಗ್.

ಅಂದಹಾಗೆ ಶಾರುಖ್ ಖಾನ್ ಹೇಳಿದಂತೆ ಗೌರಿ ಖಾನ್, ಬಹಳ ದುಬಾರಿ ಒಳಾಂಗಣ ವಿನ್ಯಾಸಕಿ. ಮನೆಯ ಒಳಾಂಗಣ ವಿನ್ಯಾಸ ಮಾಡಲು 20-30 ಕೋಟಿ ವರೆಗೂ ಚಾರ್ಜ್ ಮಾಡುತ್ತಾರೆ ಗೌರಿ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್