ಶಾರುಖ್ ಖಾನ್ ಮನ್ನತ್ಗೆ ಇದೆ 100 ವರ್ಷಗಳ ಇತಿಹಾಸ; ಇದರ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ
ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯು 1914 ರಲ್ಲಿ ನಿರ್ಮಾಣ ಮಾಡಲಾಯಿತು. 2001ರಲ್ಲಿ ಇದನ್ನು ಶಾರುಖ್ ಖಾನ್ ಖರೀದಿಸಿದರು. ಈಗ ಅದರ ಮೌಲ್ಯ ನೂರಾರು ಕೋಟಿ ರೂಪಾಯಿಗೂ ಅಧಿಕವಾಗಿದೆ. 25 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ನಡೆಯುತ್ತಿದೆ. ಮನ್ನತ್ 27,000 ಚದರ ಅಡಿ ವಿಸ್ತಾರವಾಗಿದ್ದು, ವಿಂಟೇಜ್ ಮತ್ತು ಆಧುನಿಕ ವಾಸ್ತುಶಿಲ್ಪದ ಸಮ್ಮಿಳನವಾಗಿದೆ.

ಶಾರುಖ್ ಖಾನ್ ಒಡೆತನದ ಹಲವು ಪ್ರಾಪರ್ಟಿಗಳು ಸಖತ್ ದುಬಾರಿ. ಅವುಗಳಲ್ಲಿ ಪ್ರಮುಖವಾಗಿ ಹೈಲೈಟ್ ಆಗುವುದು ಎಂದರೆ ಅವರ ನಿವಾಸ ‘ಮನ್ನತ್’. ಮುಂಬೈನ ಬಾಂದ್ರಾದಲ್ಲಿರುವ ಈ ಬಿಲ್ಡಿಂಗ್ ಬರೋಬ್ಬರಿ 6 ಅಂತಸ್ತನ್ನು ಹೊಂದಿದೆ. ಈ ನಿವಾಸ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ. ಈಗ ಈ ಮನೆಯ ನವೀಕರಣ ಕಾರ್ಯಕ್ಕೆ ಗೌರಿ ಖಾನ್ ಮುಂದಾಗಿರುವುದು ಗುಟ್ಟಾಗಿ ಏನು ಉಳಿದಿಲ್ಲ ಎನ್ನಬಹುದು. ಈ ನಿವಾಸಕ್ಕೆ ಶಾರುಖ್ ಖಾನ್ ಕೊಟ್ಟ ಹಣ ಎಷ್ಟು? ಅದರ ಬೆಲೆ ಈಗ ಎಷ್ಟಾಗಿದೆ ಎಂಬ ಬಗ್ಗೆ ತಿಳಿದುಕೊಳ್ಳೋಣ.
ಮುಂಬೈನ ಬಾಂದ್ರಾ ಬಳಿ ಮನ್ನತ್ ನಿವಾಸ ಇದೆ. ಈ ನಿವಾಸದ ಅಳತೆ ಬರೋಬ್ಬರಿ 27 ಸಾವಿರ ಚದರ ಅಡಿಗಳಷ್ಟಾಗಿದೆ. ಕಾರ್ ಪಾರ್ಕಿಂಗ್ಗೆ ವಿಶೇಷ ವ್ಯವಸ್ಥೆ ಇದ್ದು ಹಲವು ಕಾರ್ಗಳನ್ನು ಏಕಕಾಲಕ್ಕೆ ಪಾರ್ಕ್ ಮಾಡಲು ಇಲ್ಲಿ ಅವಕಾಶ ಇದೆ ಎನ್ನಬಹುದು. ವಿಂಟೇಜ್ ಹಾಗೂ ಮಾಡರ್ನ್ ಆರ್ಟಿಕೆಕ್ಟ್ನ ಸಮ್ಮಿಳನವಾಗಿ ಈ ನಿವಾಸ ಮೂಡಿ ಬಂದಿದೆ.
ಮನ್ನತ್ ನಿರ್ಮಾಣ ಆಗಿದ್ದು 1914ರಲ್ಲಿ ಎನ್ನಲಾಗಿದೆ. ಪ್ಯಾರಿಸ್ನ ಫ್ಯಾಮಿಲಿ ಇದನ್ನು ಹೊಂದಿತ್ತು. ನಂತರ 1990ರಲ್ಲಿ ಇದನ್ನು ರಿಯಲ್ ಎಸ್ಟೇಟ್ ಕಂಪನಿ ಖರೀದಿ ಮಾಡಿತು. ಮೊದಲು ಸಲ್ಮಾನ್ ಖಾನ್ ಬಳಿ ಇದನ್ನು ಖರೀದಿಸುವಂತೆ ಸಂಸ್ಥೆ ಬೇಡಿಕೆ ಇಟ್ಟಿತ್ತು. ಆದರೆ, ಇದಕ್ಕೆ ಅವರು ಒಪ್ಪಿಲ್ಲ. ಆ ಬಳಿಕ ಆಫರ್ ಶಾರುಖ್ ಖಾನ್ ಬಳಿ ಹೋಯಿತು. 2001ರಲ್ಲಿ ಶಾರುಖ್ ಇದನ್ನು ಖರೀದಿಸಿದರು. ಈ ಮನೆಗೆ ಗೌರಿ ಖಾನ್ ಅವರೇ ಇಂಟೀರಿಯರ್ ಡಿಸೈನ್ ಮಾಡಿದರು.
ಇದನ್ನೂ ಓದಿ: ಅವೆಂಜರ್ಸ್ ಸರಣಿಯಲ್ಲಿ ಶಾರುಖ್ ಖಾನ್? ದೊಡ್ಡ ಹಿಂಟ್ ಕೊಟ್ಟ ಹಾಲಿವುಡ್ ನಟ
ಶಾರುಖ್ ಖಾನ್ ಅವರು ಈ ಮನೆಯನ್ನು 13 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಬಂಗಲೆಯ ಬೆಲೆ ಈಗ 200 ಕೋಟಿ ರೂಪಾಯಿಗೂ ಅಧಿಕವಾಗಿದೆ. ವಿಶೇಷ ಎಂದರೆ ಈಗ ನಡೆಯಲಿರುವ ನವೀಕರಣ ಕೆಲಸಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ 25 ಕೋಟಿ ರೂಪಾಯಿ ಖರ್ಚಾಗಲಿದೆ. ಈ ವಿಚಾರ ಅಭಿಮಾನಿಗಳಿಗೆ ಅಚ್ಚರಿ ತಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.