ನಟಿ ರತ್ನಾ ಪಾಟಕ್ ಶಾ, ದಿಯಾ ಮಿರ್ಜಾ (Dia Mirza), ಫಾತಿಮಾ ಸನಾ ಶೇಖ್ ಹಾಗೂ ಸಂಜನಾ ಸಂಘಿ ಬೈಕ್ ರೈಡ್ ಹೊರಟಿದಿದ್ದಾರೆ. ಬುಲೆಟ್ ಬೈಕ್ ಏರಿ ಲಾಂಗ್ ರೈಡ್ ಹೋಗೋಕೆ ರೆಡಿ ಆಗಿದ್ದಾರೆ. ಸೆಲೆಬ್ರಿಟಿಗಳು ಸಿನಿಮಾ ಕೆಲಸಗಳ ಮಧ್ಯೆ ಬ್ರೇಕ್ ತೆಗೆದುಕೊಂಡು ವೆಕೇಶನ್ ಹೋಗೋದು ಕಾಮನ್. ಇವರೂ ಹಾಗೆ ಟ್ರಿಪ್ಗೆ ಹೊರಟರು ಎಂದುಕೊಳ್ಳಬೇಡಿ. ಹೊಸ ಚಿತ್ರಕ್ಕಾಗಿ ಈ ನಾಲ್ಕು ಹೀರೋಯಿನ್ಗಳು ಒಂದಾಗುತ್ತಿದ್ದಾರೆ. ‘ಧಕ್ ಧಕ್’ (Dhak Dhak Movie) ಎಂದು ಈ ಸಿನಿಮಾಗೆ ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾದಲ್ಲಿ ಬೈಕ್ ರೈಡ್ ಕಥೆ ಹೈಲೈಟ್ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ. ರಿಲೀಸ್ ಆಗಿರುವ ಹೊಸ ಪೋಸ್ಟರ್ ಎಲ್ಲರ ಗಮನ ಸೆಳೆಯುತ್ತಿದೆ.
‘ಧಕ್ ಧಕ್’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಇದು ಅಭಿಮಾನಿಗಳ ಪಾಲಿಗೆ ವಿಶೇಷವಾಗಿದೆ. ಕಾರಣ ರತ್ನಾ, ದಿಯಾ, ಫಾತಿಮಾ ಹಾಗೂ ಸಂಜನಾ ಒಟ್ಟಾಗಿ ನಟಿಸುತ್ತಿದ್ದಾರೆ. ಪೋಸ್ಟರ್ ನೋಡಿದ ಮಹಿಳಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಬೈಕ್ನಲ್ಲಿ ರೈಡ್ ಹೋಗಬೇಕು ಎಂದು ಯುವತಿಯರು ಕನಸು ಕಾಣುತ್ತಾರೆ. ಅಂಥವರಿಗೆ ಈ ಸಿನಿಮಾ ಮೂಲಕ ಸ್ಫೂರ್ತಿ ಸಿಗುವ ಸೂಚನೆ ಸಿಕ್ಕಿದೆ.
ಪೋಸ್ಟರ್ ಹಂಚಿಕೊಂಡಿರುವ ದಿಯಾ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ತಾವು ಅನ್ವೇಷಣೆ ಮಾಡಿಕೊಳ್ಳಲು ನಾಲ್ಕು ಮಹಿಳೆಯರು ಬೈಕ್ ರೈಡ್ ಹೊರಡುತ್ತಾರೆ. ಇದು ಸಿನಿಮಾದ ಕಥೆ. ಫಾತಿಮಾ ಟಾಪ್ ಮತ್ತು ಶಾರ್ಟ್ಸ್ ಹಾಕಿದ್ದಾರೆ. ರತ್ನಾ ಸಲ್ವಾರ್ ಸ್ಯೂಟ್ ಧರಿಸಿದ್ದಾರೆ. ಸಂಜನಾ ಅವರು ಡೆನಿಮ್ ಹಾಕಿದ್ದಾರೆ. ದಿಯಾ ಅವರು ಹಿಜಾಬ್ ಹಾಕಿ ಕಾಣಿಸಿಕೊಂಡಿದ್ದಾರೆ. ಇಷ್ಟೊಂದು ಭಿನ್ನ ಮನಸ್ಥಿತಿಯವರ ರೈಡ್ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳದ್ದು.
Join the ride of a lifetime with Dhak Dhak, as four women ride to the highest motorable pass in the world on an exciting journey of self discovery!@fattysanashaikh #RatnaPathak @sanjanasanghi96 @Viacom18Studios #OutsidersFilms @BLM_Pictures @Dudeja_sahaab @parijatjoshi@taapsee pic.twitter.com/1OLADvevXc
— Dia Mirza (@deespeak) May 16, 2022
ದಿಯಾ ಅವರು ನಿರ್ಮಾಪಕರ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ. ಈ ಸಿನಿಮಾಗೆ ತಾಪ್ಸೀ ಪನ್ನು ಕೂಡ ನಿರ್ಮಾಪಕರಾಗಿದ್ದಾರೆ. ತಾಪ್ಸೀ ಜತೆಗೆ ಪ್ರಂಜಲ್, ಆಯುಷ್ ಮಹೇಶ್ವರಿ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ತರುಣ್ ದುಡೇಜಾ ಅವರು ನಿರ್ದೇಶನ ಮಾಡುತ್ತಿದ್ದಾರೆ. 2023ರಲ್ಲಿ ಚಿತ್ರ ಥಿಯೇಟರ್ನಲ್ಲಿ ಬಿಡುಗಡೆ ಆಗುತ್ತಿದೆ.
‘ಧಕ್ ಧಕ್’ ಫಸ್ಟ್ಲುಕ್ಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ. ಎಲ್ಲರೂ ಈ ಪೋಸ್ಟರ್ ಮೆಚ್ಚಿಕೊಂಡಿದ್ದಾರೆ. ‘ಬಹಳ ಸೊಗಸಾಗಿದೆ’ ಎಂದು ಫ್ಯಾನ್ಸ್ ಓರ್ವ ಕಮೆಂಟ್ ಮಾಡಿದ್ದಾನೆ. ಅನೇಕರು ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Mon, 16 May 22