ಹಲ್ಲೆ ಘಟನೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ರವೀನಾ ಟಂಡನ್​

ಬಾಲಿವುಡ್​ ನಟಿ ರವೀನಾ ಟಂಡನ್​ ಅವರು ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮೆಲ್ಲರ ಅಪಾರವಾದ ಬೆಂಬಲ, ಪ್ರೀತಿ ಹಾಗೂ ನಂಬಿಕೆಗೆ ಧನ್ಯವಾದ. ಈ ಕಥೆಯ ನೀತಿ ಏನು ಗೊತ್ತಾ? ಡ್ಯಾಶ್​ಕ್ಯಾಮ್​ ಹಾಗೂ ಸಿಸಿಟಿವಿ ಈಗಲೇ ಹಾಕಿಸಿಕೊಳ್ಳಿ’ ಎಂದು ರವೀನಾ ಟಂಡನ್​ ಅವರು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಆಪ್ತರು ಮತ್ತು ಅಭಿಮಾನಿಗಳಿಗೆ ಅವರು ಕಿವಿಮಾತು ಹೇಳಿದ್ದಾರೆ.

ಹಲ್ಲೆ ಘಟನೆ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ನಟಿ ರವೀನಾ ಟಂಡನ್​
ರವೀನಾ ಟಂಡನ್​

Updated on: Jun 06, 2024 | 10:30 PM

ಹಿಂದಿ ಚಿತ್ರರಂಗದ ಖ್ಯಾತ ನಟಿ ರವೀನಾ ಟಂಡನ್​ ಅವರ ಮೇಲೆ ಇತ್ತೀಚೆಗೆ ಹಲ್ಲೆ (Assault) ನಡೆದಿತ್ತು. ರಸ್ತೆಯಲ್ಲಿ ಆದ ಸಣ್ಣ ಕಿರಿಕ್​ನಿಂದ ದೊಡ್ಡ ವಿವಾದ ಸೃಷ್ಟಿ ಆಗಿತ್ತು. ರವೀನಾ ಟಂಡನ್​ (Raveena Tandon) ಮತ್ತು ಅವರ ಕಾರು ಚಾಲಕನೇ ಸಾರ್ವಜನಿಕರಿಗೆ ಹೊಡೆದಿದ್ದಾರೆ ಎಂಬ ಆರೋಪ ಇದೆ. ಆದರೆ ವೈರಲ್​ ವಿಡಿಯೋದಲ್ಲಿ ರವೀನಾ ಟಂಡನ್​ ಅವರು ‘ದಯವಿಟ್ಟು ಹೊಡೆಯಬೇಡಿ’ ಎಂದು ಬೇಡಿಕೊಳ್ಳುತ್ತಿರುವುದು ಕಾಣಿಸಿತ್ತು. ಒಟ್ಟಾರೆ ಈ ಘಟನೆಯ ಬಗ್ಗೆ ಈವರೆಗೆ ಮೌನವಾಗಿದ್ದ ರವೀನಾ ಟಂಡನ್​ ಅವರು ಈ ಮೌನ ಮುರಿದಿದ್ದಾರೆ.

ರವೀನಾ ಟಂಡನ್​ ಅವರು ಇನ್​ಸ್ಟಾಗ್ರಾಮ್​ ಸೋರಿ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ‘ನಿಮ್ಮೆಲ್ಲರ ಅಪಾರವಾದ ಪ್ರೀತಿ, ಬೆಂಬಲ ಮತ್ತು ನಂಬಿಕೆಗೆ ಧನ್ಯವಾದಗಳು. ಈ ಕಥೆಯ ನೀತಿ ಏನು? ಈಗಲೇ ಡ್ಯಾಶ್​ಕ್ಯಾಮ್​ ಮತ್ತು ಸಿಸಿಟಿವಿ ಹಾಕಿಸಿಕೊಳ್ಳಿ’ ಎಂದು ರವೀನಾ ಟಂಡನ್​ ಅವರು ಬರೆದುಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಅವರು ತಿಳಿ ಹೇಳಿದ್ದಾರೆ.

ಘಟನೆಯ ಹಿನ್ನೆಲೆ:

ಮುಂಬೈನ ಬೀದಿಯಲ್ಲಿ ಈ ಘಟನೆ ನಡೆದಿತ್ತು. ರವೀನಾ ಟಂಡನ್​ ಅವರ ಕಾರು ಚಾಲಕ ರಿವರ್ಸ್​ ತೆಗೆಯುವಾದ ಪಾದಚಾರಿಗಳಿಗೆ ಕಾರು ಗುದ್ದಿದೆ ಎಂಬ ಆರೋಪ ಇದೆ. ಅದನ್ನು ಪ್ರಶ್ನಿಸಿದ ಪಾದಚಾರಿಗಳಿಗೆ ಕಾರು ಚಾಲಕ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಹೊರಬಂದ ರವೀನಾ ಅವರು ಮದ್ಯದ ನಶೆಯಲ್ಲಿ ಇದ್ದರು ಹಾಗೂ ಅವರು ಕೂಡ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿದರು ಎಂಬ ಆರೋಪ ಎದುರಾಗಿತ್ತು. ಡ್ಯಾಶ್​ಕ್ಯಾಮ್​​ ಮತ್ತು ಸಿಸಿಟಿವಿ ದೃಶ್ಯಗಳು ಲಭ್ಯವಾದರೆ ಅಸಲಿ ಸಂಗತಿ ಬಯಲಾಗಲಿದೆ.

ಇದನ್ನೂ ಓದಿ: ‘ಪ್ಲೀಸ್​ ಹೊಡೆಯಬೇಡಿ’: ಕೈ ಮುಗಿದು ಬೇಡಿಕೊಂಡ ರವೀನಾ ಟಂಡನ್​

ಸೆಲೆಬ್ರಿಟಿಗಳ ಮೇಲೆ ಹಲ್ಲೆ ನಡೆದ ಘಟನೆ ಇತ್ತೀಚೆಗೆ ವರದಿ ಆಗುತ್ತಿದೆ. ಇಂದು (ಜೂನ್​ 6) ನಟಿ ಕಂಗನಾ ರಣಾವತ್​ ಅವರ ಮೇಲೆ ಸಿಐಎಸ್​ಎಫ್​ ಸಿಬ್ಬಂದಿ ಕೈ ಮಾಡಿದ್ದಾರೆ. ಈ ಘಟನೆಯ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಕುರಿತು ಕಂಗನಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ಪಂಜಾಬ್​ನಲ್ಲಿ ಹೆಚ್ಚಿರುವ ಆತಂಕವಾದ ಮತ್ತು ಉಗ್ರವಾದದ ಬಗ್ಗೆ ತಮಗೆ ಕಳವಳ ಉಂಟಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.