ಜಿಮ್ನಾಸ್ಟಿಕ್ಸ್ ವರ್ಕೌಟ್ ಮಾಡಿದ ರಣಬೀರ್ ಕಪೂರ್; ಯಾವ ಚಿತ್ರಕ್ಕಾಗಿ ಈ ಸಿದ್ಧತೆ?
ರಣಬೀರ್ ಕಪೂರ್ ಅವರು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಸಮಯ ಮಾಡಿಕೊಂಡು ನಿತ್ಯವೂ ಬಿಡದೆ ವರ್ಕೌಟ್ ಮಾಡುತ್ತಾರೆ. ಈಗ ಅವರ ಪರ್ಸನಲ್ ಟ್ರೇನರ್ ನಾಮ್ ಅವರು ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ‘ರಾಮಾಯಣ’ ಸಿನಿಮಾ ಶೂಟ್ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ಈಗ ಜಿಮ್ನಾಸ್ಟಿಕ್ ಎಕ್ಸಸೈಸ್ ಮಾಡುತ್ತಿದ್ದಾರೆ. ಈ ವಿಡಿಯೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಆಲಿಯಾ ಭಟ್ ಸೇರಿ ಅನೇಕ ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ರಣಬೀರ್ ಕಪೂರ್ ಅವರು ಫಿಟ್ನೆಸ್ಗೆ ಹೆಚ್ಚು ಒತ್ತು ನೀಡುತ್ತಾರೆ. ಅವರು ಸಮಯ ಮಾಡಿಕೊಂಡು ನಿತ್ಯವೂ ಬಿಡದೆ ವರ್ಕೌಟ್ ಮಾಡುತ್ತಾರೆ. ಈಗ ಅವರ ಪರ್ಸನಲ್ ಟ್ರೇನರ್ ನಾಮ್ ಅವರು ಅವರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಜಿಮ್ನಾಸ್ಟಿಕ್ ವ್ಯಾಯಾಮ ಮಾಡುತ್ತಿದ್ದಾರೆ. ‘ಟೂ ಗುಡ್’ ಎಂದು ಆಲಿಯಾ ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
‘ಲವ್ ಆ್ಯಂಡ್ ವಾರ್’ ಚಿತ್ರದಲ್ಲೂ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರ 2024 ಜನವರಿಯಲ್ಲಿ ಘೋಷಣೆ ಆಯಿತು. ಈ ಸಿನಿಮಾ 2025ರ ಕ್ರಿಸ್ಮಸ್ಗೆ ರಿಲೀಸ್ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:ರಣಬೀರ್ ಕಪೂರ್-ಆಲಿಯಾ ಭಟ್ ಮನೆಗೆ ಬಂತು ಲಕ್ಷುರಿ ಲೆಕ್ಸಸ್ ಕಾರು
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಅವರು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿತ್ತು. ಇದಾದ ಬಳಿಕ ರಣಬೀರ್ ಹಾಗೂ ಆಲಿಯಾ ‘ಲವ್ ಆ್ಯಂಡ್ ವಾರ್’ ಚಿತ್ರಕ್ಕೆ ಒಂದಾಗುತ್ತಿದ್ದಾರೆ. ಇವರನ್ನು ಮತ್ತೆ ತೆರೆಮೇಲೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಕೂಡ ಇದ್ದು, ಸಿನಿಮಾದ ಶೂಟಿಂಗ್ ಬಗ್ಗೆ ಇನ್ನಷ್ಟೇ ಅಪ್ಡೇಟ್ ಸಿಗಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.