ಹಿಂದಿ ಚಿತ್ರರಂಗದಲ್ಲಿ ‘ಆರ್​ಆರ್​ಆರ್​’ ಅಬ್ಬರ; 100 ಕೋಟಿ ಕ್ಲಬ್ ಸೇರಿದ ರಾಜಮೌಳಿ ಸಿನಿಮಾ

| Updated By: ರಾಜೇಶ್ ದುಗ್ಗುಮನೆ

Updated on: Mar 29, 2022 | 1:58 PM

ಮೊದಲ ದಿನ ‘ಆರ್​ಆರ್​ಆರ್​’ ವಿಶ್ವ ಮಟ್ಟದಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಹಿಂದಿಯಿಂದ ಈ ಚಿತ್ರ ಸುಮಾರು 20 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ ಹಾಗೂ ಭಾನುವಾರ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಅಬ್ಬರಿಸಿದೆ.

ಹಿಂದಿ ಚಿತ್ರರಂಗದಲ್ಲಿ ‘ಆರ್​ಆರ್​ಆರ್​’ ಅಬ್ಬರ; 100 ಕೋಟಿ ಕ್ಲಬ್ ಸೇರಿದ ರಾಜಮೌಳಿ ಸಿನಿಮಾ
ಆರ್​ಆರ್​ಆರ್
Follow us on

ಇಡೀ ವಿಶ್ವಾದ್ಯಂತ ‘ಆರ್​ಆರ್​ಆರ್​’ ಸಿನಿಮಾ (RRR Movie) ತೆರೆಕಂಡು ಅಬ್ಬರಿಸುತ್ತಿದೆ. ವಾರಾಂತ್ಯಕ್ಕೆ 500 ಕೋಟಿ ಕ್ಲಬ್ (500 Crore Club) ಸೇರಿದ ಈ ಸಿನಿಮಾ, ಸೋಮವಾರದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಸಾಮಾನ್ಯವಾಗಿ ವೀಕೆಂಡ್​​ನಲ್ಲಿ ದೊಡ್ಡ ಕಲೆಕ್ಷನ್ ಮಾಡುವ ಸ್ಟಾರ್ ಸಿನಿಮಾಗಳು, ಸೋಮವಾರ ಬಾಕ್ಸ್ ಆಫೀಸ್​​ನಲ್ಲಿ (Box Office) ಸೊರಗಿ ಹೋಗುತ್ತವೆ. ಆದರೆ, ‘ಆರ್​ಆರ್​ಆರ್​’ ಸಿನಿಮಾ ಆ ರೀತಿ ಅಲ್ಲ. ಸೋಮವಾರ ಕೂಡ ಒಳ್ಳೆಯ ಕಲೆಕ್ಷನ್ ಮಾಡುವ ಮೂಲಕ ಚಿತ್ರ ಗೆದ್ದು ಬೀಗಿದೆ. ಇಂದಿನ ಲೆಕ್ಕಾಚಾರವನ್ನೂ ಸೇರಿಸಿದರೆ ಹಿಂದಿ ಬಾಕ್ಸ್​ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಸಿನಿಮಾದ ಕಲೆಕ್ಷನ್ 100 ಕೋಟಿ ದಾಟಲಿದೆ.

ಮೊದಲ ದಿನ ‘ಆರ್​ಆರ್​ಆರ್​’ ವಿಶ್ವ ಮಟ್ಟದಲ್ಲಿ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಹಿಂದಿಯಿಂದ ಈ ಚಿತ್ರ ಸುಮಾರು 20 ಕೋಟಿ ರೂಪಾಯಿ ಗಳಿಸಿತ್ತು. ಶನಿವಾರ ಹಾಗೂ ಭಾನುವಾರ ಹಿಂದಿ ಬಾಕ್ಸ್ ಆಫೀಸ್​ನಲ್ಲಿ ‘ಆರ್​ಆರ್​ಆರ್​’ ಅಬ್ಬರಿಸಿದೆ. ಇದರಿಂದ ಹಿಂದಿ ವರ್ಷನ್ ಕಲೆಕ್ಷನ್ ಮೊದಲ ವಾರಾಂತ್ಯಕ್ಕೆ 75 ಕೋಟಿ ರೂಪಾಯಿ ಆಗಿತ್ತು. ಸೋಮವಾರ ಈ ಸಿನಿಮಾ 17 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಹಿಂದಿಯಲ್ಲಿ ಚಿತ್ರದ ಕಲೆಕ್ಷನ್​ 92 ಕೋಟಿ ರೂಪಾಯಿ ಆಗಿದೆ.

ಸೋಮವಾರದ ಗಳಿಕೆ ವಿಚಾರದಲ್ಲಿ ಇತ್ತೀಚೆಗೆ ತೆರೆಗೆ ಬಂದ ಸಿನಿಮಾಗಳನ್ನು ‘‘ಆರ್​ಆರ್​ಆರ್​’ ಹಿಂದಿಕ್ಕಿದೆ. ಸೋಮವಾರದ ಲೆಕ್ಕಾಚಾರದಲ್ಲಿ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ 15.05 ಕೋಟಿ ರೂಪಾಯಿ, ಅಕ್ಷಯ್​ ಕುಮಾರ್ ನಟನೆಯ ‘ಸೂರ್ಯವಂಶಿ’ 14.51, ಆಲಿಯಾ ಭಟ್​ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ 8.19, ರಣವೀರ್​ ಸಿಂಗ್​ ಅಭಿನಯದ ‘83’ 7.29 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ದಾಖಲೆಗಳನ್ನು ‘ಆರ್​ಆರ್​ಆರ್​’ ಪುಡಿ ಮಾಡಿದೆ.

‘ಆರ್​ಆರ್​ಆರ್​’ ಸಿನಿಮಾ ಈಗಾಗಲೇ 500 ಕೋಟಿ ರೂಪಾಯಿ ಕ್ಲಬ್​ ಸೇರಿ ಆಗಿದೆ. ಶೀಘ್ರವೇ ಈ ಸಿನಿಮಾ 800 ಕೋಟಿ ಕ್ಲಬ್​ ಸೇರಲಿದೆ ಎನ್ನಲಾಗುತ್ತಿದೆ. ಇದರಿಂದ ಚಿತ್ರದ ನಿರ್ಮಾಪಕರು ಖುಷಿಪಡುವಂತಾಗಿದೆ. ‘ಆರ್​ಆರ್​ಆರ್’ ಸಿನಿಮಾ ಪದೇಪದೇ ವಿಳಂಬ ಆಗುತ್ತಲೇ ಇತ್ತು. ಇದಕ್ಕೆ ಕಾರಣವಾಗಿದ್ದು, ಕೊರೊನಾ ವೈರಸ್​. ಇದರಿಂದ ಸಿನಿಮಾ ಬಜೆಟ್​ ಕೂಡ ಹೆಚ್ಚಿತ್ತು. ಪ್ರಚಾರಕ್ಕಾಗಿಯೂ ಸಿನಿಮಾ ತಂಡ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡಿತ್ತು. ಈಗ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: Alia Bhatt: ‘ಆರ್​ಆರ್​ಆರ್​’ ಚಿತ್ರ ನೋಡಿ ನಿರಾಸೆಗೊಂಡ ಆಲಿಯಾ ಭಟ್​ ಫ್ಯಾನ್ಸ್

ವಿಶ್ವಾದ್ಯಂತ ಧೂಳೆಬ್ಬಿಸಿದೆ ‘ಆರ್​ಆರ್​ಆರ್​’ ಸಿನಿಮಾ; 3 ದಿನಕ್ಕೆ 500 ಕೋಟಿ ರೂ. ಕಲೆಕ್ಷನ್​