ಸಲ್ಮಾನ್ ಖಾನ್ ಜನ್ಮದಿನದ ಪಾರ್ಟಿಯಲ್ಲಿ ಧೋನಿ ಸೇರಿದಂತೆ ಹಲವರು ಭಾಗಿ
ಸಲ್ಮಾನ್ ಖಾನ್ ಅವರು ಖಾಸಗಿ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಆಪ್ತರು, ಗೆಳೆಯರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಮೊದಲು ಈ ಪಾರ್ಟಿಗೆ ಬಂದರು. ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರು ಪತಿ ಆಯುಷ್ ಶರ್ಮಾ ಜೊತೆ ಬಂದರು.

ನಟ ಸಲ್ಮಾನ್ ಖಾನ್ (Salman Khan) ಅವರು ಇಂದು (ಡಿಸೆಂಬರ್ 27) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಅವರು ತಮ್ಮ ಪನ್ವೇಲ್ ಫಾರ್ಮ್ಹೌಸ್ನಲ್ಲಿ ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು ಎಂಬುದು ವಿಶೇಷ. ಇದನ್ನು ಸಲ್ಮಾನ್ ಖಾನ್ ಮೊದಲಿನಿಂದಲೂ ಮಾಡಿಕೊಂಡು ಬಂದಿದ್ದಾರೆ ಎಂಬ ವಿಷಯ ಅನೇಕರಿಗೆ ತಿಳಿದಿದೆ. ಅವರು ಪ್ರತಿವರ್ಷ ತಮ್ಮ ಫಾರ್ಮ್ಹೌಸ್ನ್ಲಿ ಈ ಪಾರ್ಟಿ ಆಯೋಜನೆ ಮಾಡಿ, ಸೆಲೆಬ್ರಿಟಿಗಳಿಗೆ ಆಹ್ವಾನ ನೀಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ.
ಸಲ್ಮಾನ್ ಖಾನ್ ಅವರು ಖಾಸಗಿ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಆಪ್ತರು, ಗೆಳೆಯರು ಹಾಗೂ ಚಿತ್ರರಂಗದ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಿದ್ದಾರೆ. ಸಲ್ಮಾನ್ ಖಾನ್ ತಂದೆ ಸಲೀಮ್ ಖಾನ್ ಮೊದಲು ಈ ಪಾರ್ಟಿಗೆ ಬಂದರು. ಅವರ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರು ಪತಿ ಆಯುಷ್ ಶರ್ಮಾ ಜೊತೆ ಬಂದರು. ಅವರ ಮಕ್ಕಳು ಕೂಡ ಜೊತೆಯಲ್ಲೇ ಇದ್ದರು. ಸೋಹೈಲ್ ಖಾನ್, ಅವರ ಮಗ ನಿರ್ವಾಣ್ ಖಾನ್, ಅರ್ಬಾಜ್ ಖಾನ್ ಕೂಡ ಬಂದರು.
ಸಿನಿಮಾ ಇಂಡಸ್ಟ್ರಿಯವರಾದ ರಣದೀಪ್ ಹೂಡಾ ಅವರು ತಮ್ಮ ಪತ್ನಿ ಲಿನ್ ಜೊತೆ ಆಗಮಿಸಿದರು. ಜೆನಿಲಿಯಾ ಹಾಗೂ ಸಲ್ಮಾನ್ ಖಾನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಅವರು ಕೂಡ ಪಾರ್ಟಿಗೆ ಹಾಜರಾದರು. ಇನ್ನು ಈ ಪಾರ್ಟಿಯ ಮುಖ್ಯ ಹೈಲೈಟ್ ಎಂಎಸ್ ಧೋನಿಯೇ ಆಗಿದ್ದರು. ಮಾಜಿ ಕ್ರಿಕೆಟರ್ ಆಗಿರುವ ಅವರು ಪತ್ನಿ ಸಾಕ್ಷಿ ಜೊತೆ ಬಂದರು. ಸಲ್ಮಾನ್ ಖಾನ್ಗೂ ಧೋನಿಗೂ ವಿಶೇಷ ಗೆಳೆತನ ಇದೆ. ಈ ಮೊದಲು ಧೋನಿ ಜನ್ಮದಿನದಂದು ಸಲ್ಲು ಜತೆ ಕೇಕ್ ಕತ್ತರಿಸಿದ್ದರು. 2024ರಲ್ಲಿ ಈ ಘಟನೆ ನಡೆದಿತ್ತು.
ಇದನ್ನೂ ಓದಿ: 3 ಸಾವಿರ ಕೋಟಿ ಒಡೆಯ ಸಲ್ಮಾನ್ ಖಾನ್; ಹೂಡಿಕೆಗಳನ್ನು ನೋಡಿದ್ರೆ ತಲೆತಿರುಗುತ್ತೆ
ಇನ್ನು, ರಮೇಶ್ ತೌರಾಣಿ, ಟಬು. ನಿಖಿ ದ್ವಿವೇದಿ, ಮಹೇಶ್ ಮಂಜ್ರೇಕರ್ ಸೇರಿದಂತೆ ಸಲ್ಮಾನ್ ಆಪ್ತ ಬಳಗದ ಅನೇಕರು ಈ ಬರ್ತ್ಡೇಯಲ್ಲಿ ಕಾಣಿಸಿಕೊಂಡರು.ಎಲ್ಲರೂ ಸಲ್ಲುಗೆ ವಿಶ್ ಮಾಡಿ, ಪಾರ್ಟಿಯನ್ನು ಎಂಜಾಯ್ ಮಾಡಿ ತೆರಳಿದ್ದಾರೆ. ಸಲ್ನಾನ್ ಖಾನ್ ಫಾರ್ಮ್ಹಸ್ ಮುಂಬೈ ಹೊರ ವಲಯದಲ್ಲಿ ಇದೆ. ಕೊವಿಡ್ ಸಮಯದಲ್ಲಿ ಅವರು ಇಲ್ಲಿಯೇ ಇದ್ದರು ಮತ್ತು ಕೃಷಿ ಮಾಡುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



