ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಪ್ರಕರಣ; ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆ

| Updated By: ರಾಜೇಶ್ ದುಗ್ಗುಮನೆ

Updated on: Jun 06, 2022 | 3:42 PM

ಇತ್ತೀಚೆಗೆ ಕೊಲೆಯಾದ ಸಿಧು ಮೂಸೆವಾಲಾ ಪ್ರಕರಣಕ್ಕೂ ಲಾರೆನ್ಸ್​ಗೂ ನಂಟಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ‘ಮೂಸೆವಾಲಾ ರೀತಿ ನಿಮ್ಮನ್ನು ಹತ್ಯೆ ಮಾಡುತ್ತೇವೆ’ ಎನ್ನುವ ಬೆದರಿಕೆ ಸಲ್ಲುಗೆ ಬಂದಿದೆ. ಈ ಕಾರಣಕ್ಕೆ ಲಾರೆನ್ಸ್​ನನ್ನು ವಿಚಾರಣೆ ಮಾಡಲಾಗುತ್ತಿದೆ.

ಸಲ್ಮಾನ್ ಖಾನ್​ಗೆ ಕೊಲೆ ಬೆದರಿಕೆ ಪ್ರಕರಣ; ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ವಿಚಾರಣೆ
ಲಾರೆನ್ಸ್​-ಸಲ್ಮಾನ್
Follow us on

ನಟ ಸಲ್ಮಾನ್ ಖಾನ್ (Salman Khan) ಹಾಗೂ ಅವರ ತಂದೆ ಸಲೀಮ್ ಖಾನ್​ಗೆ (Salim Khan) ಕೊಲೆ ಬೆದರಿಕೆ ಬಂದಿದೆ. ಈ ವಿಚಾರ ಸಾಕಷ್ಟು ಚರ್ಚೆ ಆಗುತ್ತಿದೆ. ಈ ಬೆದರಿಕೆ ಬೆನ್ನಲ್ಲೇ ಸಲ್ಮಾನ್ ಖಾನ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಮಧ್ಯೆ, ಈ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್​​ನನ್ನು ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಕರಣಕ್ಕೂ ಅವನಿಗೂ ಏನಾದರೂ ಸಂಬಂಧವಿದೆಯಾ ಎನ್ನುವ ನಿಟ್ಟಿನಲ್ಲಿ ತನಿಖೆ ಮಾಡಲಾಗುತ್ತಿದೆ.

ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲು 2011ರಲ್ಲಿ ಗ್ಯಾಂಗ್​​ಸ್ಟರ್ ಲಾರೆನ್ಸ್ ಬಿಷ್ಣೋಯ್ ಪ್ಲ್ಯಾನ್ ರೂಪಿಸಿದ್ದ. ‘ರೆಡಿ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲೇ ಕೊಲ್ಲಲು ಪ್ರಯತ್ನ ನಡೆದಿತ್ತು. ಆದರೆ, ಈ ಪ್ಲ್ಯಾನ್ ವಿಫಲವಾಗಿತ್ತು. ಇತ್ತೀಚೆಗೆ ಕೊಲೆಯಾದ ಸಿಧು ಮೂಸೆವಾಲಾ ಪ್ರಕರಣಕ್ಕೂ ಲಾರೆನ್ಸ್​ಗೂ ನಂಟಿದೆ ಎನ್ನಲಾಗುತ್ತಿದೆ. ಹೀಗಿರುವಾಗಲೇ ‘ಮೂಸೆವಾಲಾ ರೀತಿ ನಿಮ್ಮನ್ನು ಹತ್ಯೆ ಮಾಡುತ್ತೇವೆ’ ಎನ್ನುವ ಬೆದರಿಕೆ ಸಲ್ಲುಗೆ ಬಂದಿದೆ. ಈ ಕಾರಣಕ್ಕೆ ಲಾರೆನ್ಸ್​ನನ್ನು ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: Salman Khan: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಬೆನ್ನಲ್ಲೇ ಸಲ್ಮಾನ್ ಖಾನ್​ ಭದ್ರತೆ ಹೆಚ್ಚಳ

ಇದನ್ನೂ ಓದಿ
ಅವಕಾಶ ಇಲ್ಲದಾಗ 2 ಸಾವಿರ ರೂ. ಕೊಟ್ಟು ಸುಳ್ಳು ಸುದ್ದಿ ಮಾಡಿಸಿದ್ದ ಸಲ್ಮಾನ್​ ಖಾನ್​; ಒಪ್ಪಿಕೊಂಡು ಕಣ್ಣೀರಿಟ್ಟ ನಟ
‘ನಿಮ್ಮನ್ನೂ ಸಿಧು ಮೂಸೆವಾಲಾ ರೀತಿ ಕೊಲ್ಲುತ್ತೇವೆ’; ಸಲ್ಮಾನ್​ ಖಾನ್ ತಂದೆಗೆ ಕೊಲೆ ಬೆದರಿಕೆ
ಜೈಲಿನಲ್ಲಿರುವ ಗ್ಯಾಂಗ್​​ಸ್ಟರ್​​ ಲಾರೆನ್ಸ್​​​ ಬಿಷ್ಣೋಯ್​​ಯನ್ನು 5 ದಿನಗಳ ಕಾಲ ವಶಕ್ಕೆ ಪಡೆದ ದೆಹಲಿ ಪೊಲೀಸ್​​

ಸಲ್ಲುಗೆ ಬೆದರಿಕೆ ಪತ್ರ

ಮುಂಬೈನ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ಬಳಿ ಸಲೀಮ್ ನಿತ್ಯ ವಾಯುವಿಹಾರಕ್ಕೆ ತೆರಳುತ್ತಾರೆ. ಅವರು ವಿಶ್ರಾಂತಿ ಪಡೆಯುವ ಪ್ರದೇಶದಲ್ಲಿ ಪತ್ರ ಒಂದು ಸಿಕ್ಕಿದೆ. ಇದು ಸಲ್ಮಾನ್ ಖಾನ್ ಹಾಗೂ ತಂದೆ ಸಲೀಮ್ ಖಾನ್​ಗೆ ಬರೆಯಲಾದ ಪತ್ರ. ‘ಮೂಸೆವಾಲ ರೀತಿಯೇ ನಿಮ್ಮ ಪ್ರಾಣ ಹೋಗಲಿದೆ’ ಎಂದು ಪತ್ರದಲ್ಲಿ ಬೆದರಿಕೆವೊಡ್ಡಲಾಗಿದೆ. ಪಂಜಾಬಿ ಗಾಯಕ, ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ಸಂಚಲನ ಸೃಷ್ಟಿಸಿತ್ತು. ಈ ಬೆನ್ನಲ್ಲೇ ಸಲೀಮ್ ಖಾನ್​ಗೆ ಈ ರೀತಿ ಪತ್ರ ಬಂದಿರುವುದು ಆತಂಕ ಮೂಡಿಸಿದೆ.

ಈ ಪತ್ರ ಸಲೀಮ್ ಖಾನ್ ಭದ್ರತಾ ಸಿಬ್ಬಂದಿ ಅವರ ಗಮನಕ್ಕೆ ಬಂದಿದೆ. ಅವರು ಇದನ್ನು ತೆಗೆದು ಓದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐರ್​ ದಾಖಲು ಮಾಡಿಕೊಂಡಿದ್ದಾರೆ. ಈ ಪತ್ರ ಬರೆದವರು ಯಾರು, ಯಾವ ಉದ್ದೇಶದಿಂದ ಈ ರೀತಿ ಬೆದರಿಕೆ ಒಡ್ಡಲಾಗಿದೆ ಎಂಬುದು ತನಿಖೆ ನಂತರ ತಿಳಿದು ಬರಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.