ಸಲ್ಮಾನ್ ಖಾನ್ (Salman Khan) ಅವರು ಬಾಲಿವುಡ್ನ ಬೇಡಿಕೆಯ ನಟ. ಪ್ರತಿ ಸಿನಿಮಾಗೆ ಅವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಸಿನಿಮಾ ಸೋತ ಹೊರತಾಗಿಯೂ ನಿರ್ಮಾಪಕರು ಸಲ್ಲು ಮನೆ ಮುಂದೆ ಕಾಲ್ಶೀಟ್ಗಾಗಿ ಕಾದು ನಿಲ್ಲುತ್ತಾರೆ. ಸಲ್ಮಾನ್ ಖಾನ್ಗೆ ಕೇವಲ ಸಿನಿಮಾಗಳಿಂದ ಮಾತ್ರ ಹಣ ಹರಿದು ಬರುತ್ತಿಲ್ಲ. ಅವರು ದೇಶದ ನಾನಾ ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ. ಮುಂಬೈನಲ್ಲಿ ಅನೇಕ ಕಟ್ಟಡ ಅವರ ಹೆಸರಲ್ಲಿದೆ. ಈ ನಗರದ ಹೊರ ಭಾಗದಲ್ಲಿ ಫಾರ್ಮ್ಹೌಸ್ ಇದೆ. ಈಗ ಸಲ್ಮಾನ್ ಖಾನ್ ಮುಂಬೈನ ಕಟ್ಟಡವೊಂದನ್ನು ಬಾಡಿಗೆ ನೀಡಿದ್ದಾರೆ. ಇದಕ್ಕಾಗಿ ಅವರು ಪ್ರತಿ ತಿಂಗಳು ಪಡೆಯುವ ಬಾಡಿಗೆ ಬರೋಬ್ಬರಿ 89.6 ಲಕ್ಷ ರೂಪಾಯಿ!
ಸಲ್ಮಾನ್ ಖಾನ್ ಅವರು ಬಾಲಿವುಡ್ನಲ್ಲಿ ಗಟ್ಟಿಯಾಗಿ ನೆಲೆಯೂರಿದ್ದಾರೆ. ಅವರ ಸಾಲುಸಾಲು ಸಿನಿಮಾಗಳು ಸೋತಿವೆ. ಆದಾಗ್ಯೂ ಸಲ್ಮಾನ್ ಖಾನ್ ಅವರು ಬೇಡಿಕೆ ಕಳೆದುಕೊಂಡಿಲ್ಲ. ಸಿನಿಮಾದಿಂದ ಪಡೆದ ಸಂಭಾವನೆಯನ್ನು ಅವರು ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈನ ಹೃದಯಭಾಗದಲ್ಲಿರುವ ಕಟ್ಟಡವೊಂದನ್ನು ಸಲ್ಲು ಫ್ಯೂಚರ್ ರೀಟೇಲ್ ಗ್ರೂಪ್ಗೆ ಬಾಡಿಗೆ ನೀಡಿದ್ದಾರೆ. ಇದಕ್ಕಾಗಿ ಅವರು ಮೊದಲ ವರ್ಷ ಪ್ರತಿ ತಿಂಗಳು 89.6 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದಾರೆ. ಎರಡನೇ ವರ್ಷ ಈ ಬಾಡಿಗೆ 94.08 ಲಕ್ಷ ರೂ.ಗೆ ಏರಿಕೆ ಆಗಲಿದೆ.
ಸಾಂತಾಕ್ರ್ಯೂಜ್ ವೆಸ್ಟ್ ಭಾಗದಲ್ಲಿ ಈ ಕಟ್ಟಡ ಇದೆ. ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿಯನ್ನು ಬಾಡಿಗೆ ನೀಡಲಾಗಿದೆ. ಭದ್ರತಾ ಠೇವಣಿ ರೂಪದಲ್ಲಿ 2.68 ಕೋಟಿ ರೂಪಾಯಿ ಹಣವನ್ನು ಸಲ್ಲು ಪಡೆದಿದ್ದಾರೆ. ಈ ಕಟ್ಟಡದ ವಿಸ್ತೀರ್ಣ 23,042 ಚದರ ಅಡಿ ಇದೆ.
ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಬೆನ್ನಲ್ಲೇ ಸಲ್ಮಾನ್ ಖಾನ್ ಜತೆಗಿನ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ ಸುದೀಪ್
ಸಿನಿಮಾ ವಿಚಾರಕ್ಕೆ ಬರುವುದಾದರೆ ಸಲ್ಮಾನ್ ಖಾನ್ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಟೈಗರ್ 3’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿವೆ. ಈ ಚಿತ್ರಕ್ಕೆ ಕತ್ರಿನಾ ನಾಯಕಿ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಇಮ್ರಾನ್ ಹಶ್ಮಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಕಿಸಿ ಕಾ ಭಾಯ್, ಕಿಸಿ ಕಿ ಜಾನ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ.
Published On - 10:10 pm, Thu, 8 September 22