
ಸಲ್ಮಾನ್ ಖಾನ್ (Salman Khan) ಅವರು ಇಷ್ಟು ವರ್ಷಗಳ ಕಾಲ ಯಾರ ಬೆಂಬಲವನ್ನೂ ಕೇಳಿದವರಲ್ಲ. ಅವರ ಸಿನಿಮಾಗಳ ಪ್ರಚಾರಕ್ಕೆ ಯಾವುದೇ ದೊಡ್ಡ ಸ್ಟಾರ್ಗಳನ್ನು ಅವರು ಕರೆಸಿಲ್ಲ. ಏಕೆಂದರೆ ಸಲ್ಮಾನ್ ಅವರೇ ದೊಡ್ಡ ಸ್ಟಾರ್. ಅವರು ನಟಿಸಿದ್ದಾರೆ ಎಂಬುದು ತಿಳಿದರೆ ಸಾಕು ಜನರು ಸಿನಿಮಾ ವೀಕ್ಷಿಸುತ್ತಾರೆ ಎಂಬುದು ಅನೇಕರ ನಂಬಿಕೆ. ಆದರೆ, ಇತ್ತೀಚೆಗೆ ರಿಲೀಸ್ ಆದ ‘ಸಿಕಂದರ್’ ಸಿನಿಮಾ (Sikandar Movie) ಯಶಸ್ಸು ಕಾಣುವ ಸೂಚನೆ ಕಾಣುತ್ತಿಲ್ಲ. ಚಿತ್ರದ ಗಳಿಕೆ ತಗ್ಗುತ್ತಿದೆ. ಸಲ್ಮಾನ್ ಖಾನ್ ಸಿನಿಮಾ ಆದರೂ ನೂರು ಕೋಟಿ ರೂಪಾಯಿ ಗಳಿಸಲು ಒದ್ದಾಡುತ್ತಿದೆ. ಈಗ ಸಲ್ಮಾನ್ ಖಾನ್ ಅವರು ತಮಗೆ ಬಾಲಿವುಡ್ ಬೆಂಬಲದ ಅಗತ್ಯವಿದೆ ಎಂದಿದ್ದಾರೆ.
ಸಲ್ಮಾನ್ ಖಾನ್ ಅವರ ‘ಸಿಕಂದರ್’ ಸಿನಿಮಾ ಮಾರ್ಚ್ 30ರಂದು ರಿಲೀಸ್ ಆಯಿತು. ಈ ಸಿನಿಮಾದ ಒಂದು ದಿದನದ ಗಳಿಕೆ 30 ಕೋಟಿ ರೂಪಾಯಿ ಮೇಲೆ ದಾಟಿಲ್ಲ. ದೊಡ್ಡ ಬಜೆಟ್ ಸಿನಿಮಾಗಳು ಮೊದಲ ದಿನ 50 ಕೋಟಿ ರೂಪಾಯಿ ಗಳಿಸೋದು ಸಾಮಾನ್ಯವಾಗಿದೆ. ಆದರೆ, ಸಲ್ಲು ಸಿನಿಮಾ ಬಳಿ ಅದು ಸಾಧ್ಯವಾಗುತ್ತಿಲ್ಲ.
ಮಾರ್ಚ್ 30ರಂದು ‘ಸಿಕಂದರ್’ ಸಿನಿಮಾ ರಿಲೀಸ್ ಆಯಿತು. ಎಆರ್ ಮುರುಗದಾಸ್ ನಿರ್ದೇಶನದ ಚಿತ್ರಕ್ಕೆ ರಶ್ಮಿಕಾ ನಾಯಕಿ. ಈ ಚಿತ್ರ ಏಪ್ರಿಲ್ 2ರಂದು ಕೇವಲ 9.75 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಗಳಿಕೆ ಒಂದಂಕಿಗೆ ಇಳಿಕೆ ಆಗಿದೆ. ಚಿತ್ರದ ಒಟ್ಟಾರೆ ಗಳಿಕೆ 84.25 ಕೋಟಿ ರೂಪಾಯಿ ಆಗಿದೆ. ಸಲ್ಮಾನ್ ಖಾನ್ಗೆ ಇರೋ ಮಾರುಕಟ್ಟೆಗೆ, ಚಿತ್ರದ ಬಜೆಟ್ಗೆ ಹೋಲಿಕೆ ಮಾಡಿದರೆ ಈ ಗಳಿಕೆ ತುಂಬಾನೇ ಕಡಿಮೆಯೇ ಸರಿ.
ಇದನ್ನೂ ಓದಿ: ಕೊರಿಯನ್ ಹಾರ್ಟ್ ಮಾಡಲು ರಶ್ಮಿಕಾ ಒತ್ತಾಯ; ಮುಲಾಜಿಲ್ಲದೇ ನಿರಾಕರಿಸಿದ ಸಲ್ಮಾನ್
‘ನನ್ನ ಚಿತ್ರಗಳಿಗೆ ಬೆಂಬಲ ಬೇಡ ಎಂದು ಅವರು ಅಂದುಕೊಂಡಿರಬಹುದು. ಆದರೆ, ನನಗೂ ಸೇರಿದಂತೆ ಎಲ್ಲರಿಗೂ ಬೆಂಬಲ ಬೇಕು’ ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ಬೇರೆಯವರ ಚಿತ್ರಕ್ಕೆ ಬೆಂಬಲ ನೀಡುತ್ತಾರೆ. ಆದರೆ, ಅವರು ಸೂಪರ್ ಸ್ಟಾರ್ ಆಗಿರುವುದರಿಂದ ಬೆಂಬಲ ಬೇಡ ಎಂದುಕೊಳ್ಳುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:35 am, Thu, 3 April 25