ನಟ ಸಲ್ಮಾನ್ ಖಾನ್ (Salman Khan) ಅವರ ಅಭಿಮಾನಿಗಳು ‘ಟೈಗರ್ 3’ (Tiger 3) ಸಿನಿಮಾ ಮೇಲೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಆಗಿದ್ದೇ ಬೇರೆ. ಭಾರತೀಯ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ 9 ದಿನಕ್ಕೆ 230 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಲ್ಮಾನ್ ಖಾನ್ ಅವರಂತಹ ಸ್ಟಾರ್ ನಟನ ಸಿನಿಮಾಗೆ ಇದು ತುಂಬ ಕಡಿಮೆ ಮೊತ್ತ. ಹಾಗಿದ್ದರೂ ಕೂಡ ಅವರು ‘ಟೈಗರ್ 4’ (Tiger 4) ಸಿನಿಮಾ ಮಾಡುವ ಬಗ್ಗೆ ಕನಸು ಕಂಡಿದ್ದಾರೆ. ಈ ಕುರಿತು ಅವರೇ ಓಪನ್ ಆಗಿ ಹೇಳಿಕೊಂಡಿದ್ದಾರೆ.
‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳ ಮುಂದುವರಿದ ಭಾಗವಾಗಿ ‘ಟೈಗರ್ 3’ ಸಿನಿಮಾ ಮೂಡಿಬಂತು. ಈ ಮೂರೂ ಸಿನಿಮಾಗಳಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರು ಜೋಡಿಯಾಗಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪದ್ಯದ ವೇಳೆ ಸಲ್ಮಾನ್ ಖಾನ್ ಮತ್ತು ಕತ್ರಿಕಾ ಕೈಫ್ ಅವರು ಅತಿಥಿಗಳಾಗಿ ಟಿವಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ‘ಟೈಗರ್ 4’ ಬಗ್ಗೆ ಮಾಹಿತಿ ಹೊರಬಿತ್ತು.
ಇದನ್ನೂ ಓದಿ: ವಿಶ್ವಕಪ್ನಿಂದ ‘ಟೈಗರ್ 3’ ಕಲೆಕ್ಷನ್ಗೆ ಹೊಡೆತ ಬಿತ್ತೆ? ಸಲ್ಮಾನ್ ಹೇಳಿದ್ದು ಹೀಗೆ
ವಿರಾಟ್ ಕೊಹ್ಲಿ ಬಗ್ಗೆ ಕತ್ರಿನಾ ಕೈಫ್ ಮಾತನಾಡುತ್ತಿದ್ದರು. ‘ವಿರಾಟ್ ಅವರು ಆರ್ಸಿಬಿ ಪರವಾಗಿ ಐಪಿಎಲ್ ಆಡುವುದನ್ನು ಶುರು ಮಾಡಿದಾಗಿನಿಂದ ಇಂದಿನ ತನಕ ಅವರ ಗ್ರಾಫ್ ನೋಡಿ..’ ಎಂದು ಕತ್ರಿನಾ ಹೇಳಿದರು. ಈ ವೇಳೆ ಮಧ್ಯ ಮಾತನಾಡಿದ ಸಲ್ಮಾನ್ ಖಾನ್, ‘ನೀವು ನನ್ನನ್ನು ಕೂಡ ಟೈಗರ್ 1, ಟೈಗರ್ 2 ಮತ್ತು ಟೈಗರ್ 3 ಚಿತ್ರದಲ್ಲಿ ನೋಡಿದ್ದೀರಿ. ಅದೂ ಕೂಡ 57ನೇ ವಯಸ್ಸಿನಲ್ಲಿ. 60ನೇ ವಯಸ್ಸಿನಲ್ಲಿ ಟೈಗರ್ 4 ಬರಲಿದೆ ಕಾಯಿರಿ’ ಎಂದರು. ಈ ಸಂದರ್ಭದ ವಿಡಿಯೋ ಕ್ಲಿಪ್ ವೈರಲ್ ಆಗಿದೆ.
#katrinakaif has all praises for her neighbor #ViratKohli𓃵 & @BeingSalmanKhan CONFIRMS #tiger4 !!!! So much in one single clip 😍😍 love how kk’s favorite is #ViratKohli𓃵 !!! ❤️❤️❤️ #INDvsAUS pic.twitter.com/QicFQlFSWS
— sanghamitra 🇮🇳 (@sanghamitra_4) November 19, 2023
ಮನೀಶ್ ಶರ್ಮಾ ಅವರು ‘ಟೈಗರ್ 3’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ಅದ್ದೂರಿಯಾಗಿ ಈ ಸಿನಿಮಾವನ್ನು ನಿರ್ಮಿಸಿದೆ. ಆ್ಯಕ್ಷನ್ ದೃಶ್ಯಗಳು ಭರ್ಜರಿ ಆಗಿವೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮಾತ್ರವಲ್ಲದೇ ಹೃತಿಕ್ ರೋಷನ್, ಶಾರುಖ್ ಖಾನ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇಮ್ರಾನ್ ಹಷ್ಮಿ ಅವರು ವಿಲನ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಈ ಎಲ್ಲ ಸ್ಟಾರ್ ನಟರು ಇದ್ದರೂ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲು ‘ಟೈಗರ್ 3’ ಸಿನಿಮಾಗೆ ಸಾಧ್ಯವಾಗಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.