ಮೊದಲ ದಿನವೇ ಸಿಕಂದರ್ ಸಿನಿಮಾ ಲೀಕ್; ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್

|

Updated on: Mar 30, 2025 | 3:08 PM

ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ‘ಸಿಕಂದರ್’ ಚಿತ್ರಕ್ಕೆ ಆರಂಭದಲ್ಲೇ ಅಡೆತಡೆ ಉಂಟಾಗಿದೆ. ಮೊದಲ ದಿನವೇ ಪೈರಸಿ ಆಗಿದೆ. ಇನ್ನೊಂದೆಡೆ ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಈ ಎಲ್ಲ ಕಾರಣಗಳಿಂದಾಗ ಸಿನಿಮಾದ ಬಾಕ್ಸ್ ಆಫೀಸ್​ ಕಲೆಕ್ಷನ್ ಮೇಲೆ ದೊಡ್ಡ ಹೊಡೆತ ಬೀಳಲಿದೆ.

ಮೊದಲ ದಿನವೇ ಸಿಕಂದರ್ ಸಿನಿಮಾ ಲೀಕ್; ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್
Salman Khan
Follow us on

ಈದ್ ಪ್ರಯುಕ್ತ ‘ಸಿಕಂದರ್’ (Sikandar) ಸಿನಿಮಾ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಈ ಚಿತ್ರದ ಮೂಲಕ ಭರ್ಜರಿ ಯಶಸ್ಸು ಪಡೆಯುವ ಆಸೆಯನ್ನು ಸಲ್ಮಾನ್ ಖಾನ್ (Salman Khan) ಇಟ್ಟುಕೊಂಡಿದ್ದರು. ಆದರೆ ಮೊದಲ ದಿನವೇ ಈ ಚಿತ್ರಕ್ಕೆ ವಿಘ್ನ ಎದುರಾಗಿದೆ. ಹೌದು, ‘ಸಿಕಂದರ್’ ಸಿನಿಮಾ ಮೇಲೆ ಪೈರಸಿ ಕರಿನೆರಳು ಬಿದ್ದಿದೆ. ಇದರಿಂದ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್ ಆಗಿದೆ. ನಿರ್ಮಾಪಕರಿಗೆ ತೀವ್ರ ನಿರಾಸೆ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ನಿರೀಕ್ಷಿತ ಪ್ರಮಾಣದ ಸಕ್ಸಸ್ ಸಿಕ್ಕಿಲ್ಲ. ಬೇರೆ ಹೀರೋಗಳ ಸಿನಿಮಾಗಳು ಐನೂರು ಕೋಟಿ, 800 ಕೋಟಿ, ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಅಬ್ಬರಿಸಿವೆ. ಆದರೆ ಸಲ್ಮಾನ್ ಖಾನ್ ಅವರು ಅಂಥ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ. ಅಭಿಮಾನಿಗಳು ‘ಸಿಕಂದರ್’ ಚಿತ್ರದ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪೈರಸಿ ಕಾರಣದಿಂದ ಚಿತ್ರಕ್ಕೆ ಹೊಡೆತ ಬಿದ್ದಿದೆ.

ಪೈರಸಿ ಮಾಡುವ ನೂರಾರು ವೆಬ್​ಸೈಟ್​ಗಳಲ್ಲಿ ‘ಸಿಕಂದರ್’ ಸಿನಿಮಾ ಅಪ್​ಲೋಡ್ ಆಗಿದೆ. ನಿರ್ಮಾಪಕ ಸಾಜಿದ್ ನಾಡಿದ್ವಾಲಾ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ತಮ್ಮ ತಂಡದ ಜೊತೆ ಸೇರಿಕೊಂಡ 600ಕ್ಕೂ ಅಧಿಕ ಸೈಟ್​ಗಳಿಂದ ಪೈರಸಿ ಲಿಂಕ್​ಗಳಲ್ಲಿ ತೆಗೆದುಹಾಕಿದ್ದಾರೆ ಎಂದು ವರದಿ ಆಗಿದೆ. ಆದರೂ ಕೂಡ ‘ಸಿಕಂದರ್​’ ಸಿನಿಮಾಗೆ ಹಿನ್ನಡೆ ಆಗಿದೆ.

ಇದನ್ನೂ ಓದಿ
ಸಲ್ಲು ಜೊತೆ ಪ್ರೇಮ, ಇಬ್ಬರು ಮಕ್ಕಳ ತಂದೆಯ ಜೊತೆ ವಿವಾಹ, ಆ ಬಳಿಕ ವಿಚ್ಛೇದನ
ಸಿನಿಮಾ ಕೈಬಿಟ್ಟು ಸಲ್ಮಾನ್ ಖಾನ್​ಗೆ ಕ್ಷಮೆ ಕೇಳಿದ ಅಟ್ಲಿ; ರಾಂಗ್ ಆದ ನಟ?
ದಕ್ಷಿಣದ ನಿರ್ದೇಶಕನ ಮೇಲೆ ಉರಿದು ಬಿದ್ದ ಸಲ್ಮಾನ್ ಖಾನ್ ಅಭಿಮಾನಿಗಳು, ಕಾರಣ?
ಸಲ್ಮಾನ್ ಖಾನ್​ಗೆ ಬಂದಿರಲಿಲ್ಲ ಆಫರ್; ಜೀವನ ಬದಲಾಯಿಸಿದ ವ್ಯಕ್ತಿ ಇವರು

ಇದನ್ನೂ ಓದಿ: ರಶ್ಮಿಕಾಗೆ ಹಿಂದಿ ಕಲಿಯಲು ಆಗಲ್ಲ, ಕಾರಣ ಹೇಳಿದ ಸಲ್ಮಾನ್ ಖಾನ್

ಇನ್ನು, ಫಸ್ಟ್​ ಡೇ ಫಸ್ಟ್​ ಶೋ ‘ಸಿಕಂದರ್’ ಸಿನಿಮಾ ನೋಡಿದ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕಲಾವಿದರ ನಟನೆ ಕಳಪೆ ಆಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸುವಲ್ಲಿ ಈ ಸಿನಿಮಾ ವಿಫಲ ಆಗಿದೆ. ಇದು ಕೂಡ ಸಿನಿಮಾಗೆ ಹಿನ್ನಡೆ ಉಂಟುಮಾಡಿದೆ. ರಶ್ಮಿಕಾ ಮಂದಣ್ಣ ಅವರು ಬ್ಯಾಕ್ ಟು ಬ್ಯಾಕ್ ಯಶಸ್ಸು ಕಾಣುತ್ತಾ ಬಂದಿದ್ದಾರೆ. ಆದರೆ ಈಗ ‘ಸಿಕಂದರ್’ ಪೈರಸಿ ಆಗಿರುವುದರಿಂದ ಅವರ ಯಶಸ್ಸಿನ ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.