ಜೂಹಿ ಚಾವ್ಲಾ ಮದುವೆ ಆಗಲು ಹೊರಟಿದ್ದ ಸಲ್ಲು; ತಂದೆಯಿಂದಲೇ ಬಂದಿತ್ತು ವಿರೋಧ

ಇಷ್ಟು ಹಣ ಇದ್ದರೂ ಸಲ್ಲುಗೆ ಮದುವೆ ಆಗುವ ಆಸೆ ಉಳಿದುಕೊಂಡಿಲ್ಲ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಜೂಹಿ ಚಾವ್ಲಾ ಅವರನ್ನು ವಿವಾಹ ಆಗಬೇಕು ಎನ್ನುವುದು ಸಲ್ಲು ಆಲೋಚನೆ ಆಗಿತ್ತು.

ಜೂಹಿ ಚಾವ್ಲಾ ಮದುವೆ ಆಗಲು ಹೊರಟಿದ್ದ ಸಲ್ಲು; ತಂದೆಯಿಂದಲೇ ಬಂದಿತ್ತು ವಿರೋಧ
ಜೂಹಿ-ಸಲ್ಲು

Updated on: Mar 16, 2023 | 6:30 AM

ಬಾಲಿವುಡ್​ನ ಬಹುತೇಕ ಸೆಲೆಬ್ರಿಟಿಗಳು ಮದುವೆ ಆಗಿ ಮಕ್ಕಳ ಜೊತೆ ಹಾಯಾಗಿದ್ದಾರೆ. ಆದರೆ, ಸಲ್ಮಾನ್ ಖಾನ್ (Salman Khan) ಮಾತ್ರ ಇದಕ್ಕೆ ಭಿನ್ನ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದರೂ ಅವರು ಮದುವೆ ಆಗಿಲ್ಲ. ಅವರ ವಯಸ್ಸು ಈಗ 57. ಹೀಗಿದ್ದರೂ ಸಲ್ಮಾನ್ ಖಾನ್ ಮದುವೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಮಾತ್ರ ನಿಂತಿಲ್ಲ. ಸಲ್ಲು ಮದುವೆ ಆಗದೇ ಇದ್ದರು ಅನೇಕರು ಅವರ ಬಾಳಲ್ಲಿ ಬಂದು ಹೋಗಿದ್ದಾರೆ. ಐಶ್ವರ್ಯಾ ರೈ (Aishwarya Rai) , ಕತ್ರಿನಾ ಕೈಫ್.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಬಾಲಿವುಡ್​ನ ಖ್ಯಾತ ನಟಿ ಜೂಹಿ ಚಾವ್ಲಾ ಅವರನ್ನು ಸಲ್ಲು ಮದುವೆ ಆಗಬೇಕು ಎಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ.

ಸಲ್ಮಾನ್ ಖಾನ್ ಅವರು ಬಾಲಿವುಡ್​ನಲ್ಲಿ ಬೇಡಿಕೆಯ ಹೀರೋ. ಅವರಿಗೆ ಬೇಕಷ್ಟು ಆಸ್ತಿ ಇದೆ. ಮುಂಬೈನಲ್ಲಿ ಹಲವು ಕಡೆ ಅವರು ಪ್ರಾಪರ್ಟಿ ಹೊಂದಿದ್ದಾರೆ. ಅನೇಕ ಬ್ರ್ಯಾಂಡ್​ಗಳಿಗೆ ರಾಯಭಾರಿ ಆಗಿದ್ದಾರೆ. ಚಿತ್ರರಂಗದಿಂದ, ಬಿಗ್ ಬಾಸ್ ನಿರೂಪಣೆಯಿಂದ ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ. ಇಷ್ಟು ಹಣ ಇದ್ದರೂ ಸಲ್ಲುಗೆ ಮದುವೆ ಆಗುವ ಆಸೆ ಉಳಿದುಕೊಂಡಿಲ್ಲ. ಈಗ ಅವರ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಜೂಹಿ ಚಾವ್ಲಾ ಅವರನ್ನು ವಿವಾಹ ಆಗಬೇಕು ಎನ್ನುವುದು ಸಲ್ಲು ಆಲೋಚನೆ ಆಗಿತ್ತು. ಆದರೆ, ಜೂಹಿ ತಂದೆ ಈ ಪ್ರಪೋಸಲ್ ರಿಜೆಕ್ಟ್ ಮಾಡಿದ್ದರು.

ಇದನ್ನೂ ಓದಿ
‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್: ಏಪ್ರಿಲ್​ನಿಂದ ಶೂಟಿಂಗ್; ಸಂಭಾವನೆ ಎಷ್ಟು?
‘ಇದು ಡ್ಯಾನ್ಸ್ ಅಲ್ಲ ವ್ಯಾಯಾಮ’; ಡ್ಯಾನ್ಸ್ ಮಾಡಲು ಹೋಗಿ ನಗೆಪಾಟಲಿಗೀಡಾದ ಸಲ್ಮಾನ್ ಖಾನ್
ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು
134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

ಜೂಹಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಪ್ರಶ್ನೆ ಮಾಡಲಾದ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಇದಕ್ಕೆ ಉತ್ತರಿಸಿದ ಅವರು, ‘ಜೂಹಿ ತುಂಬಾನೇ ಸ್ವೀಟ್. ನಾನು ಅವರ ತಂದೆಯ ಬಳಿ ನಿಮ್ಮ ಮಗಳ ನನಗೆ ಮದುವೆ ಮಾಡಿಕೊಡಿ ಎಂದು ಕೇಳಿದ್ದೆ. ಆದರೆ, ಅವರು ಈ ಪ್ರಪೋಸಲ್ ರಿಜೆಕ್ಟ್ ಮಾಡಿದರು. ಬಹುಶಃ ನಾನು ಸ್ಯೂಟೆಬಲ್ ಅಲ್ಲ ಅನ್ನೋದು ಅವರ ಅಭಿಪ್ರಾಯ ಆಗಿತ್ತು ಅನಿಸುತ್ತದೆ. ಅವರಿಗೆ ಏನು ಬೇಕಿತ್ತು ಗೊತ್ತಿಲ್ಲ’ ಎಂದಿದ್ದರು ಸಲ್ಲು.

ಇದನ್ನೂ ಓದಿ: ಸಲ್ಮಾನ್ ಖಾನ್ ಒಟ್ಟೂ ಆಸ್ತಿ ಮೊತ್ತ ಇಷ್ಟೊಂದಾ? ಸ್ಟಾರ್ ನಟನ ಪ್ರಾಪರ್ಟಿ ಬಗ್ಗೆ ಇಲ್ಲಿದೆ ಮಾಹಿತಿ

ಜೂಹಿ ಚಾವ್ಲಾ ಅವರು 1995ರಲ್ಲಿ ಜಯ್ ಮೆಹ್ತಾ ಅವರನ್ನು ಮದುವೆ ಆದರು. ಈ ದಂಪತಿಗೆ ಜಾನ್ವಿ ಮೆಹ್ತಾ ಹಾಗೂ ಅರ್ಜುನ್ ಮೆಹ್ತಾ ಹೆಸರಿನ ಮಕ್ಕಳಿದ್ದಾರೆ. ಜೂಹಿ ನಟನೆಯ ‘ದೀವಾನಾ ಮಸ್ತಾನಾ’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿದ್ದರು. ಅದನ್ನು ಹೊರತುಪಡಿಸಿ ಇವರು ಒಟ್ಟಾಗಿ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ