ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಶಾರುಖ್ ಒಡೆತನದ ‘ಮನ್ನತ್’ ನಿವಾಸ ಸಲ್ಲುದಾಗುತ್ತಿತ್ತು

ಶಾರುಖ್ ಖಾನ್ ಹಾಗೂ ಗೌರಿ ಖಾನ್ 2001ರಲ್ಲಿ ಈ ಮನೆ ಖರೀದಿ ಮಾಡಿದ್ದರು. ಸಾಕಷ್ಟು ಸಾಲ ಮಾಡಿ ಈ ಮನೆಯನ್ನು ಅವರು ಕೊಂಡುಕೊಂಡಿದ್ದರು. ಈ ಮನೆ ಈಗ ಸುಮಾರು 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ.   

ಎಲ್ಲವೂ ಅಂದುಕೊಂಡಂತೆ ಆಗಿದ್ರೆ ಶಾರುಖ್ ಒಡೆತನದ ‘ಮನ್ನತ್’ ನಿವಾಸ ಸಲ್ಲುದಾಗುತ್ತಿತ್ತು
ಶಾರುಖ್-ಸಲ್ಲು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 27, 2024 | 7:30 AM

ಶಾರುಖ್ ಖಾನ್ (Shah Rukh Khan) ಅವರು ಇಂದು ಸಾವಿರಾರು ಕೋಟಿ ರೂಪಾಯಿ ಒಡೆಯ. ದುಬಾರಿ ಕಾರು, ಐಪಿಎಲ್ ಟೀಂ, ನಿರ್ಮಾಣ ಸಂಸ್ಥೆ ಹೀಗೆ ಹಣ ಮಾಡಲು ಏನೇನು ಬೇಕೋ ಅದೆಲ್ಲವನ್ನೂ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಮುಂಬೈನಲ್ಲಿ ಅವರು ಐಷಾರಾಮಿ ಮನೆ ಹೊಂದಿದ್ದು, ‘ಮನ್ನತ್’ ಎಂದು ಹೆಸರು ಇಟ್ಟಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ನಿವಾಸ ಸಲ್ಮಾನ್ ಖಾನ್​ದಾಗುತ್ತಿತ್ತು. ಆದರೆ, ತಂದೆ ಇದಕ್ಕೆ ನಿರಾಕರಿಸಿದ್ದರಿಂದ ಸಲ್ಮಾನ್ ಖಾನ್ ಆ ಬಗ್ಗೆ ಆಸಕ್ತಿ ತೋರಿಸಿಲ್ಲ.

ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ‘ಪಠಾಣ್’ ಚಿತ್ರದಲ್ಲಿ ಸಲ್ಲು ಅತಿಥಿ ಪಾತ್ರ ಮಾಡಿದರೆ, ಸಲ್ಮಾನ್ ನಟನೆಯ ‘ಟೈಗರ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರು ನಟಿಸಿದ್ದರು. ಇವರು ಒಟ್ಟಾಗಿ ‘ಟೈಗರ್ vs ಪಠಾಣ್’ ಸಿನಿಮಾದಲ್ಲಿ ನಟಿಸಲಿದ್ದಾರಂತೆ. ಈ ಮೊದಲು ನೀಡಿದ ಸಂದರ್ಶನ ಒಂದರಲ್ಲಿ ಸಲ್ಮಾನ್ ಖಾನ್ ಅವರು ಮನ್ನತ್ ಬಗ್ಗೆ ಮಾತನಾಡಿದ್ದರು.

‘ಶಾರುಖ್ ಖಾನ್ ಅವರಲ್ಲಿರುವ ಯಾವ ವಸ್ತು ನಿಮಗೆ ಬೇಕು ಎಂದನಿಸುತ್ತದೆ’ ಎಂದು ಸಲ್ಲುಗೆ ಕೇಳಲಾಯಿತು. ಈ ವೇಳೆ ಅವರು ಯೋಚಿಸದೇ ‘ಮನ್ನತ್’ ಹೆಸರನ್ನು ಹೇಳಿದ್ದಾರೆ. ‘ಆ ಮನೆಯ ಆಫರ್ ನನಗೆ ಮೊದಲು ಬಂದಿತ್ತು. ಆಗ ನನ್ನ ತಂದೆ (ನಿರ್ಮಾಪಕ ಹಾಗೂ ಬರಹಗಾರ ಸಲೀಂ ಖಾನ್) ಇಷ್ಟೊಂದು ದೊಡ್ಡ ಮನೆ ಇಟ್ಟುಕೊಂಡು ಏನು ಮಾಡ್ತೀಯಾ ಎಂದು ಕೇಳಿದರು. ನಾನು ಶಾರುಖ್ ಖಾನ್ ಬಳಿ ಇದೇ ಪ್ರಶ್ನೆ ಕೇಳಬೇಕು ಎಂದುಕೊಂಡಿದ್ದೇನೆ’ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದರು.

ಇದನ್ನೂ ಓದಿ: ಸಲ್ಮಾನ್​ ಖಾನ್ ಮನೆ ಎದುರು ಗುಂಡಿನ ದಾಳಿ ಪ್ರಕರಣ, ಶೂಟರ್​ಗಳಿಗೆ ಬಂದೂಕು ನೀಡಿದ್ದ ಇಬ್ಬರ ಬಂಧನ

ಶಾರುಖ್ ಖಾನ್ ಹಾಗೂ ಗೌರಿ ಖಾನ್ 2001ರಲ್ಲಿ ಈ ಮನೆ ಖರೀದಿ ಮಾಡಿದ್ದರು. ಸಾಕಷ್ಟು ಸಾಲ ಮಾಡಿ ಈ ಮನೆಯನ್ನು ಅವರು ಕೊಂಡುಕೊಂಡಿದ್ದರು. ಈ ಮನೆ ಈಗ ಸುಮಾರು 200 ಕೋಟಿ ರೂಪಾಯಿ ಬೆಲೆ ಬಾಳುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು