‘ಡಿಸೆಂಬರ್​ನಲ್ಲಿ ನಟಿ ಮೇಧಾ ಶಂಕರ್ ಜೊತೆ ಮದುವೆ ಆಗೋಕಾಗಲ್ಲ’; ಸಮಯ್ ರೈನಾ

'12ತ್ ಫೇಲ್' ಸಿನಿಮಾದ ನಟಿ ಮೇಧಾ ಶಂಕರ್ ಹಾಗೂ ಹಾಸ್ಯನಟ ಸಮಯ್ ರೈನಾ ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ವದಂತಿಗೆ ತೆರೆ ಬಿದ್ದಿದೆ. ಡಿಸೆಂಬರ್‌ನಲ್ಲಿ ತಮ್ಮ ಇಂಡಿಯಾ ಟೂರ್ ಇರುವುದಾಗಿ ಹೇಳಿರುವ ಸಮಯ್, ತಮಾಷೆಯಾಗಿ ಮದುವೆ ವದಂತಿಯನ್ನು ತಳ್ಳಿಹಾಕಿದ್ದು ನಟಿ ಮೇಧಾ ಶಂಕರ್ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

‘ಡಿಸೆಂಬರ್​ನಲ್ಲಿ ನಟಿ ಮೇಧಾ ಶಂಕರ್ ಜೊತೆ ಮದುವೆ ಆಗೋಕಾಗಲ್ಲ’; ಸಮಯ್ ರೈನಾ
ಸಮಯ್-ಮೇಧಾ
Image Credit source: Samay-Medha Instagram

Updated on: Sep 21, 2026 | 11:03 AM

ಮುಖ್ಯಾಂಶಗಳು

  • ನಟಿ ಮೇಧಾ ಶಂಕರ್ ಜೊತೆ ಮದುವೆ
  • ಸಮಯ್ ರೈನಾ ಕೊಟ್ಟ ತಮಾಷೆಯ ಉತ್ತರ
  • ವೈರಲ್ ಆಯ್ತು ಕಾಮಿಡಿಯನ್ ಪೋಸ್ಟ್

’12th ಫೇಲ್’ ಸಿನಿಮಾ ಖ್ಯಾತಿಯ ನಟಿ ಮೇಧಾ ಶಂಕರ್ ಹಾಗೂ ಜನಪ್ರಿಯ ಸ್ಟ್ಯಾಂಡಪ್ ಕಾಮಿಡಿಯನ್ ಸಮಯ್ ರೈನಾ ಪ್ರೀತಿಸುತ್ತಿದ್ದಾರೆ ಎನ್ನುವ ವದಂತಿ ಬಾಲಿವುಡ್‌ನಲ್ಲಿ ಹರಿದಾಡುತ್ತಿತ್ತು. ಸಾರ್ವಜನಿಕವಾಗಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರಿಂದ ಈ ಗಾಸಿಪ್‌ಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಿತ್ತು. ಇದೀಗ ಡಿಸೆಂಬರ್‌ನಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಸಮಯ್ ರೈನಾ ತಮಾಷೆಯಾಗಿ ಮೌನ ಮುರಿದಿದ್ದಾರೆ.

ರೆಡ್ಡಿಟ್‌ನಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಒಂದರಲ್ಲಿ ಸಮಯ್ ರೈನಾ ಮತ್ತು ಮೇಧಾ ಶಂಕರ್ ಡಿಸೆಂಬರ್​ನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಈ ವಿಷಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಸಮಯ್ ರೈನಾ, ತಮ್ಮದೇ ಶೈಲಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ‘ಡಿಸೆಂಬರ್‌ನಲ್ಲಿ ನನ್ನ ಇಂಡಿಯಾ ಟೂರ್ ಇದೆ. ಹಾಗಾಗಿ ಕ್ಷಮಿಸಿ ಮೇಧಾ ಜೊತೆಗಿನ ಮದುವೆಯನ್ನು ಮುಂದೂಡಬೇಕಾಗುತ್ತದೆ’ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ನಟಿ ಮೇಧಾ ಶಂಕರ್ ನಗುವಿನ ಇಮೋಜಿಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಕರು ಒಂದರ ಫೋಟೋ ಹಂಚಿಕೊಂಡು, ಈ ಎಲ್ಲಾ ಆಧಾರರಹಿತ ಮದುವೆ ವದಂತಿಗಳನ್ನು ನಾನು ಹೀಗೆಯೇ ನೋಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಮೇಧಾ

ಮೇಧಾ

ಇವರಿಬ್ಬರು ಪಾರ್ಟಿಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು ಹಾಗೂ ಸಮಯ್ ಅವರ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋನಲ್ಲಿ ಮೇಧಾ ಭಾಗವಹಿಸಿದ್ದು ಗಾಸಿಪ್‌ಗಳಿಗೆ ಕಾರಣವಾಗಿತ್ತು. ಇತ್ತೀಚೆಗೆ ಇಬ್ಬರೂ ರಜೆಯ ದಿನಗಳಲ್ಲಿ ಹಂಚಿಕೊಂಡ ಫೋಟೋಗಳ ಬ್ಯಾಕ್‌ಗ್ರೌಂಡ್ ಒಂದೇ ರೀತಿಯಲ್ಲಿದ್ದುದ್ದನ್ನು ನೆಟ್ಟಿಗರು ಪತ್ತೆಹಚ್ಚಿದ್ದರು. ಆದರೂ ಇಬ್ಬರೂ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ.

ಇದನ್ನೂ ಓದಿ:  ಸಮಯ್ ರೈನಾ ಶೋಗೆ ಅತಿಥಿಯಾಗಿ ಎಂಟ್ರಿ ಕೊಟ್ಟರಾ ನಟಿ ಶ್ರೀಲೀಲಾ

ವೃತ್ತಿಜೀವನದ ವಿಷಯಕ್ಕೆ ಬಂದರೆ, ನಟಿ ಮೇಧಾ ಶಂಕರ್ ಶೀಘ್ರದಲ್ಲೇ ಪತ್ತೇದಾರಿ ಕಾಮಿಡಿ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಲಕ್ಷ್ಮಣ್ ಉತೇಕರ್ ನಿರ್ಮಾಣದ ಈ ಚಿತ್ರದಲ್ಲಿ ಸನ್ನಿ ಕೌಶಲ್ ಮತ್ತು ನಿಮ್ರತ್ ಕೌರ್ ಕೂಡ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಮಯ್ ರೈನಾ ಕೂಡ ತಮ್ಮ ಸಾಲು ಸಾಲು ಕಾಮಿಡಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:01 am, Mon, 21 September 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us