ಪ್ರತಿಯೊಂದು ಹೆಣ್ಣು ಮದುವೆ ಬಗ್ಗೆ, ಮದುವೆ ಆಗುವ ಹುಡುಗನ ಬಗ್ಗೆ ತಮ್ಮದೇ ಕನಸಿರುತ್ತದೆ. ಇದರ ಜತೆಗೆ ಸಾಕಷ್ಟು ಕಂಡೀಷನ್ ಕೂಡ ಇರುತ್ತದೆ. ಈ ಷರತ್ತುಗಳಿಗೆ ಒಪ್ಪದಿದ್ದರೆ ಮದುವೆ ಆಗೋಕೆ ಹುಡುಗಿಯರು ಹಿಂದೇಟು ಹಾಕುತ್ತಾರೆ. ಸೆಲೆಬ್ರಿಟಿಗಳ ವಿಚಾರದಲ್ಲಂತೂ ಷರತ್ತುಗಳ ಪಟ್ಟಿ ತುಂಬಾನೇ ಉದ್ದ ಇರುತ್ತದೆ. ಅದನ್ನು ಈಡೇರಿಸುವುದು ಅಷ್ಟು ಸುಲಭದ ಮಾತಲ್ಲ. ಈಗ ನಟಿ ಸಾರಾ ಅಲಿ ಖಾನ್ ಕೂಡ ಭವಿಷ್ಯದ ಗಂಡನಿಗೆ ಷರತ್ತೊಂದನ್ನು ಹಾಕಿದ್ದಾರೆ. ಅಷ್ಟೇ ಅಲ್ಲ, ಇದನ್ನು ಪೂರೈಸದಿದ್ದರೆ ಮದುವೆ ಆಗುವುದಿಲ್ಲ ಎಂದಿದ್ದಾರೆ.
ಸಾರಾ ಅಲಿ ಖಾನ್ ‘ಅಂತರಂಗಿ ರೇ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ನಲ್ಲಿ ಸಾರಾ ಪರ್ಫಾರ್ಮೆನ್ಸ್ ನೋಡಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅಕ್ಷಯ್ ಕುಮಾರ್, ತಮಿಳು ನಟ ಧನುಷ್, ಸಾರಾ ಅಲಿ ಖಾನ್ ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಆನಂದ್ ಎಲ್. ರಾಯ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕ್ರಿಸ್ಮಸ್ ಪ್ರಯುಕ್ತ ಈ ಚಿತ್ರ ಡಿಸೆಂಬರ್ 24ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಸಾರಾ ಬ್ಯುಸಿ ಆಗಿದ್ದಾರೆ. ಈ ವೇಳೆ ನಾನಾ ವಿಚಾರಗಳ ಬಗ್ಗೆ ಸಾರಾ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರು ತಮ್ಮ ವೈಯಕ್ತಿಕ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ. ಮದುವೆ ಆಗುವ ಹುಡುಗ ಹೇಗಿರಬೇಕು ಎಂದು ಹೇಳುವುದರ ಜತೆಗೆ ಅವರ ಷರತ್ತು ಏನು ಎಂಬುದನ್ನು ಹೇಳಿದ್ದಾರೆ.
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ದಂಪತಿಯ ಮಗಳು ಸಾರಾ. ಸೈಫ್ ಹಾಗೂ ಅಮೃತಾ ದೂರವಾಗಿದ್ದಾರೆ. ಹೀಗಾಗಿ ಸಾರಾ ಅಮ್ಮನ ಜತೆ ಇದ್ದಾರೆ. ಮದುವೆ ಆಗುವ ಹುಡುಗ ಸಾರಾ ಹಾಗೂ ಅವರ ಅಮ್ಮನ ಜತೆ ವಾಸ ಮಾಡಬೇಕು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಅಮ್ಮನನ್ನು ನಾನು ಎಂದಿಗೂ ಒಂಟಿಯಾಗಿ ಬಿಡುವುದಿಲ್ಲ. ಈ ಕಾರಣಕ್ಕೆ ನನ್ನ ಮದುವೆ ಆಗುವ ಹುಡುಗ ನನ್ನ ಹಾಗೂ ನನ್ನ ಅಮ್ಮನ ಜತೆ ಇರಬೇಕು’ ಎಂದಿದ್ದಾರೆ ಅವರು. ಸಾರಾ ಹಾಗೂ ಅವರ ತಾಯಿ ಅಮೃತಾ ಸಾಕಷ್ಟು ಕಡೆ ಒಟ್ಟಾಗಿ ಪ್ರವಾಸ ಮಾಡುತ್ತಾರೆ. ಇತ್ತೀಚೆಗೆ ಮಾಲ್ಡೀವ್ಸ್ಗೆ ಇಬ್ಬರೂ ಒಟ್ಟಾಗಿ ತೆರಳಿದ್ದರು.
ಇದನ್ನೂ ಓದಿ: ಸೈಫ್ ಪುತ್ರ ತೈಮೂರ್ ರೀತಿಯೇ ಕಾಣುವ ಇನ್ನೊಬ್ಬ ಬಾಲಕನ ಫೋಟೋ ವೈರಲ್; ಯಾರಿದು?
ಸೈಫ್ ಅಲಿ ಖಾನ್ಗೆ ಯಾಕೆ ಈ ಗತಿ? ಕಳೆದೇ ಹೋಯ್ತು ಫಿಟ್ನೆಸ್