ಈ ಚಿತ್ರದಲ್ಲಿರುವುದು ಬಾಲಿವುಡ್​ನ ಭರವಸೆಯ ನಾಯಕಿ; ಯಾರೆಂದು ಗುರುತಿಸಬಲ್ಲಿರಾ?

Sara Ali Khan: ಬಾಲಿವುಡ್​ನ ಖ್ಯಾತ ಭರವಸೆಯ ನಟಿಯ ಚಿತ್ರಗಳು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇವರು ಯಾರೆಂದು ಗುರುತಿಸಬಲ್ಲಿರಾ?

ಈ ಚಿತ್ರದಲ್ಲಿರುವುದು ಬಾಲಿವುಡ್​ನ ಭರವಸೆಯ ನಾಯಕಿ; ಯಾರೆಂದು ಗುರುತಿಸಬಲ್ಲಿರಾ?
ಚಿತ್ರದಲ್ಲಿರುವ ನಟಿಯನ್ನು ಗುರುತಿಸಬಲ್ಲಿರಾ?
Follow us
TV9 Web
| Updated By: shivaprasad.hs

Updated on: Nov 10, 2021 | 2:40 PM

ಬಾಲ್ಯದಲ್ಲಿ ಮುದ್ದುಮುದ್ದಾಗಿರುವ ಎಲ್ಲರೂ ದೊಡ್ಡವರಾದ ನಂತರ ಕೆಲವೊಮ್ಮೆ ಗುರುತು ಸಿಗದಷ್ಟು ಬದಲಾಗುತ್ತಾರೆ. ಅಂತಹ ಸಂದರ್ಭದಲ್ಲಿ ಹಳೆಯ ಚಿತ್ರಗಳೊಂದೇ ಬಾಲ್ಯಕ್ಕೆ ಸಾಕ್ಷಿಯಾಗಿರುತ್ತವೆ. ಸಾಮಾನ್ಯವಾಗಿ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ- ನಟಿಯರ ಬಾಲ್ಯದ ಚಿತ್ರಗಳು ಮುದ ನೀಡುವ ಸಂಗತಿಗಳಲ್ಲೊಂದು. ಕೆಲವೊಮ್ಮೆ ಖ್ಯಾತ ನಟ- ನಟಿಯರ ಅಪರೂಪದ ಚಿತ್ರಗಳನ್ನು ನೋಡಿ ಅವರನ್ನು ಗುರುತು ಹಿಡಿಯಲು ಪರದಾಡುವುದೂ ಉಂಟು. ಸದ್ಯ ಅಂತರ್ಜಾಲದಲ್ಲಿ ಅಂಥದ್ದೇ ಚಿತ್ರವೊಂದು ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿ ಹೀಗಿದ್ದರೇ ಎಂದು ಯೋಚಿಸಿ ಅಚ್ಚರಿಗೊಳ್ಳುತ್ತಿದ್ದಾರೆ. ಹೌದು. ಮೇಲಿರುವ ಚಿತ್ರದಲ್ಲಿರುವ ನಟಿ ಪ್ರಸ್ತುತ ಬಾಲಿವುಡ್​ನಲ್ಲಿ ನೆಲೆಯೂರುತ್ತಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಖ್ಯಾತ ಕುಟುಂಬದ ಕುಡಿಯಾಗಿರುವ ಈ ನಟಿ, ಪ್ರಸ್ತುತ ತಮ್ಮದೇ ಶೈಲಿಯಿಂದ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. 

ಈ ಚಿತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದು, ಹಲವರಿಗೆ ನಟಿಯ ಮೂಲ ಗುರುತೇ ಸಿಕ್ಕಿಲ್ಲ. ವಾಸ್ತವವಾಗಿ ಆ ನಟಿ ಬೇರಾರೂ ಅಲ್ಲ, ಸಾರಾ ಅಲಿ ಖಾನ್. ಕರೀನಾ ಕಪೂರ್ ಪುತ್ರ ಜೇಹ್​ನಂತೆ ಕಾಣುತ್ತಾರೆ ಎಂದೂ ಹಲವರು ಸಾರಾ ಅವರ ಚಿತ್ರಗಳನ್ನು ನೋಡಿ ಅಚ್ಚರಿಗೊಂಡಿದ್ದಾರೆ. ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಪುತ್ರಿಯಾಗಿರುವ ಸಾರಾ ಅಲಿ ಖಾನ್ ಅವರ ಬಾಲ್ಯದ ಚಿತ್ರಗಳನ್ನು ನೋಡಿದಾಗ ಜೇಹ್​ನಂತೆಯೇ ಕಾಣುತ್ತಾರೆ. ಕ್ಯಾಮೆರಾದ ಜೊತೆ ಸಾರಾ ನಿಂತಿರುವ ಚಿತ್ರಗಳನ್ನು ಸದ್ಯ ಸಾರಾ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸಾರಾ ಅವರ ಬಾಲ್ಯದ ನೆಚ್ಚಿನ ಚಿತ್ರಗಳಲ್ಲೊಂದಾಗಿದೆ.

ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಇನ್ಸ್ಟಾಗ್ರಾಂನಲ್ಲಿ ಅವರು ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲಿ ಅವರು ಕೆಲ ಸಮಯದ ಹಿಂದೆ ಈ ಚಿತ್ರಗಳನ್ನು ಹಂಚಿಕೊಂಡಿದ್ದರು. ಪ್ರಸ್ತುತ ಆ ಚಿತ್ರಗಳು ವೈರಲ್ ಆಗಿವೆ. ಇತ್ತೀಚೆಗಷ್ಟೇ ಸಾರಾ, ತಮ್ಮ ಕಾಶ್ಮೀರ ಪ್ರವಾಸದ ಚಿತ್ರಗಳನ್ನು ಹಂಚಿಕೊಂಡಿದ್ದರು. ವಿವಿಧ ಧರ್ಮಗಳ ಧಾರ್ಮಿಕ ಕ್ಷೇತ್ರಗಳಿಗೆ ಅವರು ಭೇಟಿ ನೀಡಿದ್ದರು. ಇದು ಅವರ ಅಭಿಮಾನಿಗಳಿಗೆ ಪ್ರಿಯವಾಗಿತ್ತು.  ಚಿತ್ರಗಳ ವಿಷಯಕ್ಕೆ ಬಂದರೆ ಸಾರಾ ಕೊನೆಯದಾಗಿ ‘ಕೂಲಿ ನಂಬರ್ 1’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಬತ್ತಳಿಕೆಯಲ್ಲಿ ಹಲವು ಚಿತ್ರಗಳಿವೆ.

ಇದನ್ನೂ ಓದಿ:

Sara Ali Khan: ಅದು ಅವರು ಕೈಗೊಂಡ ಅತ್ಯುತ್ತಮ ನಿರ್ಧಾರ; ಸೈಫ್- ಅಮೃತಾ ವಿಚ್ಛೇದನ ಕುರಿತು ಪುತ್ರಿ ಸಾರಾ ಮಾತು

‘ಫಸ್ಟ್​ ನೈಟ್​ನಲ್ಲಿ ಎಲ್ಲರೂ ಏನ್​ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ