‘ತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸಿದ್ದ ಆ ಬಾಲಕ ಈಗ ಹೇಗಿದಾರೆ ನೋಡಿ
ಬಾಲ ನಟನಾಗಿ ಯಶಸ್ಸು ಗಳಿಸಿದ ನಂತರ ಹೀರೋ ಆಗಿ ಮಿಂಚಿದ ಅನೇಕರಿದ್ದಾರೆ. ಬಾಲ ನಟನಾಗಿ ಗುರುತಿಸಿಕೊಂಡರೆ ಮುಂದೆ ಹೀರೋ ಆಗೋಕೆ ಸಹಕಾರಿಯಾಗುತ್ತದೆ. ಆದರೆ, ದರ್ಶೀಲ್ ಆ ರೀತಿ ಮಾಡಿಲ್ಲ.
ಆಮಿರ್ ಖಾನ್ (Aamir Khan) ನಟನೆಯ ‘ತಾರೆ ಜಮೀನ್ ಪರ್’ (Taare Zameen Par) ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ಈ ಸಿನಿಮಾ ಸಾಕಷ್ಟು ಜನರಿಗೆ ತುಂಬಾನೇ ಇಷ್ಟವಾದ ಚಿತ್ರಗಳಲ್ಲಿ ಒಂದು. ಈಗಲೂ ಈ ಸಿನಿಮಾವನ್ನು ಇಷ್ಟಪಡುವವರು ಸಾಕಷ್ಟು ಜನರಿದ್ದಾರೆ. ಈ ಸಿನಿಮಾದಲ್ಲಿ ಬಾಲಕನ ಪಾತ್ರ ಒಂದು ಬರುತ್ತದೆ. ಅದನ್ನು ದರ್ಶೀಲ್ ಸಫಾರಿ (Darsheel Safary) ನಿರ್ವಹಿಸಿದ್ದರು. ಡಿಸ್ಲೆಕ್ಸಿಯಾ ಸಮಸ್ಯೆಯಿಂದ ಬಳಲುವ ಹುಡುಗನಾಗಿ ದರ್ಶೀಲ್ ಕಾಣಿಸಿಕೊಂಡಿದ್ದರು. ಅವರು ನಿರ್ವಹಿಸಿದ್ದ ಪಾತ್ರ ಜನಮನ್ನಣೆ ಪಡೆದುಕೊಂಡಿತ್ತು. ಸಿನಿಮಾ ಹಿಟ್ ಆಗೋಕೆ ಅವರು ಮಾಡಿದ್ದ ಪಾತ್ರ ಕೂಡ ತುಂಬಾನೇ ಕೊಡುಗೆ ನೀಡಿತ್ತು. ದರ್ಶೀಲ್ ಬಾಲ ನಟನಾಗಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಬಾಲನಟನಾಗಿ ಅವರು ನಟಿಸಿದ ಕೊನೆಯ ಸಿನಿಮಾ ಸುಷ್ಮಿತಾ ಸೇನ್ ಮಗಳು ರೇನೀ ಸೇನ್ ಚಿತ್ರ ‘ಸುಟ್ಟಾಬಾಝಿ’. ಹಾಗಾದರೆ ಅವರು ಈಗ ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ದರ್ಶೀಲ್ ಈಗ ಬೆಳೆದು ದೊಡ್ಡವರಾಗಿದ್ದಾರೆ. ಅವರಿಗೆ ಈಗ 23 ವರ್ಷ ವಯಸ್ಸು. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಗ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ‘ನಾನು ನಟಿಸಿದ್ದ ‘ತಾರೆ ಜಮೀನ್ ಪರ್’ ಸಿನಿಮಾ ನನ್ನ ಜೀವನವನ್ನು ಕೊಂಚ ಬದಲಾಯಿಸಿತು. ತರಗತಿಯಲ್ಲಿ ಎಲ್ಲರೂ ನನ್ನ ಬಗ್ಗೆಯೇ ಮಾತನಾಡುತ್ತಿದ್ದರು’ ಎಂದಿದ್ದಾರೆ ದರ್ಶೀಲ್. ಅವರು ರಂಗಭೂಮಿಯಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.
View this post on Instagram
ಬಾಲ ನಟನಾಗಿ ಯಶಸ್ಸು ಗಳಿಸಿದ ನಂತರ ಹೀರೋ ಆಗಿ ಮಿಂಚಿದ ಅನೇಕರಿದ್ದಾರೆ. ಬಾಲ ನಟನಾಗಿ ಗುರುತಿಸಿಕೊಂಡರೆ ಮುಂದೆ ಹೀರೋ ಆಗೋಕೆ ಸಹಕಾರಿಯಾಗುತ್ತದೆ. ಆದರೆ, ದರ್ಶಿಲ್ ‘ತಾರೇ ಜಮೀನ್ ಪರ್’ ಸಿನಿಮಾ ತಂದುಕೊಟ್ಟ ಯಶಸ್ಸನ್ನು ಅವರು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಚಿತ್ರರಂಗಕ್ಕೆ ಬರುತ್ತಾರಾ ಅನ್ನೋದು ಸದ್ಯದ ಕುತೂಹಲ.
ಇದನ್ನೂ ಓದಿ: ‘ಫಸ್ಟ್ ನೈಟ್ನಲ್ಲಿ ಎಲ್ಲರೂ ಏನ್ ಮಾಡ್ತಾರೋ ನಾವು ಅದನ್ನೇ ಮಾಡಿದ್ದು’; ರಚಿತಾ ರಾಮ್
ಆಮಿರ್ ಖಾನ್ ಜತೆ ಮಗನ ವಿಷಯ ಮಾತಾಡುತ್ತ ಭಾವುಕರಾದ ನಾಗಾರ್ಜುನ; ಅಲ್ಲಿ ನಡೆದ ಮಾತುಕತೆ ಏನು?
Published On - 9:50 pm, Wed, 10 November 21