Sara Ali Khan: ಸ್ಟಾರ್​ ನಟನ ಜೊತೆಗಿನ ಬ್ರೇಕಪ್​ ಬಳಿಕ ಸಾರಾ ಅಲಿ ಖಾನ್​ಗೆ ಶುರುವಾಯ್ತು ಕೆಟ್ಟ ಕಾಲ; ಒಪ್ಪಿಕೊಂಡ ನಟಿ

Kartik Aaryan | Breakup: ‘2020ರ ವರ್ಷ ಬಹಳ ಕೆಟ್ಟದಾಗಿತ್ತು. ಬ್ರೇಕಪ್​ನೊಂದಿಗೆ ಅದು ಶುರುವಾಯಿತು’ ಎಂದು ಸಾರಾ ಅಲಿ ಖಾನ್​ ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಚರ್ಚೆ ಶುರುವಾಗಿದೆ.

Sara Ali Khan: ಸ್ಟಾರ್​ ನಟನ ಜೊತೆಗಿನ ಬ್ರೇಕಪ್​ ಬಳಿಕ ಸಾರಾ ಅಲಿ ಖಾನ್​ಗೆ ಶುರುವಾಯ್ತು ಕೆಟ್ಟ ಕಾಲ; ಒಪ್ಪಿಕೊಂಡ ನಟಿ
ಸಾರಾ ಅಲಿ ಖಾನ್

Updated on: Mar 06, 2023 | 7:30 AM

ನಟಿ ಸಾರಾ ಅಲಿ ಖಾನ್​ (Sara Ali Khan) ಅವರು ಹಿಂದಿ ಚಿತ್ರರಂಗದಲ್ಲಿ ಗಟ್ಟಿಯಾದ ನೆಲೆ ಕಂಡುಕೊಂಡಿಲ್ಲ. ಒಂದು ದೊಡ್ಡ ಯಶಸ್ಸಿಗಾಗಿ ಅವರು ಕಷ್ಟಪಡುತ್ತಿದ್ದಾರೆ. ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಕೈ ಹಿಡಿದಿಲ್ಲ. ಸೈಫ್​ ಅಲಿ ಖಾನ್​ (Saif Ali Khan) ಪುತ್ರಿ ಎಂಬ ಕಾರಣಕ್ಕೆ ಆರಂಭದಲ್ಲಿ ಅವರಿಗೆ ಸುಲಭವಾಗಿ ಅವಕಾಶ ಸಿಕ್ಕಿತು. ಆದರೆ ಅವುಗಳಿಂದ ಗೆಲುವು ಸಿಗಲಿಲ್ಲ. 2020ರ ವರ್ಷ ಸಾರಾ ಅಲಿ ಖಾನ್​ ಪಾಲಿಗೆ ತುಂಬ ಕೆಟ್ಟದಾಗಿತ್ತು. ಅದೇ ವರ್ಷ ಅವರು ಬ್ರೇಕಪ್​ ಕೂಡ ಮಾಡಿಕೊಂಡರು. ಆ ವಿಚಾರದ ಕುರಿತು ಈಗ ಅವರು ಬಾಯಿ ಬಿಟ್ಟಿದ್ದಾರೆ. ಹೆಸರು ಹೇಳದೇ ಇದ್ದರೂ ಕೂಡ ಅವರು ಪ್ರಸ್ತಾಪಿಸಿರುವುದು ಕಾರ್ತಿಕ್​ ಆರ್ಯನ್​ (Kartik Aaryan) ಬಗ್ಗೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಬಾಲಿವುಡ್​ನಲ್ಲಿ ಕಾರ್ತಿಕ್ ಆರ್ಯನ್​ ಅವರು ಸ್ಟಾರ್​ ಹೀರೋ ಆಗಿ ಬೆಳೆದಿದ್ದಾರೆ. ಅವರ ಜೊತೆ ಸಾರಾ ಅಲಿ ಖಾನ್​ ತೆರೆಹಂಚಿಕೊಂಡಿದ್ದು 2020ರಲ್ಲಿ ತೆರೆಕಂಡ ‘ಲವ್​ ಆಜ್​ ಕಲ್​’ ಸಿನಿಮಾದಲ್ಲಿ. ಆ ಚಿತ್ರ ರಿಲೀಸ್​ ಆಗುವುದಕ್ಕೂ ಮುನ್ನವೇ ಇಬ್ಬರ ನಡುವೆ ಬ್ರೇಕಪ್​ ಆಯಿತು ಎಂಬ ಸುದ್ದಿ ಕೇಳಿಬಂದಿತ್ತು. ಆದರೆ ತಮ್ಮಿಬ್ಬರ ನಡುವಿನ ಆಪ್ತತೆ ಬಗ್ಗೆಯಾಗಲೀ ಅಥವಾ ದೂರ ಆಗಿದ್ದರ ಬಗ್ಗೆಯಾಗಲೀ ಅವರು ಏನನ್ನೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಆ ದಿನಗಳನ್ನು ಸಾರಾ ಅಲಿ ಖಾನ್​ ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ: ಗ್ಲಾಮರಸ್​ ಬಟ್ಟೆ ಧರಿಸಿ ಪಡ್ಡೆಗಳ ಕಣ್ಣು ಕುಕ್ಕಿದ ಸಾರಾ ಅಲಿ ಖಾನ್​

ಇದನ್ನೂ ಓದಿ
Sara Ali Khan: ಶಿವನ ಧ್ಯಾನ ಮಾಡಿದ ಸಾರಾ ಅಲಿ ಖಾನ್; ಒಂದು ವರ್ಗದಿಂದ ಬಂತು ಟೀಕೆ
ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಸಾರಾ ಅಲಿ ಖಾನ್; ಅಭಿಮಾನಿಗಳಿಗೆ ಕಾಡುತ್ತಿದೆ ಅನುಮಾನ
ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?
ಬಿಕಿನಿ ತೊಟ್ಟು ಪಡ್ಡೆಗಳ ನಿದ್ದೆ ಕದ್ದ ಸಾರಾ ಅಲಿ ಖಾನ್​; ಇಲ್ಲಿದೆ ಫೋಟೋ ಗ್ಯಾಲರಿ

ಮಾಧ್ಯಮವೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಸಾರಾ ಅಲಿ ಖಾನ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘2020ರ ವರ್ಷ ಬಹಳ ಕೆಟ್ಟದಾಗಿತ್ತು. ಬ್ರೇಕಪ್​ನೊಂದಿಗೆ ಅದು ಶುರುವಾಯಿತು. ಬಳಿಕ ಕೆಟ್ಟ ದಿನಗಳು ಮುಂದುವರಿದವು’ ಎಂದು ಸಾರಾ ಅಲಿ ಖಾನ್​ ಹೇಳಿದ್ದಾರೆ. 2020ರ ಫೆಬ್ರವರಿಯಲ್ಲಿ ‘ಲವ್​ ಆಜ್​ ಕಲ್​’ ಸಿನಿಮಾ ತೆರೆಕಂಡಿತ್ತು. ಆದರೆ ಜನರಿಗೆ ಅದು ಇಷ್ಟ ಆಗಲಿಲ್ಲ. ಅದರಲ್ಲಿ ಸಾರಾ ನಟನೆಯನ್ನು ನೋಡಿ ಜನರು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದರು.

ಇದನ್ನೂ ಓದಿ: ಇದೆಂಥಾ ಮಕ್ಕಳಾಟ? ಬಿಕಿನಿಯಲ್ಲಿ ಪ್ರ್ಯಾಂಕ್​ ಮಾಡಿದ ಸಾರಾ ಅಲಿ ಖಾನ್​ಗೆ ಛೀಮಾರಿ

2020ರಲ್ಲಿ ಬಿಡುಗಡೆಯಾದ ಮತ್ತೊಂದು ಸಿನಿಮಾ ‘ಕೂಲಿ ನಂಬರ್​ 1’ ಕೂಡ ಸಾರಾ ಅಲಿ ಖಾನ್​ಗೆ ಯಶಸ್ಸು ತಂದುಕೊಡಲಿಲ್ಲ. 2021ರಲ್ಲಿ ಬಂದ ‘ಅತರಂಗಿ ರೇ’ ಸಹ ಸೋಲು ಕಂಡಿತು. ಮುಂದಿನ ದಿನಗಳಲ್ಲಾದರೂ ಅವರು ಯಶಸ್ಸು ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us