AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಬಾಲಿವುಡ್​ನಲ್ಲೂ ಜೋರಾದ ಹಿಜಾಬ್ ಕುರಿತ ಚರ್ಚೆ; ಖ್ಯಾತ ತಾರೆಯರು ಹೇಳೋದೇನು?

Shabana Azmi | Javed Akhtar: ದೇಶದಲ್ಲಿ ಹಿಜಾಬ್ ಕುರಿತ ಚರ್ಚೆ ಜೋರಾಗಿದೆ. ಬಾಲಿವುಡ್ ತಾರೆಯರೂ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಕಂಗನಾ ರಣಾವತ್ ಈ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಅದಕ್ಕೆ ಹಿರಿಯ ನಟಿ ಶಬಾನಾ ಅಜ್ಮಿ ಪ್ರತ್ಯುತ್ತರ ನೀಡಿದ್ದಾರೆ.

Kangana Ranaut: ಬಾಲಿವುಡ್​ನಲ್ಲೂ ಜೋರಾದ ಹಿಜಾಬ್ ಕುರಿತ ಚರ್ಚೆ; ಖ್ಯಾತ ತಾರೆಯರು ಹೇಳೋದೇನು?
ಕಂಗನಾ ರಣಾವತ್, ಶಬಾನಾ ಅಜ್ಮಿ
Follow us
TV9 Web
| Updated By: shivaprasad.hs

Updated on: Feb 11, 2022 | 3:47 PM

ಹಿಜಾಬ್ ಕುರಿತ ಚರ್ಚೆ ದೇಶವ್ಯಾಪಿ ನಡೆಯುತ್ತಿರುವಂತೆಯೇ ಬಾಲಿವುಡ್ ಚಿತ್ರರಂಗ ಕೂಡ ಈ ಕುರಿತು ಚರ್ಚೆಯಲ್ಲಿ ತೊಡಗಿಸಿಕೊಂಡಿದೆ. ಈಗಾಗಲೇ ಹಲವು ಚಿತ್ರತಾರೆಯರು ಹಿಜಾಬ್ ಧರಿಸುವುದರ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದರು. ಇತ್ತೀಚೆಗೆ ಕಂಗನಾ ರಣಾವತ್ (Kangana Ranaut) ಕೂಡ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಕಂಗನಾ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಹಿರಿಯ ನಟಿ ಶಬಾನಾ ಅಜ್ಮಿ (Shabana Azmi) ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕಂಗನಾ ಹಾಗೂ ಬರಹಗಾರ, ಚಿತ್ರ ಸಾಹಿತಿ ಜಾವೇದ್ ಅಖ್ತರ್ ನಡುವೆ ಮೊದಲಿನಿಂದಲೂ ಹಲವು ವಿಚಾರಗಳಿಗೆ ಬಿಸಿಬಿಸಿ ಚರ್ಚೆಯಾಗಿದೆ. ಇತ್ತೀಚೆಗೆ ಜಾವೇದ್ ಅಖ್ತರ್ (Javed Akhtar) ಹಿಜಾಬ್ ಹಾಗೂ ಬುರ್ಖಾ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಕಂಗನಾ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಜಾವೇದ್ ಪತ್ನಿ ಅಬಾನಾ ಅಜ್ಮಿ, ಕಂಗನಾ ಹೇಳಿಕೆಯನ್ನು ಉಲ್ಲೇಖಿಸಿ, ಪ್ರತಿಕ್ರಿಯೆ ನೀಡಿದ್ದಾರೆ.

ಜಾವೇದ್ ಅಖ್ತರ್ ಹೇಳಿದ್ದೇನು?: ಬುಧವಾರ ಟ್ವೀಟ್ವ ಮಾಡಿದ್ದ ಜಾವೇದ್ ಅಖ್ತರ್, ತಾವು ಮೊದಲಿನಿಂದಲೂ ಹಿಜಾಬ್ ಅಥವಾ ಬುರ್ಖಾಗಳ ಪರವಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು. ಅಲ್ಲದೇ ಈ ನಿಲುವಿನ ಪರವಾಗಿ ಈಗಲೂ ನಿಲ್ಲುತ್ತೇನೆ ಎಂದು ಅವರು ಹೇಳಿದ್ದರು. ಆದರೆ ಇವುಗಳ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾಗಿರಿಯನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದರು.

ಕಂಗನಾ ಪೋಸ್ಟ್​​ನಲ್ಲಿ ಏನಿತ್ತು?: ಕಂಗನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಆನಂದ್ ರಂಗನಾಥನ್ ಟ್ವೀಟ್ ಒಂದನ್ನು ಉದಾಹರಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇರಾನ್ 1973ರಲ್ಲಿ ಇದ್ದ ಫೋಟೋವನ್ನು ಹಂಚಿಕೊಂಡಿದ್ದ ಆನಂದ್ ರಂಗನಾಥನ್, ಆಗ ಮಹಿಳೆಯರು ಧರಿಸಿದ್ದ ದಿರಿಸು ಹಾಗೂ ಈಗ ಬುರ್ಖಾ ಧರಿಸುತ್ತಿರುವುದರ ಚಿತ್ರ ಹಂಚಿಕೊಂಡಿದ್ದರು. ಇದನ್ನು ಉಲ್ಲೇಖಿಸಿದ್ದ ಕಂಗನಾ, ‘ಧೈರ್ಯವಿರುವವರು ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆಯಲಿ’ ಎಂದಿದ್ದರು. ಅಲ್ಲದೇ ಸ್ವತಂತ್ರದ ಕುರಿತು ಎಲ್ಲರೂ ಯೋಚಿಸಿ, ಮತ್ತೆ ಬಂಧನದ (ಸಂಕೋಲೆ) ಕುರಿತಲ್ಲ ಎಂದು ಅವರು ಹೇಳಿದ್ದರು.

Kangana Ranaut on Hijab Row

ಕಂಗನಾ ಹಂಚಿಕೊಂಡಿರುವ ಸ್ಟೋರಿ

ಕಂಗನಾ ಹೇಳಿಕೆಗೆ ಶಬಾನಾ ಅಜ್ಮಿ ಪ್ರತಿಕ್ರಿಯೆ ಏನು?: ಕಂಗನಾ ಇನ್​ಸ್ಟಾಗ್ರಾಂ ಸ್ಟೋರಿಯನ್ನು ಉಲ್ಲೇಖಿಸಿರುವ ಶಬಾನಾ ಅಜ್ಮಿ, ಕಂಗನಾ ಹೇಳಿಕೆಗೆ ಪ್ರತ್ಯುತ್ತರ ನೀಡಿದ್ದಾರೆ. ಅಫ್ಘಾನಿಸ್ತಾನಕ್ಕೆ ಹೋಗಿ ಬುರ್ಖಾ ತೆಗೆದು ಧೈರ್ಯ ತೋರಿಸಲಿ ಎಂದಿದ್ದ ಕಂಗನಾರ ಮಾತನ್ನು ಪ್ರಶ್ನಿಸಿರುವ ಜಾವೇದ್ ಅಖ್ತರ್ ಪತ್ನಿ ಶಬಾನಾ, ಕಂಗನಾಗೆ ಟಾಂಗ್ ನೀಡಿದ್ದಾರೆ. ‘ಅಫ್ಘಾನಿಸ್ತಾನ ಧಾರ್ಮಿಕ ನಿಯಮಗಳ ಮೇಲೆ ನಿಯಮಗಳನ್ನು ಹೊಂದಿರುವ ರಾಷ್ಟ್ರ. ಆದರೆ ನಾನು ಪರೀಕ್ಷಿಸಿದಾಗ ಭಾರತವು ಜಾತ್ಯಾತೀತ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿತ್ತು’ ಎಂದು ಹೇಳಿದ್ದಾರೆ. ಶಬಾನಾ ಹೇಳಿಕೆಗೆ ಅವರ ಅಭಿಮಾನಿಗಳು ದನಿಗೂಡಿಸಿದ್ದು, ಕಂಗನಾ ಅವರೊಂದಿಗೆ ವಾದ ಮಾಡಿ ಪ್ರಯೋಜನವಿಲ್ಲ ಎಂದು ಕಾಮೆಂಟ್​ಗಳನ್ನು ಮಾಡಿದ್ದಾರೆ. ಹಲವರು ಶಬಾನಾ ಅವರ ಹೇಳಿಕೆಗೆ ವಿರೋಧವನ್ನೂ ವ್ಯಕ್ತಡಿಸಿದ್ದಾರೆ.

ಹಿಜಾಬ್ ವಿವಾದದ ಕುರಿತಂತೆ ಹಲವು ತಾರೆಯರು ತಮ್ಮ ಅಭಿಪ್ರಆಯಗಳನ್ನು ಹಂಚಿಕೊಂಡಿದ್ದಾರೆ. ಖ್ಯಾತ ನಟರಾದ ಕಮಲ್ ಹಾಸನ್, ರೀಚಾ ಛಡ್ಡಾ, ಸ್ವರಾ ಭಾಸ್ಕರ್, ರಮ್ಯಾ ಸೇರಿದಂತೆ ಹಲವು ತಾರೆಯರು ಈ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಇದನ್ನೂ ಓದಿ:

ವಿದ್ಯಾರ್ಥಿಗಳ ನಡುವೆ ಧಾರ್ಮಿಕ ವಿಷದ ಗೋಡೆ ನಿರ್ಮಾಣ ಆಗಿದೆ: ಹಿಜಾಬ್​ ವಿವಾದಕ್ಕೆ ಕಮಲ್​ ಹಾಸನ್​, ರಮ್ಯಾ ಪ್ರತಿಕ್ರಿಯೆ​

ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ

‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
‘ನಿದ್ರಾದೇವಿ ನೆಕ್ಸ್ಟ್​ ಡೋರ್’ ಚಿತ್ರದಲ್ಲಿ ಗೆಟಪ್ ಬದಲಿಸಿದ ಶೈನ್ ಶೆಟ್ಟಿ
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಬೆಂಗಳೂರು ರಣಭೀಕರ ಮಳೆಗೆ ಮುಳುಗಿದ `ಬೆಳ್ಳುಳ್ಳಿ ಕಬಾಬ್’ ಹೋಟೆಲ್
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಪಿಎಸ್​​ಐ ನಾಗರಾಜ್​​ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಅಧಿಕಾರ ಮತ್ತು ಬದುಕು ಎರಡೂ ಶಾಶ್ವತವಲ್ಲ: ತನ್ವೀರ್ ಸೇಟ್, ಕಾಂಗ್ರೆಸ್ ಶಾಸಕ
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಹಾಡಿನ ಮೂಲಕ ಚಿತ್ರರಂಗದ ಕರಾಳ ಮುಖ ಪರಿಚಯಿಸಿದ ದುನಿಯಾ ವಿಜಯ್
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸಲು ಎಲ್ಲ ದೇಶಗಳಿಗೂ ಮೋದಿ ಆಹ್ವಾನ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಲೂಟ್ ಕೆ ಲಾವ್ ಬಾಟ್ ಕೆ ಖಾವ್ ಸರ್ಕಾರದ ದ್ಯೇಯವಾಗಿದೆ: ಪ್ರಲ್ಹಾದ್ ಜೋಶಿ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಕಾವೇರಿ ಆರತಿಯಿಂದ ಕೆಆರ್​ಎಸ್ ಜಲಾಶಯಕ್ಕೆ ಅಪಾಯವಿಲ್ಲ: ಗಣಿಗ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ