ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್

ಶಾರುಖ್​ ಖಾನ್​ ಅವರು ಮುಖೇಶ್​ ಅಂಬಾನಿ ಮತ್ತು ಅನಂತ್​ ಅಂಬಾನಿ ಜತೆ ಆಗಮಿಸಿದರು. ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ವೀಕ್ಷಿಸಲು ಬಂದಿದ್ದ ಅಕ್ಷಯ್​ ಕುಮಾರ್​ ಮತ್ತು ಶಾರುಖ್​ ಖಾನ್​ ಅವರು ಪರಸ್ಪರ ಭೇಟಿಯಾದರು. ಅವರಿಬ್ಬರ ಈ ಫೋಟೋ ವೈರಲ್​ ಆಗಿದ್ದು, ಫ್ಯಾನ್ಸ್​ ಖುಷಿಯಾಗಿದ್ದಾರೆ.

ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ವೇಳೆ ಪರಸ್ಪರ ತಬ್ಬಿಕೊಂಡ ಅಕ್ಷಯ್, ಶಾರುಖ್
ಶಾರುಖ್​ ಖಾನ್​, ಅಕ್ಷಯ್​ ಕುಮಾರ್​

Updated on: Jun 09, 2024 | 11:33 PM

ಬಾಲಿವುಡ್​ ನಟರಾದ ಶಾರುಖ್​ ಖಾನ್​ ಹಾಗೂ ಅಕ್ಷಯ್​ ಕುಮಾರ್ (Akshay Kumar)​ ಅವರ ಒಂದು ಫೋಟೋ ಸಖತ್​ ವೈರಲ್​ ಆಗಿದೆ. ಈ ಫೋಟೋ ಕ್ಲಿಕ್ಕಿಸಿರುವುದು ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ. ಭಾನುವಾರ (ಜೂನ್​ 9) ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಮಾರಂಭಕ್ಕೆ ಕೆಲವು ಬಾಲಿವುಡ್​ ಸೆಲೆಬ್ರಿಟಿಗಳು ಆಗಮಿಸಿದ್ದರು. ಈ ವೇಳೆ ಅಕ್ಷಯ್​ ಕುಮಾರ್​ ಮತ್ತು ಶಾರುಖ್​ ಖಾನ್​ (Shah Rukh Khan) ಅವರು ಆತ್ಮೀಯವಾಗಿ ತಬ್ಬಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದನ್ನು ನೋಡಲು ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ವಿವಿಧ ದೇಶಗಳ ಪ್ರಮುಖರು ಬಂದು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಚಿತ್ರರಂಗದ ಸೆಲೆಬ್ರಿಟಿಗಳಾದ ಅಕ್ಷಯ್​ ಕುಮಾರ್​, ಶಾರುಖ್​ ಖಾನ್​, ಅನುಪಮ್​ ಖೇರ್​, ರಾಜ್​ಕುಮಾರ್​ ಹಿರಾನಿ, ವಿಕ್ರಾಂತ್​ ಮಾಸಿ, ರಜನಿಕಾಂತ್​ ಅವರು ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಶಾರುಖ್​ ಖಾನ್​ ಅವರು ಮುಖೇಶ್​ ಅಂಬಾನಿ ಮತ್ತು ಅನಂತ್​ ಅಂಬಾನಿ ಅವರ ಜೊತೆ ಆಗಮಿಸಿದರು. ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರವನ್ನು ನೋಡಲು ಬಂದಿದ್ದ ಅಕ್ಷಯ್​ ಕುಮಾರ್​ ಹಾಗೂ ಶಾರುಖ್​ ಖಾನ್​ ಅವರು ಪರಸ್ಪರ ಭೇಟಿಯಾದರು. ಅವರಿಬ್ಬರು ತಬ್ಬಿಕೊಂಡ ಕ್ಷಣವನ್ನು ಅತ್ಯುತ್ತಮ ಕ್ಷಣ ಎಂದು ಅಭಿಮಾನಿಗಳು ಬಣ್ಣಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಫೋಟೋ ವೈರಲ್​ ಆಗಿದೆ.

ಇದನ್ನೂ ಓದಿ: ಶಾರುಖ್​ ಖಾನ್​ ನಟನೆಯ ‘ಕಿಂಗ್​’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ

ಈ ವಿಶೇಷ ಸಂದರ್ಭದಲ್ಲಿ ಶಾರುಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಅವರನ್ನು ಒಂದೇ ಫ್ರೇಮ್​ನಲ್ಲಿ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಶಾರುಖ್​ ಖಾನ್​ ಮತ್ತು ಅಕ್ಷಯ್​ ಕುಮಾರ್​ ಅವರನ್ನು ಮೋದಿ ಒಂದಾಗಿಸಿದರು’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ. ‘ಇದು ವರ್ಷದ ಅತ್ಯುತ್ತಮ ಅಪ್ಪುಗೆ’ ಎಂದು ಮತ್ತೋರ್ವ ಅಭಿಮಾನಿ ಹೇಳಿದ್ದಾರೆ. ‘ಬಾಲಿವುಡ್​ನ ಕಿಂಗ್ ಮತ್ತು ಕಿಲಾಡಿ ಒಂದಾಗಿದ್ದಾರೆ’ ಎಂಬ ಕಮೆಂಟ್​ ಕೂಡ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us