
ಹಿಂದಿ ಚಿತ್ರರಂಗದ ಖ್ಯಾತ ನಟ ಶಾರುಖ್ ಖಾನ್ (Shah Rukh Khan) ಅವರು 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಬಹಳ ಅದ್ದೂರಿಯಾಗಿ ಅವರ ಬರ್ತ್ಡೇ (Shah Rukh Khan Birthday) ಸೆಲೆಬ್ರೇಟ್ ಮಾಡಲಾಗುತ್ತಿದೆ. ಶಾರುಖ್ ಖಾನ್ ಅವರ ಮನೆ ಎದುರು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದಾರೆ. ಮುಂಬೈನಲ್ಲಿ ಇರುವ ಮನ್ನತ್ (Mannat) ನಿವಾಸದ ಎದುರು ಸಾವಿರಾರು ಅಭಿಮಾನಿಗಳು ಸೇರಿದ್ದಾರೆ. ಶಾರುಖ್ ಖಾನ್ ಅವರನ್ನು ನೋಡುವ ಆಸೆಯಿಂದ ವಿದೇಶದಿಂದಲೂ ಫ್ಯಾನ್ಸ್ ಬಂದಿದ್ದಾರೆ! ಸೋಶಿಯಲ್ ಮೀಡಿಯಾದಲ್ಲಿ ಕೂಡ ಶಾರುಖ್ ಖಾನ್ ಅವರಿಗೆ ಶುಭಾಶಯಗಳ ಸುರಿಮಳೆ ಆಗುತ್ತಿದೆ.
ನವೆಂಬರ್ 2ರಂದು ಶಾರುಖ್ ಖಾನ್ ಅವರ ಹುಟ್ಟುಹಬ್ಬ. ನವೆಂಬರ್ ಒಂದರ ರಾತ್ರಿಯಿಂದಲೇ ಸೆಲೆಬ್ರೇಷನ್ ಜೋರಾಗಿದೆ. ಶಾರುಖ್ ಖಾನ್ ಅವರ ಫೋಟೋ ಇರುವ ಟಿ-ಶರ್ಟ್ ಧರಿಸಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ದೂರದ ಕೊಲ್ಕತ್ತಾದಿಂದ ಕೂಡ ಅಭಿಮಾನಿಗಳು ಬಂದಿದ್ದಾರೆ. ಶಾರುಖ್ ಖಾನ್ ಅವರನ್ನು ನೋಡಲು 33 ಗಂಟೆಗಳ ಕಾಲ ರೈಲಿನಲ್ಲಿ ಪ್ರಯಾಣ ಮಾಡಿರುವುದಾಗಿ ಫ್ಯಾನ್ಸ್ ಹೇಳಿದ್ದಾರೆ.
ಇತ್ತೀಚೆಗೆ ಕಾಲ್ತುಳಿದ ಪ್ರಕರಣಗಳು ಹೆಚ್ಚುತ್ತಿವೆ. ಹಾಗಾಗಿ ಪೊಲೀಸರು ಎಚ್ಚರಿಗೆ ವಹಿಸುತ್ತಿದ್ದಾರೆ. ಶಾರುಖ್ ಖಾನ್ ಅವರ ಮನೆ ಮುಂದೆ ಅಭಿಮಾನಿಗಳ ಸಂಖ್ಯೆಯನ್ನು ಪೊಲೀಸರು ನಿಯಂತ್ರಿಸುತ್ತಿದ್ದಾರೆ. ಹಾಗಾಗಿ ಎಲ್ಲ ಅಭಿಮಾನಿಗಳಿಗೂ ಮನ್ನತ್ ಎದುರು ನಿಲ್ಲಲು ಅವಕಾಶ ಸಿಕ್ಕಿಲ್ಲ. ಶಾರುಖ್ ಖಾನ್ ಅವರು ಮನೆಯಿಂದ ಹೊರಗೆ ಬಂದು ದರ್ಶನ ನೀಡುತ್ತಾರೆ ಎಂಬ ನಂಬಿಕೆಯಲ್ಲಿ ಫ್ಯಾನ್ಸ್ ಕಾಯುತ್ತಿದ್ದಾರೆ.
#WATCH | Mumbai, Maharashtra: Fans gathered outside Actor Shahrukh Khan’s residence ‘Mannat’ in large numbers, as he turns 60 today. pic.twitter.com/1y78M5wh3e
— ANI (@ANI) November 1, 2025
ಮನ್ನತ್ ಬಂಗಲೆಯ ನವೀಕರಣ ಕಾರ್ಯ ನಡೆಯುತ್ತಿದೆ. ಆದರೂ ಕೂಡ ಅಭಿಮಾನಿಗಳು ಹಿಂದೇಟು ಹಾಕಿಲ್ಲ. ಶಾರುಖ್ ಖಾನ್ ಅವರನ್ನು ನೋಡಲೇಬೇಕು ಎಂಬ ಹಠದಲ್ಲಿ ಅಪಾರ ಸಂಖ್ಯೆಯ ಫ್ಯಾನ್ಸ್ ಬಂದು ಮನ್ನತ್ ಎದುರು ಜಮಾಯಿಸಿದ್ದಾರೆ. ಇದು 60ನೇ ವರ್ಷದ ಬರ್ತ್ಡೇ ಆಗಿರುವುದರಿಂದ ಶಾರುಖ್ ಖಾನ್ ಅವರಿಗೆ ಬಹಳ ವಿಶೇಷವಾಗಿದೆ.
ಇದನ್ನೂ ಓದಿ: ಶಾರುಖ್ ಖಾನ್ ಮನ್ನತ್ಗೆ ಇದೆ 100 ವರ್ಷಗಳ ಇತಿಹಾಸ; ಇದರ ಬೆಲೆ ಕೇಳಿದ್ರೆ ಶಾಕ್ ಗ್ಯಾರಂಟಿ
ಸಿನಿಮಾಗಳ ಆಯ್ಕೆಯಲ್ಲಿ ಶಾರುಖ್ ಖಾನ್ ಅವರು ಅವಸರ ತೋರುತ್ತಿಲ್ಲ. ಕಳೆದ ಎರಡು ವರ್ಷಗಳಿಂದ ಅವರ ಯಾವುದೇ ಸಿನಿಮಾಗಳು ಬಿಡುಗಡೆ ಆಗಿಲ್ಲ. 2023ರಲ್ಲಿ ‘ಪಠಾಣ್’, ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಬಿಡುಗಡೆ ಆಗಿದ್ದವು. ಈಗ ಅವರು ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.