AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರೋಹಿತ್ ಆರ್ಯ, ಹಲವು ವಿಷಯ ಬಹಿರಂಗ

Rohit Arya: ಮುಂಬೈನ ಆರ್​​ಎ ಸ್ಟುಡಿಯೋನಲ್ಲಿ 17 ಮಕ್ಕಳು ಮತ್ತು ಇಬ್ಬರು ವಯಸ್ಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ರೋಹಿತ್ ಆರ್ಯ ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ. ಆದರೆ ಈಗ ಆತನ ಹಿನ್ನೆಲೆ, ಆತನ ಬೇಡಿಕೆಗಳು, ಸ್ಟುಡಿಯೋನಲ್ಲಿ ಆತ ಮೆರೆದಿದ್ದ ಅಟ್ಟಹಾಸದ ವಿಷಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಸ್ಟುಡಿಯೋ ಒಳಗೆ ಅಟ್ಟಹಾಸ ಮೆರೆದಿದ್ದ ರೋಹಿತ್ ಆರ್ಯ, ಹಲವು ವಿಷಯ ಬಹಿರಂಗ
Rohit Arya
ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ|

Updated on:Nov 01, 2025 | 4:11 PM

Share

ಮುಂಬೈನ ಆರ್​​ಎ ಸ್ಟುಡಿಯೋನಲ್ಲಿ (RA Studio) ಹಾಡ ಹಗಲೆ ರೋಹಿತ್ ಆರ್ಯ ಹೆಸರಿನ ವ್ಯಕ್ತಿಯೊಬ್ಬ 19 ಮಂದಿಯನ್ನು ಅದರಲ್ಲಿ 17 ಮಂದಿ ಮಕ್ಕಳನ್ನು ಅಪಹರಣ ಮಾಡಿ ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದ ಘಟನೆ ದೇಶದ ಗಮನ ಸೆಳೆದಿದೆ. ಅಪಹರಣಕಾರನು ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಆದರೆ ರೋಹಿತ್ ಆರ್ಯ ಅಪಹರಣಕ್ಕೆ ಮುಂಚೆ ಹಾಕಿದ್ದ ಯೋಜನೆಗಳು ಏನಾಗಿದ್ದವು, ಅವನ ಬೇಡಿಕೆಗಳು ಏನಾಗಿತ್ತು, ರೋಹಿತ್ ಆರ್ಯ ಸ್ಟುಡಿಯೋದ ಒಳಗೆ ಮಕ್ಕಳ ಮೇಲೆ ಹೇಗೆ ಅಟ್ಟಹಾಸ ಮೆರೆದಿದ್ದ ಎಂಬೆಲ್ಲ ವಿಷಯಗಳು ಈಗ ಒಂದೊಂದಾಗಿ ಹೊರಗೆ ಬರುತ್ತಿವೆ.

ರೋಹಿತ್ ಆರ್ಯ, ಮಕ್ಕಳನ್ನು ಒತ್ತೆ ಆಳುಗಳನ್ನಾಗಿ ಇರಿಸಿಕೊಂಡ ಬಳಿಕ ಸುಮಾರು ಐದು ಮಕ್ಕಳ ಕೈಗಳನ್ನು ಕಟ್ಟಿಹಾಕಿ ಅವರ ಬಾಯಿಗೆ ಟೇಪ್ ಅಂಟಿಸಿದ್ದನಂತೆ. ಸ್ಟುಡಿಯೋದ ಗಾಜಿನ ಕಿಟಕಿ ಮೂಲಕ ಈ ದೃಶ್ಯ ಕಾಣಿಸಿದ್ದಾಗಿ ಪೊಲೀಸರು ಎಫ್​​ಐಆರ್​​​ನಲ್ಲಿ ನಮೂದಿಸಿದ್ದಾರೆ. ಇನ್ನು ಪೊಲೀಸರು ಡಕ್ ಮೂಲಕ ಸ್ಟುಡಿಯೋದ ಮೊದಲ ಫ್ಲೋರ್​​ನಲ್ಲಿ ಬಾತ್​ರೂಂಗೆ ಹೋದಾಗ ಅವರ ಮೂಗಿಗೆ ಪೆಟ್ರೋಲ್ ವಾಸನೆ ಗಾಢವಾಗಿ ಬಡಿಯಿತಂತೆ.

ರೋಹಿತ್, ಮಕ್ಕಳ ಮೇಲೆ ಪೆಟ್ರೋಲ್ ಸುರಿದಿದ್ದನಂತೆ. ಜೊತೆಗೆ ರಬ್ಬರ್ ಸೊಲ್ಯೂಷನ್ ಅನ್ನು ಸಹ ನೆಲದ ಮೇಲೆ ಚೆಲ್ಲಿದ್ದನಂತೆ. ಪೊಲೀಸರು ಬಾತ್​​ರೋಂಗೆ ಹೋದಾಗ ರೋಹಿತ್ ಆರ್ಯನ ಸೊಂಟದಲ್ಲಿ ಬಂದೂಕು ಇರುವುದು ಪೊಲೀಸರಿಗೆ ಕಂಡಿತಂತೆ. ಪೊಲೀಸರನ್ನು ನೋಡಿದ ಕೂಡಲೇ ರೋಹಿತ್ ಆರ್ಯ ಮೊದಲು ಪೆಪ್ಪರ್ ಸ್ಪ್ರೇ ಹೊಡೆದನಂತೆ. ಬಳಿಕ ಸೊಂಟದಲ್ಲಿರುವ ಏರ್​ ಗನ್ ಕೈಗೆ ತೆಗೆದುಕೊಂಡು ಒಮ್ಮೆ ಮಕ್ಕಳ ಕಡೆಗೆ ಗುರಿ ಮಾಡಿ, ಬಳಿಕ ಪೊಲೀಸರ ಕಡೆಗೆ ಗುರಿ ಮಾಡಿದನಂತೆ, ಕೂಡಲೇ ಅಮೋಲ್ ದಾವ್ಡೆಕರ್ ಹೆಸರಿನ ಪೊಲೀಸ್ ಅಧಿಕಾರಿ ತಮ್ಮ ಸರ್ವೀಸ್ ರಿವಾಲ್ವರ್​​ನಿಂದ ಗುಂಡು ಹಾರಿಸಿದ್ದಾರೆ.

ಇದನ್ನೂ ಓದಿ:ಮಕ್ಕಳ ಅಪಹರಣಕ್ಕೆ ಮುಂಚೆ ರೋಹಿತ್ ಮಾಡಿದ್ದ ತಯಾರಿ, ಪೊಲೀಸರೇ ಶಾಕ್

ಗುಂಡು ತಗುಲಿ ಗಾಯಗೊಂಡ ರೋಹಿತ್ ಆರ್ಯನನ್ನು ಕೂಡಲೇ ಜೋಗೇಶ್ವರಿ ಟ್ರಾಮಾ ಕೇರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೋಹಿತ್ ನಿಧನ ಹೊಂದಿದ್ದಾನೆ. ಇದೀಗ ಪ್ರಕರಣದ ಬಗ್ಗೆ ಎಫ್​​ಐಆರ್ ದಾಖಲಾಗಿದ್ದು, ಪೊಲೀಸರೇ ದೂರುದಾರರಾಗಿ ಎಫ್​​ಐಆರ್ ದಾಖಲು ಮಾಡಿದ್ದಾರೆ.

‘ಲೆಟ್ಸ್ ಚೇಂಜ್’ ಸಿನಿಮಾ ನಿರ್ದೇಶಿಸಿದ್ದ ರೋಹಿತ್ ಆರ್ಯ, ಇನ್ನೂ ಕೆಲ ಸಿನಿಮಾಗಳಿಗೆ ಬರಹಗಾರನಾಗಿ ಕೆಲಸ ಮಾಡಿದ್ದ. ಮಹಾರಾಷ್ಟ್ರದ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಕೆಲವು ಸ್ವಚ್ಛತೆ ಕುರಿತಾದ ಕೆಲ ಕಾರ್ಯಕ್ರಮಗಳನ್ನು ಸಹ ಮಾಡಿದ್ದ. ಆದರೆ ತನಗೆ ನೀಡಬೇಕಾದ ಮನ್ನಣೆ ನೀಡಿಲ್ಲವೆಂದು, ಹಣ ನೀಡಿಲ್ಲವೆಂದು ಆರೋಪಿಸಿ ಮಕ್ಕಳನ್ನು ಅಪಹರಿಸಿದ್ದ. ಈ ಮೊದಲೂ ಸಹ ಮಾಜಿ ಶಿಕ್ಷಣ ಸಚಿವರ ಮನೆ ಎದುರು ಉಪವಾಸ ಸತ್ಯಾಗ್ರಹಗಳನ್ನು ರೋಹಿತ್ ಆರ್ಯ ಮಾಡಿದ್ದ. ಈಗ ಅಪಹರಣ ಮಾಡಲು ಹೋಗಿ ಪೊಲೀಸರ ಗುಂಡಿನಿಂದ ಸಾವನ್ನಪ್ಪಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:46 pm, Sat, 1 November 25

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ