Pathaan Teaser: ಕೊನೆಗೂ ಅಭಿಮಾನಿಗಳೆದುರು ಕಾಣಿಸಿಕೊಳ್ಳಲು ಮನಸ್ಸು ಮಾಡಿದ ಶಾರುಖ್; ‘ಪಠಾಣ್’ ರಿಲೀಸ್ ಯಾವಾಗ?

Shah Rukh Khan | Deepika Padukone: ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಪಠಾಣ್’ ಟೀಸರ್ ರಿಲೀಸ್ ಮಾಡಲಾಗಿದೆ. ಅದರಲ್ಲಿ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ. 2023ರ ಜನವರಿ 25ರಂದು ಚಿತ್ರ ರಿಲೀಸ್ ಆಗಲಿದೆ.

Pathaan Teaser: ಕೊನೆಗೂ ಅಭಿಮಾನಿಗಳೆದುರು ಕಾಣಿಸಿಕೊಳ್ಳಲು ಮನಸ್ಸು ಮಾಡಿದ ಶಾರುಖ್; ‘ಪಠಾಣ್’ ರಿಲೀಸ್ ಯಾವಾಗ?
ಶಾರುಖ್ ಖಾನ್
Edited By:

Updated on: Mar 02, 2022 | 7:56 PM

ಶಾರುಖ್ ಖಾನ್ (Shah Rukh Khan) ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡು ನಾಲ್ಕು ವರ್ಷಗಳ ಮೇಲಾಗಿದೆ. ಕೆಲವು ಚಿತ್ರಗಳು ಸೆಟ್ಟೇರಿದ್ದರೂ ಇದುವರೆಗೆ ಯಾವ ಅಪ್ಡೇಟ್​ಗಳೂ ಸಿಕ್ಕಿರಲಿಲ್ಲ. ಶಾರುಖ್ ಯಾವೆಲ್ಲಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಮಾಹಿತಿಯಷ್ಟೇ ಅಭಿಮಾನಿಗಳಿಗೆ ಸಿಗುತ್ತಿತ್ತು. ಇದೀಗ ಹೊಸ ಸುದ್ದಿ ಬಂದಿದೆ. ಶಾರುಖ್ ಕಮ್​ಬ್ಯಾಕ್ ಮಾಡಿದ್ದಾರೆ. ಅದೂ ಮಾಸ್ ಅವತಾರದಲ್ಲಿ. ಬಾಲಿವುಡ್ ಬಾದ್​ಷಾ ಅಭಿನಯದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಪಠಾಣ್’ (Pathaan) ಚಿತ್ರದ ಮೊದಲ ಟೀಸರ್ ಬಿಡುಗಡೆ ಮಾಡಲಾಗಿದೆ. ಶಾರುಖ್​ ಪಾತ್ರದ ತುಸುವೇ ಗ್ಲಿಂಪ್ಸ್ ತೋರಿಸಿರುವ ಚಿತ್ರತಂಡ ಕುತೂಹಲ ಉಳಿಸಿಕೊಂಡಿದೆ. ಆದರೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದೀಪಿಕಾ ಪಡುಕೋಣೆ ಹಾಗೂ ಜಾನ್ ಅಬ್ರಹಾಂ ಪಾತ್ರಗಳನ್ನು ರಿವೀಲ್ ಮಾಡಲಾಗಿದೆ. ಪಕ್ಕಾ ಆಕ್ಷನ್ ಚಿತ್ರ ಇದಾಗಿರಲಿದೆ ಎಂಬುದನ್ನು ಕಟ್ಟಿಕೊಟ್ಟಿರುವ ಟೀಸರ್​ನಲ್ಲಿ ರಿಲೀಸ್ ದಿನಾಂಕವನ್ನು ಘೋಷಿಸಲಾಗಿದೆ. ಆದರೆ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಬಹುತೇಕ ಒಂದು ವರ್ಷ ಕಾಯಲೇಬೇಕಿದೆ. ಜನವರಿ 25ರಂದು ‘ಪಠಾಣ್’ ವಿಶ್ವಾದ್ಯಂತ ರಿಲೀಸ್ ಆಗಲಿದೆ.

ಆಕ್ಷನ್ ಥ್ರಿಲ್ಲರ್ ಮಾದರಿಯ ‘ಪಠಾಣ್’ನಲ್ಲಿ ಸ್ಪೈ ಆಗಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಟೀಸರ್ ಶೇರ್ ಮಾಡಿರುವ ಶಾರುಖ್, ‘‘ಬಹಳ ತಡವಾಗಿ ನಿಮ್ಮೆದುರು ಬರುತ್ತಿದ್ದೇವೆ ಎನ್ನುವುದು ನನಗೆ ತಿಳಿದಿದೆ. ಆದರೆ ದಿನಾಂಕವನ್ನು ನೆನಪಿಟ್ಟುಕೊಳ್ಳಿ.. 2023ರ ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ’’ ಎಂದು ಬರೆದಿದ್ದಾರೆ.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್​ನಲ್ಲಿ ಆದಿತ್ಯ ಚೋಪ್ರಾ ನಿರ್ಮಿಸುತ್ತಿರುವ ಈ ಚಿತ್ರ, ವೈಆರ್​ಎಫ್​ನ 50ನೇ ಚಿತ್ರ ಎನ್ನುವುದು ವಿಶೇಷ. ಇದೇ ಕಾರಣದಿಂದ ಬಹಳ ಅದ್ದೂರಿಯಾಗಿ ಚಿತ್ರವನ್ನು ಕಟ್ಟಿಕೊಡಲು ಪ್ರಯತ್ನಿಸಲಾಗುತ್ತಿದೆ. ಸದ್ಯ ಮೂರು ಭಾಷೆಗಳಲ್ಲಿ ಚಿತ್ರದ ರಿಲೀಸ್ ಘೋಷಿಸಲಾಗಿದೆ. ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಶಾರುಖ್ ಹಂಚಿಕೊಂಡ ಟೀಸರ್ ಇಲ್ಲಿದೆ:

ಟೀಸರ್​ನಲ್ಲಿ ‘ಪಠಾಣ್’ ಪಾತ್ರದ ಪುಟ್ಟ ಪರಿಚಯವಿದೆ. ಆತ ಅನಾಮಧೇಯನಾಗಿ, ದೇಶವನ್ನು ರಕ್ಷಿಸಬೇಕು ಎಂಬ ಏಕೈಕ ಉದ್ದೇಶದಿಂದ ಕೆಲಸ ಮಾಡುತ್ತಿರುತ್ತಾನೆ ಎಂದು ದೀಪಿಕಾ, ಜಾನ್ ಮಾತನಾಡಿಕೊಳ್ಳುತ್ತಿರುತ್ತಾರೆ. ನಂತರ ಶಾರುಖ್ ಅವರ ಗೆಟಪ್​ಅನ್ನು ತುಸು ರಿವೀಲ್ ಮಾಡಲಾಗಿದೆ.

ಶಾರುಖ್​ಗೆ ವೃತ್ತಿ ಜೀವನದ ದೃಷ್ಟಿಯಿಂದ ‘ಪಠಾಣ್’ ಬಹಳ ಮುಖ್ಯವಾದ ಚಿತ್ರವಾಗಿದೆ. ಕಾರಣ, ಅಷ್ಟೆಲ್ಲಾ ದೊಡ್ಡ ಅಭಿಮಾನಿ ಬಳಗವಿದ್ದರೂ ಅವರ ಈ ಹಿಂದಿನ ‘ಜೀರೋ’ ಹೀನಾಯವಾಗಿ ಸೋತಿತ್ತು. ಈ ಕಾರಣದಿಂದ ಶಾರುಖ್ ಹೊಸ ಚಿತ್ರಗಳ ಆಯ್ಕೆಯಲ್ಲಿ ಬಹಳ ನಿಗಾವಹಿಸಿದ್ದಾರೆ. ‘ಪಠಾಣ್’ ಹೇಗೆ ಮೂಡಿಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:

Virl Video: ಯಕ್ಷಗಾನದಲ್ಲೂ ಪುಷ್ಪ ಸಿನಿಮಾ ಕ್ರೇಜ್; ರಂಗಸ್ಥಳದಲ್ಲಿ ಶ್ರೀವಲ್ಲಿ ಹಾಡಿಗೆ ಸ್ಟೆಪ್ ಹಾಕಿದ ಕಲಾವಿದ

Aamir Khan: ಚಿತ್ರ ವೀಕ್ಷಿಸಿ ಕಣ್ಣೀರಾದ ಆಮಿರ್; ಖ್ಯಾತ ನಟನನ್ನೇ ಭಾವುಕವಾಗಿಸಿದ ಸಿನಿಮಾ ಯಾವುದು?