Mannat: ಅರೆಸ್ಟ್​ ಆಗುವ ಮುನ್ನ 8 ಗಂಟೆಗಳ ಕಾಲ ಶಾರುಖ್​ ಮನೆ ಒಳಗೆ ಅಡಗಿ ಕುಳಿತಿದ್ದ ಇಬ್ಬರು ಫ್ಯಾನ್ಸ್​

|

Updated on: Mar 08, 2023 | 5:20 PM

Shah Rukh Khan | Mannat: ರಾತ್ರಿ 3 ಗಂಟೆಗೆ ‘ಮನ್ನತ್​’ ಬಂಗಲೆಯ ಕಾಂಪೌಂಡ್​ ಹಾರಿ ಇಬ್ಬರು ಅಭಿಮಾನಿಗಳು ಒಳಗೆ ಬಂದರು. ಮರುದಿನ ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ಮೇಕಪ್​ ರೂಮ್​ನಲ್ಲಿ ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು.

Mannat: ಅರೆಸ್ಟ್​ ಆಗುವ ಮುನ್ನ 8 ಗಂಟೆಗಳ ಕಾಲ ಶಾರುಖ್​ ಮನೆ ಒಳಗೆ ಅಡಗಿ ಕುಳಿತಿದ್ದ ಇಬ್ಬರು ಫ್ಯಾನ್ಸ್​
ಶಾರುಖ್ ಖಾನ್
Follow us on

ನಟ ಶಾರುಖ್​ ಖಾನ್​ (Shah Rukh Khan) ಅವರನ್ನು ಆರಾಧಿಸುವಂತಹ ಕೋಟ್ಯಂತರ ಅಭಿಮಾನಿಗಳು ಇದ್ದಾರೆ. ಕೆಲವೊಮ್ಮೆ ಜನರ ಅಭಿಮಾನ ಮಿತಿ ಮೀರುತ್ತದೆ. ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು​ ಶಾರುಖ್​ ನಿವಾಸ ‘ಮನ್ನತ್​’ (Mannat) ಒಳಗೆ ನುಗ್ಗಿದ ಇಬ್ಬರು ಅಭಿಮಾನಿಗಳನ್ನು ಇತ್ತೀಚೆಗೆ ಅರೆಸ್ಟ್​ ಮಾಡಲಾದ ಸುದ್ದಿ ಪ್ರಸಾರ ಆಗಿತ್ತು. ಆ ಘಟನೆಯ ವಿವರಗಳು ಈಗ ಹೊರಬರುತ್ತಿವೆ. ಅಚ್ಚರಿ ಏನೆಂದರೆ ಆ ಫ್ಯಾನ್ಸ್​ (Shah Rukh Khan Fans) ಇಬ್ಬರು ಅರೆಸ್ಟ್​ ಆಗುವುದಕ್ಕೂ ಮುನ್ನ ಬರೋಬ್ಬರಿ 8 ಗಂಟೆಗಳ ಕಾಲ ಶಾರುಖ್​ ಖಾನ್​ರ ಮನೆಯೊಳಗೆ ಅಡಗಿ ಕುಳಿತಿದ್ದರು! ಈ ವಿಷಯ ಗೊತ್ತಾದಾಗ ಮನ್ನತ್​ ಸಿಬ್ಬಂದಿಗೆ ಶಾಕ್​ ಆಯಿತು. ಯಾಕೆಂದರೆ, ಆ ಅಭಿಮಾನಿಗಳಿಬ್ಬರು ಶಾರುಖ್​ ಮನೆಯೊಳಗೆ ನುಗ್ಗಿದ್ದು ನಡು ರಾತ್ರಿಯಲ್ಲಿ.

ಮೇಕಪ್​ ರೂಮ್​ನಲ್ಲಿ ಅಡಗಿ ಕುಳಿತ ಫ್ಯಾನ್ಸ್​:

ಶಾರುಖ್ ಖಾನ್​ ಅವರದ್ದು ಬರೀ ಮನೆಯಲ್ಲ.. ಅದು ಅರಮನೆ, ದೊಡ್ಡ ಬಂಗಲೆ. ಸಾಕಷ್ಟು ಕೊಠಡಿಗಳು ಈ ಬಂಗಲೆಯಲ್ಲಿವೆ. ಅನೇಕ ಸಂದರ್ಶನಗಳನ್ನು ಈ ಮನೆಯಲ್ಲೇ ಮಾಡಲಾಗುತ್ತದೆ. ಪ್ರಚಾರಕ್ಕೆ ಸಂಬಂಧಿಸಿದ ವಿಡಿಯೋಗಳ ಶೂಟಿಂಗ್ ಕೂಡ ಇಲ್ಲಿ ನಡೆಯುತ್ತದೆ. ಶಾರುಖ್​ ಖಾನ್​​ ಅವರಿಗಾಗಿ ಪ್ರತ್ಯೇಕ ಮೇಕಪ್​ ರೂಂ ಇದೆ. ಆ ಇಬ್ಬರು ಅಭಿಮಾನಿಗಳು ಇದೇ ಮೇಕಪ್​ ರೂಂ ಒಳಗೆ 8 ಗಂಟೆಗಳ ಕಾಲ ಅಡಗಿ ಕುಳಿತಿದ್ದರು.

ಇದನ್ನೂ ಓದಿ: Mannat: ಶಾರುಖ್​ ಖಾನ್​ ಮನೆಯ ಗೇಟಿಗೆ ವಜ್ರದ ಅಲಂಕಾರ; ಹೇಗಿದೆ ನೋಡಿ ‘ಮನ್ನತ್​’ ವೈಭೋಗ

ಇದನ್ನೂ ಓದಿ
Shah Rukh Khan Birthday: ಶಾರುಖ್​​ ಜನ್ಮದಿನ; 2023ರ ವರ್ಷ ಪೂರ್ತಿ ಆಗಲಿದೆ ಕಿಂಗ್​ ಖಾನ್ ಸಿನಿಮಾ ಉತ್ಸವ​​
Shah Rukh Khan: ವಿರಾಟ್​ ಕೊಹ್ಲಿ ಪರಾಕ್ರಮದಿಂದ ಪಾಕ್​ಗೆ ಸೋಲು; ಶಾರುಖ್​ ಖಾನ್​ ಹೇಳಿದ್ದೇನು?
Shah Rukh Khan: 20 ಲಕ್ಕಿ ಅಭಿಮಾನಿಗಳಿಗೆ ಸ್ಟಾರ್​ ಹೋಟೆಲ್​ನಲ್ಲಿ ರೂಂ ಬುಕ್​ ಮಾಡಿ ಭೇಟಿಯಾದ ಶಾರುಖ್​ ಖಾನ್​
SRK: ತಮ್ಮದೇ ಶರ್ಟ್​ ಜತೆ ಮಾತನಾಡಿಕೊಂಡ ಶಾರುಖ್​; ಗಂಡನ ಪರಿಸ್ಥಿತಿ ಕಂಡು ಗೌರಿ ಖಾನ್​ ಗಲಿಬಿಲಿ

ಗುಜರಾತ್​ನಿಂದ ಮುಂಬೈಗೆ ಬಂದ ಇಬ್ಬರು ಅಭಿಮಾನಿಗಳು ರಾತ್ರಿ 3 ಗಂಟೆಗೆ ಶಾರುಖ್​ ಮನೆಯ ಕಾಂಪೌಂಡ್​ ಹಾರಿ ಒಳಗೆ ಬಂದರು. ರಾತ್ರಿ ಆಗಿದ್ದರಿಂದ ಯಾರ ಕಣ್ಣಿಗೂ ಕಾಣದಂತೆ ಮನೆಯೊಳಗೆ ಎಂಟ್ರಿ ಪಡೆದರು. ಬಳಿಕ ಅವರು ಶಾರುಖ್​ ಖಾನ್​ರ ಮೇಕಪ್​ ರೂಂ ಒಳಗೆ ಅಡಗಿ ಕುಳಿತುಕೊಂಡರು. ಬೆಳಗ್ಗೆ 10.30ರ ಸುಮಾರಿಗೆ ಅವರಿಬ್ಬರನ್ನು ನೋಡಿ ಶಾರುಖ್​ ಖಾನ್​ಗೆ ಅಚ್ಚರಿ ಆಯಿತು. ಸದ್ಯ ಆ ಹುಚ್ಚು ಅಭಿಮಾನಿಗಳ ವಿರುದ್ಧ ಕೇಸ್​ ದಾಖಲಾಗಿದ್ದು, ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್ ನಿವಾಸ ‘ಮನ್ನತ್​’ಗೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಿದ್ದವ ಈಗ ಪೊಲೀಸರ ಅತಿಥಿ

ಮತ್ತೆ ಟ್ರ್ಯಾಕ್​ಗೆ ಮರಳಿದ ಶಾರುಖ್​ ಖಾನ್​:

ಹಲವು ವರ್ಷಗಳ ಕಾಲ ಶಾರುಖ್​ ಖಾನ್ ಅವರು ಸತತ ಸೋಲು ಅನುಭವಿಸಿದರು. ಆದರೆ 2023ರ ಆರಂಭದಲ್ಲೇ ಭರ್ಜರಿಯಾಗಿ ಕಮ್​ಬ್ಯಾಕ್​ ಮಾಡಿದರು. ‘ಪಠಾಣ್​’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಗಿದೆ. ವಿಶ್ವಾದ್ಯಂತ 1000 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ. ಆ ಗೆಲುವಿನಿಂದಾಗಿ ಶಾರುಖ್​ ಖಾನ್​ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಜಾಸ್ತಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 4:39 pm, Wed, 8 March 23