ಹೇಗಿದೆ ‘ಜವಾನ್’ ಸಿನಿಮಾದ ಫಸ್ಟ್ ಹಾಫ್? ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್‌ನಲ್ಲಿ ಏನೆಲ್ಲ ಇದೆ?

| Updated By: ರಾಜೇಶ್ ದುಗ್ಗುಮನೆ

Updated on: Sep 07, 2023 | 8:22 AM

ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ‘ಜವಾನ್​’ ಚಿತ್ರ ಸಿದ್ಧವಾಗಿದೆ. ಶಾರುಖ್​ ಖಾನ್​, ವಿಜಯ್​ ಸೇತುಪತಿ, ನಯನತಾರಾ, ದೀಪಿಕಾ ಪಡುಕೋಣೆ ಮುಂತಾದವರ ಕಾಂಬಿನೇಷನ್​ನಿಂದ ಈ ಸಿನಿಮಾದ ಮೆರುಗು ಹೆಚ್ಚಿದೆ. ಅಟ್ಲಿ ನಿರ್ದೇಶನ ಮಾಡಿದ್ದಾರೆ ಎಂಬ ಕಾರಣಕ್ಕೆ ಹೈಪ್​ ಹೆಚ್ಚಾಗಿದೆ. ಈ ಚಿತ್ರದ ಫಸ್ಟ್​ ಹಾಫ್​ ವಿಮರ್ಶೆ ಇಲ್ಲಿದೆ..

ಹೇಗಿದೆ ಜವಾನ್ ಸಿನಿಮಾದ ಫಸ್ಟ್ ಹಾಫ್? ಶಾರುಖ್ ಖಾನ್-ಅಟ್ಲಿ ಕಾಂಬಿನೇಷನ್‌ನಲ್ಲಿ ಏನೆಲ್ಲ ಇದೆ?
ಶಾರುಖ್​ ಖಾನ್​
Follow us on

ನಟ ಶಾರುಖ್​ ಖಾನ್​ ಅಭಿನಯದ ‘ಜವಾನ್​’ ಸಿನಿಮಾ (Jawan Movie) ಅದ್ದೂರಿಯಾಗಿ ಬಿಡುಗಡೆ ಆಗಿದೆ. ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಫಸ್ಟ್​ ಡೇ ಫಸ್ಟ್​ ಶೋ ನೋಡಿದ ಅಭಿಮಾನಿಗಳು ಎಂಜಾಯ್​ ಮಾಡುತ್ತಿದ್ದಾರೆ. ಶಾರುಖ್​ ಖಾನ್ (Shah Rukh Khan) ಜೊತೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್​ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಬಹುತಾರಾಗಣದ ಈ ಸಿನಿಮಾಗೆ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧವಾಗಿದೆ. ಮೊದಲ ದಿನ ಭರ್ಜರಿ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ. ಆ್ಯಕ್ಷನ್​ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗುತ್ತಿದೆ. ಹಾಗಾದರೆ ‘ಜವಾನ್​’ ಸಿನಿಮಾದ ಫಸ್ಟ್​ ಹಾಫ್​ (Jawan first half Review) ಹೇಗಿದೆ? ಯಾವೆಲ್ಲ ಅಂಶಗಳು ಹೈಲೈಟ್​ ಆಗಿವೆ? ಚಿತ್ರದ ಕಥೆಯ ಎಳೆ ಏನು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..

  1. ಒಮ್ಮೆ ಹೀರೋ ರೀತಿ, ಮತ್ತೊಮ್ಮೆ ವಿಲನ್ ರೀತಿ ಅಬ್ಬರಿಸಿದ ‘ಜವಾನ್’.
  2. ಗಾಯಾಳು ರೀತಿಯಲ್ಲಿ ಎಂಟ್ರಿ ನೀಡಿ ಸರ್ಪೈಸ್ ಕೊಟ್ಟ ಶಾರುಖ್ ಖಾನ್.
  3. ಪ್ರತಿ ಬಾರಿ ಬೇರೆ ಬೇರೆ ಗೆಟಪ್‌ನಲ್ಲಿ ಬಂದು ವಿಕ್ರಮ್ ರಾಥೋಡ್ ಎಂಬ ಹೆಸರಿನಲ್ಲಿ ಹಲ್‌ಚಲ್ ಎಬ್ಬಿಸುವ ಶಾರುಖ್.
  4. ಟ್ರೇನ್ ಹೈಜಾಕ್ ದೃಶ್ಯದ ಮೂಲಕ ಕಥೆಯಲ್ಲಿ ಟೆನ್ಷನ್ ಹೆಚ್ಚಿಸಿದ ನಿರ್ದೇಶಕ ಅಟ್ಲಿ.
  5. ಫಸ್ಟ್ ಹಾಫ್‌ನಲ್ಲೇ ‘ಜಿಂದಾ ಬಂದಾ..’ ಹಾಡಿನಿಂದ ಅಭಿಮಾನಿಗಳನ್ನು ಕುಣಿಸಿದ ಬಾಲಿವುಡ್ ಬಾದ್‌ಷಾ.
  6. ಲೇಡಿ ಸೂಪರ್ ಕಾಪ್ ಪಾತ್ರದಲ್ಲಿ ಹೆಚ್ಚು ಸ್ಕ್ರೀನ್ ಸ್ಪೇಸ್ ಗಿಟ್ಟಿಸಿದ ನಟಿ ನಯನತಾರಾ. ಜೋಡಿ ಆಗಿಯೂ, ಎದುರಾಳಿಗಳಾಗಿಯೂ ಎರಡು ಶೇಡ್‌ನಲ್ಲಿ ಸಸ್ಪೆನ್ಸ್ ಕಾಯ್ದುಕೊಂಡ ನಯನತಾರಾ-ಶಾರುಖ್ ಖಾನ್.
  7. ಆ್ಯಕ್ಷನ್‌ಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ ನಿರ್ದೇಶಕ ಅಟ್ಲಿ. ಮಾಸ್ ಪ್ರೇಕ್ಷಕರಿಗೆ ಫಸ್ಟ್ ಹಾಫ್ ಇಷ್ಟವಾಗುವಂತಿದೆ.
  8. ದೀಪಿಕಾ ಪಡುಕೋಣೆ ಪಾತ್ರ ಫಸ್ಟ್ ಹಾಫ್‌ನಲ್ಲಿ ಎಂಟ್ರಿ ನೀಡಿಲ್ಲ. ಹಾಗಾಗಿ ಅವರ ಅಭಿಮಾನಿಗಳು ಸೆಕೆಂಡ್ ಹಾಫ್‌ಗೆ ಕಾಯೋದು ಅನಿವಾರ್ಯ.
  9. ಮೊದಲಾರ್ಧದ ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ವಿಜಯ್ ಸೇತುಪತಿ. ಕಾಲಿ ಎಂಬ ಈ ಪಾತ್ರಕ್ಕೆ ಇದೆ ಫ್ಲ್ಯಾಶ್‌‌‌ ಬ್ಯಾಕ್.
  10. ರೈತರ ಸಮಸ್ಯೆ, ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆ ಮುಂತಾದ ಗಂಭೀರ ವಿಚಾರಗಳ ಬಗ್ಗೆಯೂ ಹೆಚ್ಚು ಮಾತನಾಡುತ್ತದೆ ‘ಜವಾನ್’ ಚಿತ್ರದ ಕಥಾನಾಯಕನ ಪಾತ್ರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.