ಶಾರುಖ್​ ಖಾನ್​ಗೆ ಪೆಟ್ಟಾಗಿದ್ದು ಸುಳ್ಳಾ? ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ಹೋಗಿದ್ದು ಯಾಕೆ?

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಪೆಟ್ಟಾಗಿದೆ ಎಂಬ ಸುದ್ದಿ ತಿಳಿದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆದರೆ ಈಗ ಆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಶಾರುಖ್ ಖಾನ್ ಅವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಸದ್ಯ ಅಮೆರಿಕಕ್ಕೆ ತೆರಳಿರುವ ಶಾರುಖ್ ಖಾನ್ ಅವರು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಬರಲಿದ್ದಾರೆ.

ಶಾರುಖ್​ ಖಾನ್​ಗೆ ಪೆಟ್ಟಾಗಿದ್ದು ಸುಳ್ಳಾ? ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ಹೋಗಿದ್ದು ಯಾಕೆ?
Shah Rukh Khan

Updated on: Jul 20, 2025 | 11:47 AM

ಶಾರುಖ್ ಖಾನ್ (SRK) ಅವರ ಅಭಿಮಾನಿಗಳಿಗೆ ಬೇಸರ ಆಗುವಂತಹ ಸುದ್ದಿ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಚಿತ್ರೀಕರಣದ ಸಮಯದಲ್ಲಿ ಶಾರುಖ್ ಖಾನ್ ಅವರಿಗೆ ಪೆಟ್ಟು (Injury) ಆಗಿದೆ ಎಂಬ ಮಾಹಿತಿ ಹರಡಿತ್ತು. ಚಿಕಿತ್ಸೆ ಪಡೆಯುವ ಸಲುವಾಗಿ ಅವರು ಅಮೆರಿಕಕ್ಕೆ ತೆರಳಿದ್ದಾರೆ ಹಾಗೂ ಇಂಗ್ಲೆಂಡ್​ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕೂಡ ವರದಿ ಆಯಿತು. ಆದರೆ ಅದು ಸಂಪೂರ್ಣ ವದಂತಿ ಎಂಬುದು ಈಗ ತಿಳಿದುಬಂದಿದೆ. ಶಾರುಖ್ ಖಾನ್ (Shah Rukh Khan) ಅವರಿಗೆ ಯಾವುದೇ ಗಾಯ ಆಗಿಲ್ಲ ಎಂದು ಎನ್​ಡಿಟಿವಿ ವರದಿ ಮಾಡಿದೆ.

ಸದ್ಯ ಶಾರುಖ್ ಖಾನ್ ಅವರು ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕೆ ‘ಪಠಾಣ್’ ಖ್ಯಾತಿಯ ಸಿದ್ದಾರ್ಥ್ ಆನಂದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜನರಿಗೆ ಈ ಚಿತ್ರದ ಮೇಲೆ ಸಖತ್ ನಿರೀಕ್ಷೆ ಇದೆ. ಶೂಟಿಂಗ್ ವೇಳೆ ಶಾರುಖ್ ಖಾನ್ ಅವರಿಗೆ ಗಾಯ ಆಗಿಲ್ಲ. ಈ ವಿಷಯ ತಿಳಿದ ಬಳಿಕ ಅವರ ಅಭಿಮಾನಿಗಳಿಗೆ ಸಮಾಧಾನ ಆಗಿದೆ.

ಗಾಯ ಆಗಿದ್ದರಿಂದ ಶಾರುಖ್ ಖಾನ್ ಅವರು ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ತೆರಳಿದ್ದಾರೆ ಎಂಬುದು ಕೂಡ ನಿಜವಲ್ಲ. ಅವರು ಅಮೆರಿಕಕ್ಕೆ ಹೋಗಿರುವುದು ವೈಯಕ್ತಿಕ ಕೆಲಸ ಮೇಲೆ. ಜುಲೈ ಎರಡನೇ ವಾರದಲ್ಲಿ ಅವರು ಅಲ್ಲಿಗೆ ತೆರಳಿದ್ದು, ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಮರಳಲಿದ್ದಾರೆ. ಈ ಮೊದಲು ಕೂಡ ಹಲವು ಬಾರಿ ಶಾರುಖ್ ಖಾನ್ ಬಗ್ಗೆ ವದಂತಿ ಹಬ್ಬಿಸಲಾಗಿತ್ತು.

ಇದನ್ನೂ ಓದಿ
ಹೊಸ ಮನೆಗೆ ವಾಸ್ತವ್ಯ ಬದಲಿಸಿದ ಶಾರುಖ್ ಖಾನ್, ಕೊಡುತ್ತಿರುವ ಬಾಡಿಗೆ ಎಷ್ಟು?
‘ಕಾಶ್ಮೀರಕ್ಕೆ ಯಾವಾಗಲೂ ಹೋಗೋಲ್ಲ’; ಗಟ್ಟಿ ನಿರ್ಧಾರ ಮಾಡಿದ್ದ ಶಾರುಖ್
ಐಶಾರಾಮಿ ಮನೆ ‘ಮನ್ನತ್’ ಬಿಟ್ಟು ಬಾಡಿಗೆ ಮನೆಗೆ ಹೋಗುತ್ತಿರುವುದೇಕೆ ಶಾರುಖ್
ಸಾಫ್ಟ್ ಡ್ರಿಂಕ್ಸ್ ಜಾಹೀರಾತು ಮಾಡಬೇಡಿ ಎಂದವರಿಗೆ ಶಾರುಖ್ ಉತ್ತರ ಏನು?

ಶಾರುಖ್ ಖಾನ್ ಅವರು ಮೂಗಿಗೆ ಪೆಟ್ಟು ಮಾಡಿಕೊಂಡಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಆದರೆ ಅದು ನಿಜವಾಗಿರಲಿಲ್ಲ. ಬೇರೆ ಕಾರಣದಿಂದ ಅವರು ಮೂಗಿನ ಸರ್ಜರಿಗೆ ಒಳಗಾಗಿದ್ದರು. ಶೂಟಿಂಗ್ ವೇಳೆ ಮೂಗಿಗೆ ಗಾಯ ಆಗಿರಲಿಲ್ಲ. ಈಗ ವಿನಾ ಕಾರಣವಾಗಿ ಅವರ ಬಗ್ಗೆ ಗಾಳಿ ಸುದ್ದಿ ಹಬ್ಬಿದೆ. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್

ಸಿನಿಮಾಗಳ ಆಯ್ಕೆಯಲ್ಲಿ ಶಾರುಖ್ ಖಾನ್ ಅವರು ಸಖತ್ ಚ್ಯೂಸಿ ಆಗಿದ್ದಾರೆ. ‘ಪಠಾಣ್’, ‘ಜವಾನ್’ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದವು. ಆ ಬಳಿಕ ಅವರು ಯಾವುದೇ ಅವಸರ ಇಲ್ಲದೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಕಿಂಗ್ ಸಿನಿಮಾದ ಕೆಲಸಗಳು ಚಾಲ್ತಿಯಲ್ಲಿವೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.