Shah Rukh Khan: ‘ಪಠಾಣ್​’ ಚಿತ್ರಕ್ಕೆ ಬರಲಿದೆ ಸೀಕ್ವೆಲ್? ನಡೆದಿದೆ ಭರ್ಜರಿ ಸಿದ್ಧತೆ

| Updated By: ರಾಜೇಶ್ ದುಗ್ಗುಮನೆ

Updated on: Feb 22, 2024 | 3:29 PM

ಹಿಟ್ ಚಿತ್ರಗಳಿಗೆ ಸೀಕ್ವೆಲ್ ಮಾಡುವ ಟ್ರೆಂಡ್ ಇತ್ತೀಚೆಗೆ ಜೋರಾಗಿದೆ. ಈ ರೀತಿ ಸೀಕ್ವೆಲ್ ಸಿದ್ಧಗೊಂಡು ಯಶಸ್ಸು ಕಂಡ ಅನೇಕ ಸಿನಿಮಾಗಳು ಇವೆ. ಹೀಗಾಗಿ, ‘ಪಠಾಣ್’ ಚಿತ್ರಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ನಿರ್ಮಾಪಕ ಆದಿತ್ಯ ಚೋಪ್ರಾ ಅವರಿಗೆ ಬಂದಿದೆ. ಈ ಸಿನಿಮಾಗೆ ಗಟ್ಟಿ ಕಥೆಯನ್ನು ಹೆಣೆಯುವ ಕೆಲಸ ಆಗುತ್ತಿದೆ.

Shah Rukh Khan: ‘ಪಠಾಣ್​’ ಚಿತ್ರಕ್ಕೆ ಬರಲಿದೆ ಸೀಕ್ವೆಲ್? ನಡೆದಿದೆ ಭರ್ಜರಿ ಸಿದ್ಧತೆ
ಶಾರುಖ್​ ಖಾನ್​
Follow us on

ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ (Pathaan Movie) ಕಳೆದ ವರ್ಷ ರಿಲೀಸ್ ಆಗಿ ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಇದು ಶಾರುಖ್ ಖಾನ್​ಗೆ ದೊಡ್ಡ ಕಂಬ್ಯಾಕ್ ನೀಡಿದ ಚಿತ್ರ. ಈ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಮಾಡಲು ನಿರ್ಮಾಪಕ ಆದಿತ್ಯ ಚೋಪ್ರಾ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಹಿಟ್ ಚಿತ್ರಗಳಿಗೆ ಸೀಕ್ವೆಲ್ ಮಾಡುವ ಟ್ರೆಂಡ್ ಜೋರಾಗಿದೆ. ಈ ರೀತಿ ಸೀಕ್ವೆಲ್ ಸಿದ್ಧಗೊಂಡು ಯಶಸ್ಸು ಕಂಡ ಅನೇಕ ಸಿನಿಮಾಗಳು ಇವೆ. ಈ ಕಾರಣಕ್ಕೆ ‘ಪಠಾಣ್’ ಚಿತ್ರಕ್ಕೆ ಸೀಕ್ವೆಲ್ ಮಾಡುವ ಆಲೋಚನೆ ಆದಿತ್ಯ ಚೋಪ್ರಾ ಅವರಿಗೆ ಬಂದಿದೆ. ಈ ಸಿನಿಮಾಗೆ ಗಟ್ಟಿ ಕಥೆಯನ್ನು ಹೆಣೆಯುವ ಕೆಲಸ ಆಗುತ್ತಿದೆ. ಬಳಿಕ ಸ್ಕ್ರಿಪ್ಟ್ ಕೆಲಸ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಶಾರುಖ್ ಖಾನ್ ಅವರು 2018ರ ‘ಜೀರೋ’ ಸಿನಿಮಾ ಬಳಿಕ ಸೈಲೆಂಟ್ ಆಗಿದ್ದು. ನಾಲ್ಕು ವರ್ಷಗಳ ಗ್ಯಾಪ್ ಕೊಟ್ಟು ಅವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದರು. ಅದೂ ‘ಪಠಾಣ್’ ಚಿತ್ರದಿಂದ. ಈ ಸಿನಿಮಾ ದೊಡ್ಡ ಗೆಲುವು ಕಂಡಿತು. ಈ ಸಿನಿಮಾ ಮೇಲೆ ಶಾರುಖ್ ಖಾನ್ ಅವರಿಗೆ ವಿಶೇಷ ಪ್ರೀತಿ ಇದೆ. ಹೀಗಾಗಿ, ಅವರು ಕೂಡ ಎರಡನೇ ಪಾರ್ಟ್ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಎಲ್ಲವೂ ಅಂತೆಕಂತೆ ಹಂತದಲ್ಲಿದೆ.

ಶಾರುಖ್ ಖಾನ್ ನಟನೆಯ ಮೂರು ಸಿನಿಮಾಗಳು ಕಳೆದ ವರ್ಷ ರಿಲೀಸ್ ಆದವು. ‘ಪಠಾಣ್’ ಯಶಸ್ಸಿನ ಬಳಿಕ ‘ಜವಾನ್’ ಹಾಗೂ ‘ಡಂಕಿ’ ಸಿನಿಮಾಗಳು ಬಿಡುಗಡೆ ಕಂಡವು. ಈ ಚಿತ್ರಗಳು ಕೂಡ ಗೆದ್ದಿವೆ. ಇದಾದ ಬಳಿಕ ಶಾರುಖ್ ಖಾನ್ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಹೀಗಾಗಿ, ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಯಶ್ ರಾಜ್ ಫಿಲ್ಮ್ಸ್ ಯೂನಿವರ್ಸ್ ಸಿದ್ಧವಾಗಿದೆ. ಈಗ ‘ಪಠಾಣ್ 2’ ಸಿನಿಮಾ ಕೂಡ ಇದೇ ಯೂನಿವರ್ಸ್ ಅಡಿಯಲ್ಲಿ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕಾರಣದಿಂದ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಮುಂದಿನ ದಿನಗಳಲ್ಲಿ ಅಪ್​ಡೇಟ್ ಸಿಗಬೇಕಿದೆ.

ಇದನ್ನೂ ಓದಿ: ಹೊಸ ಉದ್ಯಮಕ್ಕೆ ಕೈ ಹಾಕಿದ ಶಾರುಖ್ ಖಾನ್ ಪತ್ನಿ ಗೌರಿ ಖಾನ್

ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಬಾಲಿವುಡ್​ನ ಬೇಡಿಕೆಯ ಹೀರೋಗಳು. ಇವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಇವರನ್ನು ಒಟ್ಟಿಗೆ ತೆರೆಮೇಲೆ ನೋಡೋ ಅದೃಷ್ಟ ಸಿಗಲಿದೆ. ‘ಟೈಗರ್ vs ಪಠಾಣ್’ ಸಿನಿಮಾ ಕೂಡ ಸಿದ್ಧಗೊಳ್ಳಲಿದೆ. ಈ ಚಿತ್ರದ ಬಗ್ಗೆಯೂ ನಿರೀಕ್ಷೆ ಸೃಷ್ಟಿ ಆಗಿದೆ. ‘ಪಠಾಣ್’ ಸಿನಿಮಾದಲ್ಲಿ ಸಲ್ಲು ಅತಿಥಿ ಪಾತ್ರ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ