ಮುಂದಿನ ಸಿನಿಮಾದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ನಟ ಶಾರುಖ್​ ಖಾನ್​

‘ಪಠಾಣ್​’, ‘ಜವಾನ್​’, ‘ಡಂಕಿ’ ಸಿನಿಮಾಗಳು ಕಳೆದ ವರ್ಷ ಹಿಟ್​ ಆದವು. ಆ ಬಳಿಕ ಶಾರುಖ್​ ಖಾನ್​ ಅವರು ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ಬೇಗ ಹೊಸ ಸಿನಿಮಾದ ಕೆಲಸ ಶುರು ಮಾಡಲಿ ಎಂಬುದು ಫ್ಯಾನ್ಸ್​ ಬಯಕೆ. ಹೊಸ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಗುಡ್​ ನ್ಯೂಸ್​ ಸಿಕ್ಕಿದೆ. ಜುಲೈ ಅಥವಾ ಆಗಸ್ಟ್​ನಲ್ಲಿ ಶೂಟಿಂಗ್​ ಆರಂಭಿಸುವುದಾಗಿ ಶಾರುಖ್​ ಖಾನ್​ ಹೇಳಿದ್ದಾರೆ.

ಮುಂದಿನ ಸಿನಿಮಾದ ಶೂಟಿಂಗ್​ ಬಗ್ಗೆ ಅಪ್​ಡೇಟ್​ ನೀಡಿದ ನಟ ಶಾರುಖ್​ ಖಾನ್​
ಶಾರುಖ್​ ಖಾನ್​

Updated on: May 03, 2024 | 10:50 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಈಗ ಸಿನಿಮಾಗಳ ಆಯ್ಕೆಯಲ್ಲಿ ಸಖತ್​ ಕಾಳಜಿ ವಹಿಸುತ್ತಿದ್ದಾರೆ. 2023ರಲ್ಲಿ ಅವರು 3 (ಪಠಾಣ್​, ಜವಾನ್​, ಡಂಕಿ) ಸಿನಿಮಾಗಳನ್ನು ನೀಡಿದರು. ಆ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರಲಿಲ್ಲ. ಶಾರುಖ್​ ಖಾನ್​ ಹೊಸ ಸಿನಿಮಾ (Shah Rukh Khan New Movie) ಬಗ್ಗೆ ಘೋಷಣೆ ಆಗುವುದು ಇನ್ನೂ ಬಾಕಿ ಇದೆ. ಅದಕ್ಕಾಗಿ ಅವರ ಅಭಿಮಾನಿಗಳು ಕಾದಿದ್ದಾರೆ. ಈಗ ಶಾರುಖ್​ ಖಾನ್​ (SRK) ಅವರು ಒಂದು ಖುಷಿಯ ಸುದ್ದಿ ನೀಡಿದ್ದಾರೆ. ತಮ್ಮ ಮುಂದಿನ ಸಿನಿಮಾದ ಶೂಟಿಂಗ್​ ಯಾವಾಗ ಶುರು ಆಗಲಿದೆ ಎಂಬ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಐಪಿಎಲ್​ನಲ್ಲಿ ‘ಕೊಲ್ಕತ್ತಾ ನೈಟ್​ ರೈಡರ್ಸ್​’ ತಂಡದ ಮಾಲಿಕತ್ವ ಹೊಂದಿರುವ ಶಾರುಖ್​ ಖಾನ್​ ಅವರು ಪಂದ್ಯ ನೋಡಲು ಆಗಮಿಸಿದ್ದ ವೇಳೆ ‘ಸ್ಟಾರ್​ ಸ್ಪೋರ್ಟ್ಸ್​’ ವಾಹಿನಿಗೆ ಸಂದರ್ಶನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮುಂದಿನ ಸಿನಿಮಾ ಕುರಿತು ಮಾತನಾಡಿದ್ದಾರೆ. ಇಷ್ಟು ದಿನಗಳ ಕಾಲ ಬ್ರೇಕ್​ ಪಡೆದುಕೊಂಡಿದ್ದ ಅವರು ಜುಲೈ ಅಥವಾ ಆಗಸ್ಟ್​ನಲ್ಲಿ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

‘ಕಳೆದ ವರ್ಷ ನಾನು ಮೂರು ಸಿನಿಮಾ ಮಾಡಿದೆ. ಹಾಗಾಗಿ ಸ್ವಲ್ಪ ವಿಶ್ರಾಂತಿ ಪಡೆಯೋಣ ಎನಿಸಿತು. ಮೂರು ಸಿನಿಮಾಗಳಿಗಾಗಿ ಸಾಕಷ್ಟು ದೈಹಿಕ ಶ್ರಮ ಆಗಿತ್ತು. ಆದ್ದರಿಂದ ಬ್ರೇಕ್​ ತೆಗೆದುಕೊಂಡೆ. ಎಲ್ಲ ಮ್ಯಾಚ್​ ನೋಡೋಕೆ ಬರುತ್ತೇನೆ ಅಂತ ತಂಡದವರಿಗೆ ಹೇಳಿದೆ. ನನ್ನ ಮುಂದಿನ ಸಿನಿಮಾದ ಶೂಟಿಂಗ್​ ಜುಲೈ ಅಥವಾ ಆಗಸ್ಟ್​ನಲ್ಲಿ ಇರಲಿದೆ. ಜೂನ್​ನಲ್ಲಿ ಪ್ಲ್ಯಾನ್​ ಮಾಡಲಿದ್ದೇವೆ. ಅಲ್ಲಿಯವರೆಗೆ ತಂಡದ ಎಲ್ಲ ಮ್ಯಾಚ್​ ನೋಡಲು ಖುಷಿಯಿಂದ ಬರುತ್ತೇನೆ’ ಎಂದು ಶಾರುಖ್​ ಖಾನ್​ ಹೇಳಿದ್ದಾರೆ.

ಇದನ್ನೂ ಓದಿ: IPL ಪ್ರಸಾರದ ವೇಳೆ ಜಾಹೀರಾತು; ಮುಂಚೂಣಿಯಲ್ಲಿ ಶಾರುಖ್​, ಅಜಯ್​ ದೇವಗನ್​

ಶಾರುಖ್​ ಖಾನ್​ ಅವರಿಗೆ ಕೆಲವು ವರ್ಷಗಳ ಕಾಲ ಗೆಲುವು ಎಂಬುದು ಮರೀಚಿಕೆ ಆಗಿತ್ತು. ಮಾಡಿದ ಎಲ್ಲ ಸಿನಿಮಾಗಳು ಸಾಲು ಸಾಲಾಗಿ ಸೋಲುತ್ತಿದ್ದವು. ಎಷ್ಟೇ ಡಿಫರೆಂಟ್​ ಪ್ರಯತ್ನ ಮಾಡಿದರೂ ಪ್ರೇಕ್ಷಕರು ಕೈ ಹಿಡಿಯುತ್ತಿರಲಿಲ್ಲ. ಇನ್ನೇನು ಶಾರುಖ್​ ಖಾನ್​ ಅವರ ವೃತ್ತಿ ಜೀವನ ಅಂತ್ಯವಾಯ್ತು ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ 2023ರಲ್ಲಿ ಅವರು ಕಮಾಲ್​ ಮಾಡಿದರು. ‘ಪಠಾಣ್​’ ಮತ್ತು ‘ಜವಾನ್​’ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಹೊಸ ದಾಖಲೆ ಬರೆದವು. ‘ಡಂಕಿ’ ಸಿನಿಮಾ ಸಮಾಧಾನಕರ ರೀತಿಯಲ್ಲಿ ಕಲೆಕ್ಷನ್​ ಮಾಡಿತು. ಶಾರುಖ್​ ಖಾನ್​ ಅವರ ಮುಂದಿನ ಸಿನಿಮಾಗಾಗಿ ಫ್ಯಾನ್ಸ್​ ಕಾಯುತ್ತಿದ್ದಾರೆ. ಶಾರುಖ್​ ಖಾನ್​ ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us