21 ಕೋಟಿ ರೂ. ಬೆಲೆಯ ವಾಚ್ ಧರಿಸಿ ಎಲ್ಲರನ್ನೂ ದಂಗುಬಡಿಸಿದ ಶಾರುಖ್ ಖಾನ್

ಶ್ರೀಮಂತಿಕೆಯಲ್ಲಿ ಶಾರುಖ್ ಖಾನ್ ಅವರಿಗೆ ಯಾವುದೇ ಕೊರತೆ ಇಲ್ಲ. ಬರೋಬ್ಬರಿ 21 ಕೋಟಿ ರೂಪಾಯಿ ಬೆಲೆ ಬಾಳುವ ವಾಚ್ ಧರಿಸಿ ಅವರು ಪೋಸ್ ನೀಡಿದ್ದಾರೆ. ‘ಮೆಟ್ ಗಾಲಾ’ ಇವೆಂಟ್​ನಲ್ಲಿ ಇದೇ ಮೊದಲ ಬಾರಿಗೆ ಹಾಜರಿ ಹಾಕಿದ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

21 ಕೋಟಿ ರೂ. ಬೆಲೆಯ ವಾಚ್ ಧರಿಸಿ ಎಲ್ಲರನ್ನೂ ದಂಗುಬಡಿಸಿದ ಶಾರುಖ್ ಖಾನ್
Shah Rukh Khan

Updated on: May 06, 2025 | 9:48 PM

ಜಗತ್ತಿನ ಶ್ರೀಮಂತ ನಟರಲ್ಲಿ ಶಾರುಖ್ ಖಾನ್ (Shah Rukh Khan) ಕೂಡ ಇದ್ದಾರೆ. ಅವರ ಬಳಿ ಹಲವು ಐಷಾರಾಮಿ ವಸ್ತುಗಳು ಇವೆ. ಜಗತ್ತಿನ ಹಲವು ಕಡೆಗಳಲ್ಲಿ ಅವರು ಆಸ್ತಿ ಹೊಂದಿದ್ದಾರೆ. ಇದೇ ಮೊದಲ ಬಾರಿಗೆ ಶಾರುಖ್ ಖಾನ್ ಅವರು ಮೆಟ್ ಗಾಲಾ (Met Gala) ಇವೆಂಟ್​ನಲ್ಲಿ ಭಾಗಿ ಆಗಿದ್ದಾರೆ. ಅಮೆರಿಕದಲ್ಲಿ ವರ್ಷಕ್ಕೆ ಒಮ್ಮೆ ನಡೆಯುವ ಈ ಫ್ಯಾಷನ್ ಹಬ್ಬದಲ್ಲಿ ಅವರು ಪಾಲ್ಗೊಂಡಿದ್ದಾರೆ. ಭಾರತದಿಂದ ಮೆಟ್​ ಗಾಲಾದಲ್ಲಿ ಭಾಗಿಯಾದ ಮೊದಲ ನಟ ಎಂಬ ಖ್ಯಾತಿಗೆ ಶಾರುಖ್ ಖಾನ್ ಪಾತ್ರರಾಗಿದ್ದಾರೆ. ಈ ಇವೆಂಟ್​ನಲ್ಲಿ ಶಾರುಖ್ ಖಾನ್ ಧರಿಸಿದ್​ದ ವಾಚ್ (Shah Rukh Khan Luxury Watch) ಗಮನ ಸೆಳೆದಿದೆ.

ಇದೇ ಮೊದಲ ಬಾರಿಗೆ ಮೆಟ್​ ಗಾಲಾಗೆ ಹೋಗುತ್ತಿರುವುದು ಎಂದರೆ ಶಾರುಖ್ ಖಾನ್ ಅವರ ಲುಕ್ ವಿಶೇಷವಾಗಿರಲೇಬೇಕು. ಅದಕ್ಕಾಗಿ ಅವರು ಸಭ್ಯಸಾಚಿ ವಿನ್ಯಾಸ ಮಾಡಿದ ಕಾಸ್​ಟ್ಯೂಮ್ ಧರಿಸಿ ಬಂದಿದ್ದಾರೆ. ಕೊರಳಿನಲ್ಲಿ ‘ಕೆ’ ಅಕ್ಷರ ಹೈಲೈಟ್ ಆಗುವಂತಹ ಲಾಕೆಟ್ ಧರಿಸಿದ್ದಾರೆ. ಆದರೆ ಇದೆಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಶಾರುಖ್ ಖಾನ್ ಧರಿಸಿದ್ದ ಲಕ್ಷುರಿ ವಾಚ್.

ಇದನ್ನೂ ಓದಿ
ಹೊಸ ಮನೆಗೆ ವಾಸ್ತವ್ಯ ಬದಲಿಸಿದ ಶಾರುಖ್ ಖಾನ್, ಕೊಡುತ್ತಿರುವ ಬಾಡಿಗೆ ಎಷ್ಟು?
‘ಕಾಶ್ಮೀರಕ್ಕೆ ಯಾವಾಗಲೂ ಹೋಗೋಲ್ಲ’; ಗಟ್ಟಿ ನಿರ್ಧಾರ ಮಾಡಿದ್ದ ಶಾರುಖ್
ಐಶಾರಾಮಿ ಮನೆ ‘ಮನ್ನತ್’ ಬಿಟ್ಟು ಬಾಡಿಗೆ ಮನೆಗೆ ಹೋಗುತ್ತಿರುವುದೇಕೆ ಶಾರುಖ್
ಸಾಫ್ಟ್ ಡ್ರಿಂಕ್ಸ್ ಜಾಹೀರಾತು ಮಾಡಬೇಡಿ ಎಂದವರಿಗೆ ಶಾರುಖ್ ಉತ್ತರ ಏನು?

ಹೌದು, ಶಾರುಖ್ ಖಾನ್ ಅವರು ಪ್ರತಿಷ್ಠಿತ ‘ಪಟೇಕ್ ಫಿಲಿಪ್’ ಕಂಪನಿಯ ಅತಿ ದುಬಾರಿ ಕೈ ಗಡಿಯಾರವನ್ನು ಧರಿಸಿದ್ದಾರೆ. ‘ಪಟೇಕ್ ಫಿಲಿಪ್ ಗ್ರ್ಯಾಂಡ್ ಕಾಂಪ್ಲಿಕೇಷನ್ 6300ಜಿ’ ಹೆಸರಿನ ಈ ವಾಚ್ ಬೆಲೆ ಬರೋಬ್ಬರಿ 21 ಕೋಟಿ ರೂಪಾಯಿ! ಶಾರುಖ್ ಖಾನ್ ಅವರು ಈ ವಾಚ್ ಧರಿಸಿ ಬಂದಿದ್ದನ್ನು ಕಂಡು ವಿದೇಶಿ ಮಂದಿ ಕೂಡ ಹೌಹಾರಿದ್ದಾರೆ.

ಇಷ್ಟೆಲ್ಲ ಅದ್ದೂರಿತನ ತೋರಿಸಿದರೂ ಕೂಡ ವಿದೇಶದ ಮಾಧ್ಯಮಗಳಿಗೆ ಶಾರುಖ್ ಖಾನ್ ಯಾರು ಎಂಬುದು ಗೊತ್ತಾಗಿಲ್ಲ. ಮೆಟ್ ಗಾಲಾದ ಬ್ಲ್ಯೂ ಕಾರ್ಪೆಟ್​ನಲ್ಲಿ ಹೆಜ್ಜೆ ಹಾಕಿದ ಬಳಿಕ ಶಾರುಖ್ ಖಾನ್ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಆಗ ‘ನೀವು ಯಾರು’ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದರು! ಅದಕ್ಕೆ ಶಾರುಖ್ ಸಿಟ್ಟು ಮಾಡಿಕೊಳ್ಳಲಿಲ್ಲ. ‘ನಾನು ಶಾರುಖ್ ಖಾನ್’ ಎಂದು ಅವರು ಪರಿಚಯ ಮಾಡಿಕೊಂಡರು.

ಇದನ್ನೂ ಓದಿ: ಯಾರು ನೀವು? ಮೆಟ್​ ಗಾಲಾದಲ್ಲಿ ಶಾರುಖ್​ ಖಾನ್​ಗೆ ವಿದೇಶಿ ಮಾಧ್ಯಮಗಳ ಪ್ರಶ್ನೆ

ಶಾರುಖ್ ಖಾನ್ ಮಾತ್ರವಲ್ಲದೇ ಗಾಯಕ ದಿಲ್​ಜಿತ್ ದೊಸಾಂಜ್, ನಟಿ ಕಿಯಾರಾ ಅಡ್ವಾಣಿ, ಫ್ಯಾಷನ್ ಡಿಸೈನರ್ ಸಭ್ಯಸಾಚಿ, ಪ್ರಿಯಾಂಕಾ ಚೋಪ್ರಾ, ಇಶಾ ಅಂಬಾನಿ ಮುಂತಾದವರು ‘ಮೆಟ್ ಗಾಲಾ 2025’ ಇವೆಂಟ್​ನಲ್ಲಿ ಭಾಗಿಯಾಗಿದ್ದಾರೆ. ದಿಲ್ಜಿತ್ ದೊಸಾಂಜ್ ಅವರ ಕಾಸ್ಟ್ಯೂಮ್ ಕೂಡ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.