ಸಾಫ್ಟ್ ಡ್ರಿಂಕ್ಸ್ ವಿಷಕಾರಿ, ಅದರ ಜಾಹೀರಾತು ಮಾಡಬೇಡಿ ಎಂದವರಿಗೆ ಶಾರುಖ್ ಕೊಟ್ಟ ಉತ್ತರ ಏನು?

| Updated By: ರಾಜೇಶ್ ದುಗ್ಗುಮನೆ

Updated on: Jan 03, 2025 | 7:48 AM

ಶಾರುಖ್ ಖಾನ್ ಭಾರತದ ಅತಿ ಶ್ರೀಮಂತ ನಟರಾಗಿದ್ದು, ಅವರ ಆಸ್ತಿ 7200 ಕೋಟಿ ರೂಪಾಯಿಗೂ ಮೀರಿದೆ. ನಟನೆ ಜೊತೆಗೆ, ಅವರ ಬಹುದೊಡ್ಡ ಬ್ರ್ಯಾಂಡ್ ಅನುಮೋದನೆಗಳು ಮತ್ತು ವ್ಯವಹಾರಗಳಿಂದ ಈ ಸಂಪತ್ತನ್ನು ಗಳಿಸಿದ್ದಾರೆ. ತಂಪು ಪಾನೀಯಗಳು ಮತ್ತು ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿದ್ದರೂ, ಅವರು ಆರೋಗ್ಯಕರ ಜೀವನಶೈಲಿಗೆ ಪ್ರಾಮುಖ್ಯತೆ ನೀಡುವುದನ್ನು ಮುಂದುವರಿಸಿದ್ದಾರೆ.

ಸಾಫ್ಟ್ ಡ್ರಿಂಕ್ಸ್ ವಿಷಕಾರಿ, ಅದರ ಜಾಹೀರಾತು ಮಾಡಬೇಡಿ ಎಂದವರಿಗೆ ಶಾರುಖ್ ಕೊಟ್ಟ ಉತ್ತರ ಏನು?
ಶಾರುಖ್
Follow us on

ಶಾರುಖ್ ಖಾನ್ ಅವರು ಭಾರತದ ಶ್ರೀಮಂತ ನಟರಲ್ಲಿ ಮೊದಲಿದ್ದಾರೆ. ಅವರ ಆಸ್ತಿ 7,200 ಕೋಟಿ ರೂಪಾಯಿಗೂ ಅಧಿಕವಾಗಿದೆ. ಶಾರುಖ್ ಖಾನ್ ಅವರು ಇಷ್ಟೊಂದು ಶ್ರೀಮಂತ ಆಗಲು ಕಾರಣವೂ ಇದೆ. ಅವರು ನಟನೆಯ ಜೊತೆಗೆ ಉದ್ಯಮದ ಕಡೆ ಹೆಚ್ಚು ಒಲವು ತೋರಿಸಿದ್ದಾರೆ. ಅವರು ಯಾವುದೇ ಜಾಹೀರಾತು ಸಿಕ್ಕರೂ ಮಾಡುತ್ತಾರೆ ಮತ್ತು ಅದಕ್ಕೆ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಶಾರುಖ್ ಖಾನ್ ಅವರು ತಂಪು ಪಾನೀಯಾ, ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿದ್ದರು. ಇವುಗಳು ವಿಷಕಾರಿ ಎಂದು ಗೊತ್ತಿದ್ದರೂ ಶಾರುಖ್ ಖಾನ್ ಅವುಗಳ ಪ್ರಚಾರ ಮಾಡೋದೇಕೆ ಎಂಬ ಬಗ್ಗೆ ಈ ಮೊದಲು ಮಾತನಾಡಿದ್ದರು.

ಅದು 2006ರ ಸಮಯ. ಶಾರುಖ್ ಖಾನ್ ಅವರು ತಂಪು ಪಾನೀಯಗಳ ಜಾಹೀರಾತನ್ನು ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಆಗ ಶಾರುಖ್ ಖಾನ್ ಅವರು ನೇರವಾಗಿ ಉತ್ತರ ನೀಡಿದ್ದರು. ‘ಈ ತಂಪು ಪಾನೀಯಗಳನ್ನು ನಿಷೇಧಿಸಿ ಎಂದು ನಾನು ಅವುಗಳಿಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಮಾಡುತ್ತೇನೆ. ನಮ್ಮ ದೇಶದಲ್ಲಿ ಮಾರಾಟ ಮಾಡಲು ಬಿಡಬೇಡಿ. ಇದು ಮಕ್ಕಳಿಗೆ ಕೆಟ್ಟದು ಎಂದು ನೀವು ಭಾವಿಸಿದರೆ, ಅದನ್ನು ನಿಷೇಧಿಸಿ’ ಎಂದಿದ್ದರು ಶಾರುಖ್ ಖಾನ್.

‘ಧೂಮಪಾನ ಕೆಟ್ಟದ್ದು. ಹಾಗಿದ್ದರೆ ಈ ದೇಶದಲ್ಲಿ ಸಿಗರೇಟ್ ಉತ್ಪಾದನೆ ನಡೆಯಲು ಬಿಡಬೇಡಿ. ತಂಪು ಪಾನೀಯಗಳು ಕೆಟ್ಟವು ಎಂದು ನೀವು ಭಾವಿಸಿದರೆ, ಅವುಗಳು ಉತ್ಪಾದನೆ ಆಗಲು ಬಿಡಬೇಡಿ. ಇದು ನಮ್ಮ ಜನರಿಗೆ ವಿಷಪೂರಿತವಾಗಿದ್ದರೆ, ಅದನ್ನು ಭಾರತದಲ್ಲಿ ತಯಾರಿಸಲು ಬಿಡಬೇಡಿ’ ಎಂದಿದ್ದರು ಶಾರುಖ್ ಖಾನ್.

‘ನೀವು ಅದನ್ನು ನಿಲ್ಲಿಸುತ್ತಿಲ್ಲ ಏಕೆಂದರೆ ಅದು ನಿಮಗೆ ಆದಾಯವನ್ನು ನೀಡುತ್ತದೆ. ಕೆಲವು ಉತ್ಪನ್ನಗಳು ಹಾನಿಕಾರಕವೆಂದು ನೀವು ಭಾವಿಸಿದರೆ ನೀವು ಅವುಗಳನ್ನು ನಿಲ್ಲಿಸುತ್ತಿಲ್ಲ. ಏಕೆಂದರೆ ಅವು ಸರ್ಕಾರಕ್ಕೆ ಆದಾಯ ನೀಡುತ್ತದೆ. ನನ್ನ ಆದಾಯವನ್ನು ನಿಲ್ಲಿಸಬೇಡಿ. ನಾನೊಬ್ಬ ನಟ. ನಾನು ಒಂದು ಕೆಲಸ ಮಾಡಿ ಅದರಿಂದ ಆದಾಯ ಪಡೆಯಬೇಕು. ಮತ್ತು ಸ್ಪಷ್ಟವಾಗಿ, ನನ್ನ ಪ್ರಕಾರ, ಏನಾದರೂ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ಅದನ್ನು ನಿಲ್ಲಿಸಿ. ಯಾವುದೇ ತೊಂದರೆ ಇಲ್ಲ’ ಎಂದಿದ್ದರು ಶಾರುಖ್ ಖಾನ್.

ಇದನ್ನೂ ಓದಿ: Fact Check: ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ ಶಾರುಖ್ ಖಾನ್ ಫೋಟೋ ವೈರಲ್

ಶಾರುಖ್ ಖಾನ್ ಪಾನ್ ಮಸಾಲಾ ಜಾಹೀರಾತು ಮಾಡುತ್ತಾರೆ ಎಂದಾಗ ಟೀಕೆ ಎದುರಾಯಿತು. ಆದರೆ, ಇದಕ್ಕೆ ಅವರು ತಲೆಕೆಡಿಸಿಕೊಂಡಿಲ್ಲ. ಅಕ್ಷಯ್ ಕುಮಾರ್​ಗೂ ಟೀಕೆ ಎದುರಾಯಿತು. ಅವರು ಜಾಹೀರಾತನ್ನೇ ತೊರೆದರು. ಆದರೆ, ಶಾರುಖ್ ಖಾನ್ ಆ ರೀತಿ ಮಾಡಿಲ್ಲ. ಅವರು ಈಗಲೂ ಅಂತಹ ಜಾಹೀರಾತಲ್ಲಿ ಮುಂದುವರಿಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Fri, 3 January 25