2 ದಿನಕ್ಕೆ 34 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’; 3ನೇ ದಿನ ಮ್ಯಾಜಿಕ್​ ನಿರೀಕ್ಷೆ

|

Updated on: Mar 10, 2024 | 5:09 PM

‘ಶೈತಾನ್​’ ಸಿನಿಮಾ ಉತ್ತಮ ಓಪನಿಂಗ್​ ಪಡೆದುಕೊಂಡಿದೆ. ಶುಕ್ರವಾರ ಮತ್ತು ಶನಿವಾರ ಈ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಿದೆ. ಮೂರನೇ ದಿನ ಕೂಡ ಗಳಿಕೆಯಲ್ಲಿ ಏರಿಕೆ ಕಾಣುವ ಸಾಧ್ಯತೆ ದಟ್ಟವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ‘ಶೈತಾನ್’ ಸಿನಿಮಾ ಆರ್ಭಟಿಸುತ್ತಿದೆ. ಈ ಚಿತ್ರದ ಮೂಲಕ ಅಜಯ್​ ದೇವಗನ್​ ಅವರಿಗೆ ಈ ವರ್ಷದ ಮೊದಲ ಗೆಲುವು ಸಿಕ್ಕಂತಾಗಿದೆ.

2 ದಿನಕ್ಕೆ 34 ಕೋಟಿ ರೂಪಾಯಿ ಗಳಿಸಿದ ‘ಶೈತಾನ್​’; 3ನೇ ದಿನ ಮ್ಯಾಜಿಕ್​ ನಿರೀಕ್ಷೆ
ಆರ್​. ಮಾಧವನ್​, ಅಜಯ್​ ದೇವಗನ್​
Follow us on

ನಟ ಅಜಯ್​ ದೇವಗನ್​ (Ajay Devgn) ಅವರು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2024ರ ವರ್ಷ ಅವರಿಗೆ ಆಶಾದಾಯಕ ಆಗಿರಲಿದೆ. ಇತ್ತೀಚೆಗೆ ತೆರೆಕಂಡ ‘ಶೈತಾನ್​’ (Shaitan) ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಜಯ್​ ದೇವಗನ್​ ಎದುರು ವಿಲನ್​ ಆಗಿ ಆರ್. ಮಾಧವನ್​ ಅಬ್ಬರಿಸಿದ್ದಾರೆ. ಅಜಯ್​ ದೇವಗನ್​ ಪತ್ನಿಯ ಪಾತ್ರದಲ್ಲಿ ಜ್ಯೋತಿಕಾ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ಮೊದಲ ಎರಡು ದಿನ ‘ಶೈತಾನ್​’ ಚಿತ್ರಕ್ಕೆ ಉತ್ತಮ ಕಲೆಕ್ಷನ್​ (Shaitan Box Office Collection) ಆಗಿದೆ. 3ನೇ ದಿನ ಒಂದು ಮ್ಯಾಜಿಕ್​ ಆಗುವ ನಿರೀಕ್ಷೆ ಇದೆ. ಬೆಚ್ಚಿ ಬೀಳಿಸುವಂತಹ ಹಾರರ್​ ಕಥಾಹಂದರ ಇರುವ ‘ಶೈತಾನ್​’ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

ಶಿವರಾತ್ರಿ ಹಬ್ಬದ ದಿನ (ಮಾರ್ಚ್​ 8) ‘ಶೈತಾನ್​’ ಸಿನಿಮಾ ಬಿಡುಗಡೆ ಆಯಿತು. ಹಬ್ಬದ ದಿನವಾದ್ದರಿಂದ ಹಲವು ಕಡೆಗಳಲ್ಲಿ ರಜೆ ಇತ್ತು. ಆದ್ದರಿಂದ ಸಿನಿಮಾದ ಕಲೆಕ್ಷನ್​ಗೆ ಅನುಕೂಲ ಆಯಿತು. ಮೊದಲ ದಿನ ಈ ಚಿತ್ರ 15.21 ಕೋಟಿ ರೂಪಾಯಿ ಗಳಿಸಿತು. ಎರಡನೇ ದಿನವಾದ ಶನಿವಾರ ವೀಕೆಂಡ್​ ಆದ್ದರಿಂದ ಭರ್ಜರಿ ಕಲೆಕ್ಷನ್​ ಆಯಿತು. ಅಂದು (ಮಾರ್ಚ್​ 09) ‘ಶೈತಾನ್​’ ಸಿನಿಮಾ ಬರೋಬ್ಬರಿ 19.18 ಕೋಟಿ ರೂಪಾಯಿ ಗಳಿಸಿತು.

ಇದನ್ನೂ ಓದಿ: ‘ನನಗೂ ದೆವ್ವದ​ ಅನುಭವ ಆಗಿದೆ, ಆದರೆ ನಾನು ಮಾತಾಡಲ್ಲ’: ಅಜಯ್​ ದೇವಗನ್​

ಮೂರನೇ ದಿನವಾರ ಮಾರ್ಚ್​ 10ರಂದು ಭಾನುವಾರ ಈ ಸಿನಿಮಾ 25 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಪ್ರೇಕ್ಷಕರಿಂದ ಬಾಯಿ ಮಾತಿನ ಪ್ರಚಾರ ಚೆನ್ನಾಗಿ ಸಿಗುತ್ತಿದೆ. ಆದ್ದರಿಂದ ಭಾನುವಾರ ಬಾಕ್ಸ್​ ಆಫೀಸ್​ನಲ್ಲಿ ಮ್ಯಾಜಿಕ್​ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಸಿನಿಮಾದ ಕಲೆಕ್ಷನ್​ ರಿಪೋರ್ಟ್​ ಬಗ್ಗೆ ಬಾಕ್ಸ್​ ಆಫೀಸ್​ ವಿಶ್ಲೇಷಕ ತರಣ್​ ಆದರ್ಶ್​ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಯುವತಿಯೊಬ್ಬಳನ್ನು ವಶೀಕರಣ ಮಾಡುವ ಕಥೆ ಇರುವ ‘ಶೈತಾನ್​’ ಸಿನಿಮಾದಲ್ಲಿ ಅಜಯ್​ ದೇವಗನ್​ ಅವರ ಪುತ್ರಿಯ ಪಾತ್ರದಲ್ಲಿ ಜಾನಕಿ ಬೋಡಿವಾಲ ನಟಿಸಿದ್ದಾರೆ. ಅವರ ಪಾತ್ರ ಈ ಸಿನಿಮಾದಲ್ಲಿ ಸಖತ್​ ಹೈಲೈಟ್​ ಆಗಿದೆ. ಸಿನಿಮಾ ನೋಡಿದ ಎಲ್ಲರೂ ಜಾನಕಿ ಬೋಡಿವಾಲಾ ಅವರ ನಟನೆಯ ಬಗ್ಗೆ ಮಾತನಾಡುತ್ತಿದ್ದಾರೆ. ‘ದೃಶ್ಯಂ’ ರೀತಿಯೇ ‘ಶೈತಾನ್​’ ಸಿನಿಮಾ ಕೂಡ ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ. ಆರ್​. ಮಾಧವನ್​ ಮತ್ತು ಜ್ಯೋತಿಕಾ ಅವರ ಅಭಿನಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.